ವಾಷಿಂಗ್ಟನ್: ಚೀನಾ ವಿರುದ್ಧ ಪ್ರಾಬಲ್ಯ ಸಾಧಿಸಲು ಅಮೆರಿಕ ತನ್ನ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ. ಇತ್ತೀಚಿಗೆ ಮುಗಿದ ಕ್ವಾಡ್ ಶೃಂಗಸಭೆಯಲ್ಲಿ ಪ್ರಾಯೋಗಿಕವಾಗಿ ಪ್ರಯತ್ನ ಸಾಧಿಸಿರುವುದು ಪ್ರಮುಖ ಉದಾಹರಣೆಯಾಗಿದೆ ಎಂದು ಬೈಡನ್ ಆಡಳಿತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೀನಾದ ಉನ್ನತ ವಿದೇಶಾಂಗ ನೀತಿ ಅಧಿಕಾರಿಗಳ ಜತೆಗೆ ಅಮೆರಿಕದ ಅಧಿಕಾರಿಗಳ ನಿರ್ಣಾಯಕ ಸಭೆಯು ನಾಳೆ ನಡೆಯಲಿದ್ದು, ಇದರ ಬೆನ್ನಲ್ಲೇ ಈ ಹೇಳಿಕೆ ಹೊರ ಬಂದದ್ದು ತೀವ್ರ ಕುತೂಹಲ ಕೆರಳಿಸಿದೆ.
ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧಗಳು ಸಾರ್ವಕಾಲಿಕ ತೀವ್ರ ಕೆಳಮಟ್ಟಕ್ಕೆ ಕುಸಿದಿವೆ. ವ್ಯಾಪಾರ, ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಕಮ್ಯುನಿಸ್ಟ್ ರಾಷ್ಟ್ರದ ಆಕ್ರಮಣಕಾರಿ ಮಿಲಿಟರಿ ಕೃತ್ಯಗಳು, ಹಾಂಕಾಂಗ್ ಮತ್ತು ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿನ ಮಾನವ ಹಕ್ಕುಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಉಭಯ ರಾಷ್ಟ್ರಗಳು ಮುಖಾಮುಖಿಯಾಗುತ್ತಿವೆ.
ಇದನ್ನೂ ಓದಿ: ಲೆಬನಾನ್ನಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು; ಅಗತ್ಯ ವಸ್ತುಗಳಿಗಾಗಿ ಬೀದಿಗಿಳಿದ ಜನತೆ
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಗುರುವಾರ ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಯಾಂಗ್ ಜೀಚಿ ಮತ್ತು ಚೀನಾದ ರಾಜ್ಯ ಕೌನ್ಸಿಲರ್ ವಾಂಗ್ ಯಿ ಅವರನ್ನು ಅಲಾಸ್ಕಾದ ಆಂಕಾರೋಜ್‌ನಲ್ಲಿ ಭೇಟಿಯಾಗಲಿದ್ದಾರೆ.
ನಮ್ಮ ಕೈ ಬಲಪಡಿಸಲು ನಾವು ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ. ಕಳೆದ ವಾರ ನಡೆದ ಕ್ವಾಡ್ ಶೃಂಗವೂ ಒಂದಾಗಿದೆ. ನಾವು ಇಲ್ಲಿ ಸಾಧಿಸಲು ಪ್ರಯತ್ನಿಸುತ್ತಿರುವುದರ ಪ್ರಾಯೋಗಿಕ ದೃಷ್ಟಿಯಿಂದ ಅತ್ಯಂತ ಸ್ಪಷ್ಟವಾದ ವಿವರಣೆಯಾಗಿದೆ. ನಾಲ್ಕು ನಾಯಕರನ್ನು ವರ್ಚುಯಲ್ ಶೃಂಗಸಭೆಯಲ್ಲಿ ಮೊದಲ ಬಾರಿಗೆ ಒಟ್ಟುಗೂಡಿಸಿದ್ದೇವೆ. ನಾವು ಒಬ್ಬರೇ ಪ್ರತ್ಯೇಕವಾಗಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.