ETV Bharat / international

1ಲಕ್ಷ ಬಲಿಪಡೆಯುವತ್ತ ಸಾಗಿದ ಕೊರೊನಾ ಮಹಾಮಾರಿ: ಮಂಕಾದ ಈಸ್ಟರ್​ ಆಚರಣೆ

ಕೊರೊನಾ ವೈರಸ್​ ಮಹಾಮಾರಿಯಿಂದಾಗಿ ಪ್ಯಾರಿಸ್​ನ ನೊಟ್ರೆ ಡೇಮ್​ ಕ್ಯಾಥಡ್ರಲ್​ನಲ್ಲಿ ನಡೆಯಬೇಕಾಗಿದ್ದ ಪ್ರಸಿದ್ಧ ಗುಡ್​​​ಫ್ರೈಡೇ ಸಮಾರಂಭ ಈ ಬಾರಿ ನಿರ್ಬಂಧಿಸಲಾಗಿದೆ. ಕೊರೊನಾ ವೈರಸ್ ಹರಡುವ ಭೀತಿಯಿಂದ ಸಾರ್ವಜನಕರಿಗೆ ಇಲ್ಲಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

Virus mars Easter holidays as deaths near 1,00,000
ಕೊರೊನಾ: 1 ಲಕ್ಷ ಜನರ ಬಲಿ ಪಡೆದ ಮಹಾಮಾರಿ- ಮಂಕಾದ ಈಸ್ಟರ್ ಹಬ್ಬ
author img

By

Published : Apr 10, 2020, 10:54 PM IST

ರೋಮ್​( ಇಟಲಿ): ವಿಶ್ವಾದ್ಯಂತ ಕೊರೊನಾ ವೈರಸ್​ಗೆ ಬಲಿಯಾದವರ ಸಂಖ್ಯೆ 1 ಲಕ್ಷದ ಹತ್ತಿರಕ್ಕೆ ಬಂದು ನಿಂತಿದೆ. ವಿಶ್ವದ ಬಲಿಷ್ಟ ರಾಷ್ಟ್ರಗಳಿಂದು ವೈರಸ್ ವಿರುದ್ಧ ಹೋರಾಡಲು ನಿಂತಿವೆ. ಈ ನಡುವೆ ವಿಶ್ವದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವನಿಟ್ಟಿನಲ್ಲಿ ಲಾಕ್​ಡೌನ್ ನಿಯಮ ಹೇರಲಾಗಿದ್ದು, ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಈ ಬಾರಿಯ ಈಸ್ಟರ್ ರಜೆಯನ್ನು ಮನೆಯಲ್ಲಿಯೇ ಕಳೆದಿದ್ದಾರೆ.

ಮಧ್ಯಪ್ರಾಚ್ಯ, ಯೂರೋಪ್​ ಹಾಗೂ ಏಷ್ಯಾದದಲ್ಲಿ ಗುಡ್​ ಫ್ರೈಡೇ ಅಥವಾ ಈಸ್ಟರ್​​ನ ವೇಳೆ ಜನರಿಂದ ತುಂಬಿರುತ್ತಿದ್ದ ನಗರಗಳು ಖಾಲಿಯಾಗಿವೆ.

ಪ್ಯಾರಿಸ್​​ನ​ ಈ ನೊಟ್ರೆ ಡೇಮ್​ ಕಳೆದ ವರ್ಷ ಬೆಂಕಿ ಅವಘಡದಲ್ಲಿ ಭಾಗಶಃ ನಾಶವಾಗಿದೆ. ಆದರೆ ವಿಶೇಷ ಗುಡ್​ಫ್ರೈಡೇ ಸಮಾರಂಭವನ್ನು ಇಲ್ಲಿಯೇ ನಡೆಸಲಾಗುತ್ತಿದೆ. ಆದರೆ, ಈ ಬಾರಿ ಫ್ರಾನ್ಸ್​​ನಲ್ಲಿ ಕೊರೊನಾ ಮಹಾಮಾರಿ ಮರಣ ಮೃದಂಗ ಬಾರಿಸಿದ್ದು 10 ಸಾವಿರಕ್ಕೂ ಹೆಚ್ಚು ಬಲಿ ಪಡೆದಿದೆ. ಹೀಗಾಗಿ ಈ ಕಾರ್ಯಕ್ರಮವನ್ನ ನಿರ್ಬಂಧಿಸಲಾಗಿದೆ.

ಇನ್ನೂ ಈ ಮಹಾಮಾರಿಯ ಕಾರಣದಿಂದಾಗಿ ಅಮೆರಿಕಾದಲ್ಲಿ 1.7ಕೋಟಿ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅಲ್ಲಿಯೂ 15 ಸಾವಿರ ಜನ ಕೊರೊನಾಕ್ಕೆ ಬಲಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.