ಬ್ಯಾನಿಂಗ್ (ಯು.ಎಸ್): ಲಾಸ್ ಏಂಜಲೀಸ್‌ನ ಪೂರ್ವ ಭಾಗದಲ್ಲಿ ಪರ್ವತಗಳಲ್ಲಿ ಸಂಭವಿಸಿದ ಕಾಳ್ಗಿಚ್ಚಿನಿಂದಾಗಿ ಸಾವಿರಾರು ಜನ ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ.
ವಾಹನವೊಂದರಿಂದ ಸುಡುವ ಇಂಗಾಲ ಚೆಲ್ಲಿದ ಕಾರಣ ಚೆರ್ರಿ ಕಣಿವೆಯ ಓಕ್ ಗ್ಲೆನ್ ರಸ್ತೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಂತಹ ವಾಹನವನ್ನು ಯಾರಾದರೂ ನೋಡಿದರೆ ತಕ್ಷಣ ತನಿಖಾಧಿಕಾರಿಗಳನ್ನು ಸಂಪರ್ಕಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಅರಣ್ಯ ಮತ್ತು ಅಗ್ನಿಶಾಮಕ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಶುಕ್ರವಾರ ಸಂಜೆ ಬೆಂಕಿ ಭುಗಿಲೆದ್ದಿದ್ದು, 41 ಚದರ ಮೈಲಿಗಿಂತಲೂ ಹೆಚ್ಚು ಪ್ರದೇಶವನ್ನು ಆವರಿಸಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.