ವಾಷಿಂಗ್ಟನ್ (ಯುಎಸ್): ಅಮೆರಿಕ ನೂತನ ಚುನಾಯಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಧಿಕೃತವಾಗಿ ಚುಕ್ಕಾಣಿ ಹಿಡಿಯುವ ಮೊದಲೇ ಹೊಸ ಮಸೂದೆ ತರುವ ಸೂಚನೆ ನೀಡಿದ್ದಾರೆ.
ಅಮೆರಿಕದಲ್ಲಿರುವ ದಾಖಲೆ ರಹಿತ 11 ಮಿಲಿಯನ್ ಜನರಿಗೆ ಪೌರತ್ವ ನೀಡುವ ಮಸೂದೆ ಜಾರಿ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಕಚೇರಿಗೆ ಬಂದಾಗ ಮೊದಲಿಗೆ ಮಾಡುವ ಕೆಲಸವೇನೆಂದರೆ ಅಮೆರಿಕನ್ನರನ್ನು ಕೊರೊನಾದಿಂದ ರಕ್ಷಿಸುವುದು ಹಾಗೂ ಟ್ರಂಪ್ ಹೊರಬಂದಿರುವ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಪುನಃ ಸೇರ್ಪಡೆಗೊಳ್ಳುವುದಾಗಿ ತಮ್ಮ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಸಣ್ಣ ವಯಸ್ಸಿನಲ್ಲಿಯೇ ಅಮೆರಿಕಕ್ಕೆ ಆಗಮಿಸಿ ಶಿಕ್ಷಣ ಉದ್ಯೋಗ ಪಡೆದುಕೊಂಡು, ದಾಖಲೆ ರಹಿತವಾಗಿರುವವರಿಗೆ ಈ ಕಾಯ್ದೆಯಡಿ ಪೌರತ್ವ ನೀಡಲಾಗುತ್ತಿದೆ. ಅವರು ದೇಶದಿಂದ ಹೊರಹಾಕುವ ಯಾವುದೇ ಭೀತಿಯೂ ಇಲ್ಲದೇ, ರಕ್ಷಣೆ ನೀಡುವಲ್ಲಿ ಕಾಯ್ದೆ ಸಹಾಯ ಮಾಡಲಿದೆ ಎಂದಿದ್ದಾರೆ.
ಕನಸು ಕಟ್ಟಿಕೊಂಡು ಅಮೆರಿಕಕ್ಕೆ ಬರುವ ಯುವಕರಿಗೆ ತಾತ್ಕಾಲಿಕವಾಗಿ ರಕ್ಷಣೆ ನೀಡಲು ಒಬಾಮಾ ಆಡಳಿತವು ಡಿಫರ್ಡ್ ಆ್ಯಕ್ಷನ್ ಫಾರ್ ಚೈಲ್ಡ್ವುಡ್ ಕಾರ್ಯಕ್ರಮ ಜಾರಿ ಮಾಡಿತ್ತು, ಆದರೆ, ಟ್ರಂಪ್ ಸರ್ಕಾರ ಈ ಕಾಯ್ದೆಯನ್ನು ರದ್ದು ಮಾಡಲು ಯೋಜಿಸಿತ್ತು.
ಇದನ್ನೂ ಓದಿ: ಶ್ವೇತಭವನದ ಡಿಜಿಟಲ್ ಟೀಂನಲ್ಲಿ ಉನ್ನತ ಹುದ್ದೆ ಪಡೆದ ಭಾರತ ಮೂಲದ ಆಯಿಷಾ ಶಾ