ETV Bharat / international

ಜೊವೆನೆಲ್​ ಮೋಸ್​​ ಹತ್ಯೆ.. ಹೈಟಿಯಲ್ಲಿ ಪರಿಸ್ಥಿತಿ ಉದ್ವಿಗ್ನ: ನೂತನ ಅಧ್ಯಕ್ಷರಾಗಿ ಹೆನ್ರಿ ಪದಗ್ರಹಣ! - Haiti

ಜೊವೆನೆಲ್​ ಮೋಸ್​​ ಹತ್ಯೆಯಿಂದಾಗಿ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಿಂಸಾತ್ಮಕ ಘಟನೆಗಳು ಜರುಗುತ್ತಿವೆ.

ಜೊವೆನೆಲ್​ ಮೋಸ್​​
ಜೊವೆನೆಲ್​ ಮೋಸ್​​
author img

By

Published : Jul 22, 2021, 8:40 AM IST

ಕ್ವಾರ್ಟರ್-ಮೊರಿನ್ (ಹೈಟಿ): ಅಧ್ಯಕ್ಷ ಜೊವೆನೆಲ್​ ಮೋಸ್​​ ಹತ್ಯೆಯಿಂದಾಗಿ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮೋಸ್​ ಹತ್ಯೆಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಅವರ ಸಮುದಾಯದವರು ದಂಗೆ ಎದ್ದಿದ್ದು, ರಸ್ತೆಯಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೀತಿಯಿಂದ ಊರು ತೊರೆಯುತ್ತಿರುವ ಜನ

ಅಲ್ಲದೇ, ವಾಹನಗಳ ಸಂಚಾರಗಳಿಗೂ ನಿರ್ಬಂಧ ವಿಧಿಸಿದ್ದು, ಗುಂಪುಗಳು ಮಾರಕಾಸ್ತ್ರಗಳಿಂದ ಜನರಿಗೆ ಬೆದರಿಕೆಯೊಡುತ್ತಿದ್ದಾರೆ. ಹಲವೆಡೆ ಮೋಸ್​ಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಕೆಲವೆಡೆ ಹಿಂಸಾತ್ಮಕ ಘಟನೆಗಳು ಜರುಗುತ್ತಿರುವುದು ಜನರಲ್ಲಿ ಭೀತಿ ಉಂಟು ಮಾಡಿದೆ. ಹಿಂಸಾತ್ಮಕ ಘಟನೆಗಳಿಂದಾಗಿ ಸಾವಿರಾರು ಕಾರ್ಮಿಕರು, ಕೆಲಸ ಬಿಟ್ಟು ಊರುಗಳನ್ನು ತೊರೆಯುತ್ತಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೂತನ ಅಧ್ಯಕ್ಷರಾಗಿ ಹೆನ್ರಿ

ಮಂಗಳವಾರವಷ್ಟೇ ಹೈಟಿಯ ನೂತನ ಅಧ್ಯಕ್ಷರಾಗಿ ಏರಿಯಲ್ ಹೆನ್ರಿ ಅಧಿಕಾರ ಸ್ವೀಕರಿಸಿದರು. ವೃತ್ತಿಯಿಂದ ನರರೋಗ ಶಸ್ತ್ರಚಿಕಿತ್ಸಕರಾಗಿರುವ ಹೆನ್ರಿ, ಈ ಮೊದಲು ಸಂಪುಟ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿ ಅವರು, ‘ನಾವು ಮಾಡಬೇಕಾದ ಕಾರ್ಯಗಳು ಬಹಳ ಕಠಿಣ ಹಾಗೂ ಸಂಕೀರ್ಣವಾದವುಗಳಾಗಿವೆ. ಎಲ್ಲರೂ ಒಗ್ಗಟ್ಟಿನಿಂದ ಈ ಸವಾಲುಗಳನ್ನು ಎದುರಿಸೋಣ’ ಎಂದರು. ‘ಮಾತುಕತೆ, ಚರ್ಚೆಯಲ್ಲಿ ನನಗೆ ನಂಬಿಕೆ ಇದೆ. ಹೀಗಾಗಿ ಯಾವುದೇ ವಿಷಯ ಕುರಿತು ನಿರ್ಧಾರ ಕೈಗೊಳ್ಳುವ ಮೊದಲು ಒಮ್ಮತ ಮೂಡಿಸಿ, ಮುಂದುವರಿಯುವೆ’ ಎಂದೂ ಹೇಳಿದರು.

ಜೊವೆನೆಲ್‌ ಮೊಯಿಸ್‌ ಅವರ ಹತ್ಯೆ ಕುರಿತು ನಡೆಯುತ್ತಿರುವ ತನಿಖೆಗೆ ಮಿತ್ರ ರಾಷ್ಟ್ರಗಳ ಸಹಕಾರ ಕೋರುವೆ. ಈ ದುಷ್ಕೃತ್ಯಕ್ಕೆ ಕಾರಣರಾದವರಿಗೆ ಶಿಕ್ಷಿಸದೇ ಬಿಡುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.

ಜುಲೈ 7 ರಂದು ಮೊಯಿಸ್ ಹತ್ಯೆ

ಅಧ್ಯಕ್ಷರಾಗಿದ್ದ ಜೊವೆನೆಲ್‌ ಮೊಯಿಸ್‌ ಅವರನ್ನು ಜುಲೈ 7ರಂದು ಮುಂಜಾನೆ ಅವರ ಮನೆಯಲ್ಲಿಯೇ ಸಶಸ್ತ್ರ ವ್ಯಕ್ತಿಗಳ ಗುಂಪು ಹತ್ಯೆ ಮಾಡಿತ್ತು. ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ, ಕ್ಲಾಡ್‌ ಜೋಸೆಫ್ ಅವರು ಹಂಗಾಮಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

26 ಶಂಕಿತರು ವಶಕ್ಕೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಮಾಜಿ ಸೈನಿಕರು ಮತ್ತು ಮೂವರು ಹೈಟಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 26 ಶಂಕಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಏಳು ಪೊಲೀಸ್ ಅಧಿಕಾರಿಗಳನ್ನು ಪ್ರತ್ಯೇಕವಾಗಿರಿಸಲಾಗಿದೆ. ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಮುಖ್ಯಸ್ಥ ಲೋನ್ ಚಾರ್ಲ್ಸ್ ಹೇಳಿದ್ದಾರೆ.

ಇದನ್ನೂ ಓದಿ : ಪಾಕಿಸ್ತಾನದ​​ ಮಾಜಿ ರಾಜತಾಂತ್ರಿಕ ಅಧಿಕಾರಿ ಮಗಳ ಗುಂಡಿಕ್ಕಿ ಕೊಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.