ನ್ಯೂಯಾರ್ಕ್ : ವಿಶಾಖಪಟ್ಟಣಂನ ರಾಸಾಯನಿಕ ಸ್ಥಾವರದಿಂದ ಅನಿಲ ಸೋರಿಕೆಯು ಸಾವಿರಾರು ಜನರ ಮೇಲೆ ಪರಿಣಾಮ ಬೀರಿದೆ. ಈ ಕುರಿತು ಸ್ಥಳೀಯ ಅಧಿಕಾರಿಗಳು ಸಂಪೂರ್ಣ ತನಿಖೆ ಮಾಡಬೇಕು ಎಂದು ಯುಎನ್ ವಕ್ತಾರ ಹೇಳಿದ್ದಾರೆ.
"ನಾವು ಸಂತ್ರಸ್ತರಿಗೆ ಸಂತಾಪ ಸೂಚಿಸುತ್ತೇವೆ. ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇವೆ. ಈ ಘಟನೆಯ ಕುರಿತು ಸ್ಥಳೀಯ ಅಧಿಕಾರಿಗಳು ಸಂಪೂರ್ಣವಾಗಿ ತನಿಖೆ ಮಾಡಬೇಕಾಗಿದೆ" ಎಂದು ಯುಎನ್ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.
ನಿನ್ನೆ ಮುಂಜಾನೆ 2.30ಕ್ಕೆ ವಿಶಾಖಪಟ್ಟಣಂ ಬಳಿಯ ಆರ್‌ಆರ್ ವೆಂಕಟಪುರಂ ಗ್ರಾಮದಲ್ಲಿರುವ ಎಲ್‌ಜಿ ಪಾಲಿಮರ್ಸ್ ಸ್ಥಾವರದಿಂದ ಅನಿಲ ಸೋರಿಕೆಯಾಗಿತ್ತು. ಇದರಿಂದ 12 ಜನ ಮೃತಪಟ್ಟಿದ್ದು, ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.