ETV Bharat / international

ಯುಎಸ್ ಅಸೋಸಿಯೇಟ್ ಅಟಾರ್ನಿ ಜನರಲ್ ಆಗಿ ಇತಿಹಾಸ ಬರೆದ ಮೊದಲ ಭಾರತೀಯ-ಅಮೆರಿಕನ್‌ ಮಹಿಳೆ - Vanita Gupta appointed as associate attorney general

ಭಾರತೀಯ-ಅಮೆರಿಕನ್ ನಾಗರಿಕ ಹಕ್ಕುಗಳ ವಕೀಲೆ ವನಿತಾ ಗುಪ್ತಾ ಯುಎಸ್​ ನ್ಯಾಯಾಂಗ ವ್ಯವಸ್ಥೆಯ ಮೂರನೇ ಅತಿ ದೊಡ್ಡ ಹುದ್ದೆಯಾದ ಅಸೋಸಿಯೇಟ್ ಅಟಾರ್ನಿ ಜನರಲ್ ಆಗಿ ಆಯ್ಕೆಯಾಗಿದ್ದಾರೆ.

US' associate attorney general Vanita Gupta
ಯುಎಸ್ ಅಸೋಸಿಯೇಟ್ ಅಟಾರ್ನಿ ಜನರಲ್ ವನಿತಾ ಗುಪ್ತಾ
author img

By

Published : Apr 22, 2021, 2:28 PM IST

ವಾಷಿಂಗ್ಟನ್: ಪ್ರಮುಖ ಭಾರತೀಯ-ಅಮೆರಿಕನ್ ನಾಗರಿಕ ಹಕ್ಕುಗಳ ವಕೀಲೆ ವನಿತಾ ಗುಪ್ತಾ ಅವರನ್ನು ಯುಎಸ್ ಸೆನೆಟ್ ಸಹಾಯಕ ಅಟಾರ್ನಿ ಜನರಲ್ ಆಗಿ ನೇಮಕ ಮಾಡಿದೆ. ಈ ಮೂಲಕ ನ್ಯಾಯಾಂಗ ವ್ಯವಸ್ಥೆಯ ಮೂರನೇ ಉನ್ನತ ಸ್ಥಾನವನ್ನು ಪಡೆದ ಮೊದಲ ಕಪ್ಪು ವರ್ಣೀಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ವನಿತಾ ಗುಪ್ತಾ ಪಾತ್ರರಾಗಿದ್ದಾರೆ.

ಸೆನೆಟ್​ನಲ್ಲಿ ಬುಧವಾರ ನಡೆದ ಮತದಾನದಲ್ಲಿ ರಿಪಬ್ಲಿಕನ್ ಸೆನೆಟ್ ಸದಸ್ಯೆ ಮಾರ್ಕೋವ್​​ಸ್ಕಿ ತಮ್ಮ ಪಕ್ಷದ ನಿಲುವಿನಿಂದ ಹೊರಬಂದು ವನಿತಾ ಗುಪ್ತ ( 46) ಅವರಿಗೆ ಮತ ಚಲಾಯಿಸಿದರು. ಈ ಮೂಲಕ 49-51 ಮತಗಳ ಅಂತರದಿಂದ ಗುಪ್ತ ಯುಎಸ್​ ನ್ಯಾಯಾಂಗ ವ್ಯವಸ್ಥೆಯ ಪ್ರತಿಷ್ಠಿತ ಹುದ್ದೆಗೆ ಆಯ್ಕೆಯಾದರು.

ಗುಪ್ತಾ ಆಯ್ಕೆಗೆ 51-49 ಮತಗಳನ್ನು ಚಲಾಯಿಸಿದ ಸೆನೆಟ್​

ಯುಎಸ್​ ಸೆನೆಟ್​ನ 100 ಸದಸ್ಯರ ಬಲದ ಪೈಕಿ ಎರಡೂ ಪಕ್ಷಗಳು 50 ಸದಸ್ಯ ಬಲ ಹೊಂದಿರುವುದರಿಂದ ಒಂದು ವೇಳೆ ಮತಗಳು ಟೈ ಆದರೆ ಮತ ಚಲಾಯಿಸಲು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೆನೆಟ್​ನಲ್ಲಿ ಹಾಜರಿದ್ದರು.

ಸಹಾಯಕ ಅಟಾರ್ನಿ ಜನರಲ್ ಆಗಿ ಆಯ್ಕೆಯಾದ ಮೊದಲ ಕಪ್ಪು ವರ್ಣೀಯ ಮಹಿಳೆ ಎಂಬ ಇತಿಹಾಸ ನಿರ್ಮಿಸಿದ ವನಿತಾ ಗುಪ್ತಾ ಅವರಿಗೆ ಅಭಿನಂದನೆಗಳು. ಕ್ರಿಸ್ಟನ್ ಕ್ಲಾರ್ಕ್ ಮತ್ತು ವನಿತಾ ಗುಪ್ತ ಇಬ್ಬರೂ ಸಮಾನ ಅರ್ಹತೆ ಹೊಂದಿರುವವರು, ಅತ್ಯಂತ ಗೌರವಾನ್ವಿತ ವಕೀಲರು. ಅವರು ಜನಾಂಗೀಯ ಸಮಾನತೆ ಮತ್ತು ನ್ಯಾಯ ಕ್ಷೇತ್ರದಲ್ಲಿ ಅರ್ಪಣೆಯಿಂದ ಕೆಲಸ ಮಾಡಲು ಅವಕಾಶ ದೊರೆತಿದೆ. ಸೆನೆಟ್ ಅವರಿಗೆ ಸಹಕಾರ ನೀಡಬೇಕು ಎಂದು ಯುಎಸ್​ ಅಧ್ಯಕ್ಷ ಜೋ ಬೈಡೆನ್‌​ ಹೇಳಿದ್ದಾರೆ.

ಗುಪ್ತಾ, ಯುಎಸ್​ ನ್ಯಾಯ ವ್ಯವಸ್ಥೆಯ ಅಗ್ರ ಮೂರನೇ ಸ್ಥಾನದಲ್ಲಿ ಸೇವೆ ಸಲ್ಲಿಸಲು ಅವಕಾಶ ಗಿಟ್ಟಿಸಿಕೊಂಡ ಮೊದಲ ನಾಗರಿಕ ಹಕ್ಕುಗಳ ವಕೀಲೆಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.