ETV Bharat / international

ಚುನಾವಣೆಯಲ್ಲಿ ಅಕ್ರಮ: ಸುಪ್ರೀಂಕೋರ್ಟ್​ ಕದ ತಟ್ಟಲು ಟ್ರಂಪ್​ ನಿರ್ಧಾರ - US President Donald Trump on US Election 2020 Results

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಟ್ರಂಪ್, ನನ್ನ ಮಟ್ಟಿಗೆ, ನಾವು ಈಗಾಗಲೇ ಗೆದ್ದಿದ್ದೇವೆ. ಆದರೆ ಜೋ ಬೈಡನ್ ಚುನಾವಣೆಯನ್ನು ಹೈಜಾಕ್ ಮಾಡಲು ಯತ್ನಿಸುತ್ತಿದ್ದಾರೆ. ಈ ಕುರಿತು ನಾವು ಯುಎಸ್ ಸುಪ್ರೀಂ ಕೋರ್ಟ್​ಗೆ ಹೋಗುತ್ತೇವೆ ಎಂದು ಹೇಳಿದ್ದಾರೆ.

US Election 2020 Results Live News Updates  ಜೋ ಬೈಡನ್​ ವಿರುದ್ಧ ಸುಪ್ರೀಂ ಮೆಟ್ಟಿಲೇರಲಿರುವ ಡೊನಾಲ್ಡ್ ಟ್ರಂಪ್
ಜೋ ಬೈಡನ್​ ವಿರುದ್ಧ ಸುಪ್ರೀಂ ಮೆಟ್ಟಿಲೇರಲಿರುವ ಡೊನಾಲ್ಡ್ ಟ್ರಂಪ್
author img

By

Published : Nov 4, 2020, 1:43 PM IST

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆಯಲ್ಲಿ ಡೆಮೋಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್ ನಡುವೆ ನೇರಾ ನೇರ ಸ್ಪರ್ಧೆ ಏರ್ಪಟ್ಟಿದೆ.

ಚುನಾವಣೆ ಮತ ಎಣಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ನಾವು ಯುಎಸ್ ಸುಪ್ರೀಂ ಕೋರ್ಟ್​ಗೆ ಹೋಗುತ್ತೇವೆ. ಎಲ್ಲ ಮತದಾನ ಪ್ರಕ್ರಿಯೆ ನಿಲ್ಲಿಸಬೇಕೆಂದು ನಾವು ಬಯಸುತ್ತೇವೆ. ನನ್ನ ಮಟ್ಟಿಗೆ, ನಾವು ಈಗಾಗಲೇ ಗೆದ್ದಿದ್ದೇವೆ. ಆದರೆ ಜೋ ಬೈಡನ್ ಚುನಾವಣೆಯನ್ನು ಹೈಜಾಕ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಜೋ ಬೈಡನ್​ ವಿರುದ್ಧ ಸುಪ್ರೀಂ ಮೆಟ್ಟಿಲೇರಲಿರುವ ಡೊನಾಲ್ಡ್ ಟ್ರಂಪ್

ನಾವು ಈ ಚುನಾವಣೆಯಲ್ಲಿ ಗೆಲ್ಲಲು ಹೊರಟಿದ್ದೆವು. ನನ್ನ ಪ್ರಕಾರ ನಾವು ಗೆದ್ದಿದ್ದೇವೆ. ದೇಶದ ಒಳಿತಿಗಾಗಿ ಸಮಗ್ರತೆ ಖಚಿತಪಡಿಸುವುದು ನಮ್ಮ ಗುರಿ. ಕಾನೂನು ಸರಿಯಾದ ರೀತಿಯಲ್ಲಿ ಬಳಸಬೇಕೆಂದು ನಾವು ಬಯಸುತ್ತೇವೆ. ಆದ್ದರಿಂದ, ನಾವು ಯುಎಸ್ ಸುಪ್ರೀಂ ಕೋರ್ಟ್​ಗೆ ಹೋಗುತ್ತೇವೆ. ಬೈಡನ್​ ಅಭಿಯಾನವು ಅಮೆರಿಕನ್ ಸಾರ್ವಜನಿಕರನ್ನ ವಂಚನೆ ಮಾಡಿದೆ ಎಂದು ಅವರು ಆರೋಪಿಸಿದರು.

  • We are up BIG, but they are trying to STEAL the Election. We will never let them do it. Votes cannot be cast after the Polls are closed!

    — Donald J. Trump (@realDonaldTrump) November 4, 2020 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್​ ಸಹ ಮಾಡಿರುವ ಟ್ರಂಪ್, ನಾವು ಗೆದ್ದಿದ್ದೇವೆ. ಆದರೆ ಜೋ ಬೈಡನ್​ ಚುನಾವಣೆಯನ್ನು ಹೈಜಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಚುನಾವಣೆ ಮುಕ್ತಾಯಗೊಂಡ ಬಳಿಕ ಮತದಾನ ಮಾಡಲು ಅವಕಾಶವಿರುವುದಿಲ್ಲ ಎಂದು ಇದೇ ವೇಳೆ ಅವರು ತಿರುಗೇಟು ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.