ವಾಶಿಂಗ್ಟನ್ : ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದದ ವಿಚಾರದಲ್ಲಿ ಅಮೆರಿಕ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, 'ಟ್ರೀಟಿ ಆಫ್ ಓಪನ್ ಸ್ಕೈಸ್'ನಿಂದ ಹೊರ ಬರುವುದಾಗಿ ಅಧಿಕೃತವಾಗಿ ಘೋಷಿಸಿದೆ.
ಆರು ತಿಂಗಳ ಹಿಂದೆಯೇ ನಾವು ಒಪ್ಪಂದಿಂದ ಹಿಂದೆ ಸರಿಯುವ ಕುರಿತು ಸೂಚನೆಯನ್ನು ನೀಡಿದ್ದೆವು. ರಷ್ಯಾವು ಹಲವು ವರ್ಷಗಳಿಂದ ಒಪ್ಪಂದವನ್ನು ಉಲ್ಲಂಘಿಸುತ್ತಿದೆ. ಆದ್ದರಿಂದ ನಾವು ಒಪ್ಪಂದ ಭಾಗವಾಗಲು ಇಚ್ಚಿಸುವುದಿಲ್ಲ ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ'ಬ್ರೇನ್ ಅವರನ್ನು ಉಲ್ಲೇಖಿಸಿ ಕಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಂತಹಾ ಹಳತಾದ ಒಪ್ಪಂದಗಳಿಂದ ಹೊರಬಂದು ಅಮೆರಿಕಾ ಫಸ್ಟ್ ಎಂದು ನಮ್ಮ ಅಧ್ಯಕ್ಷ ಟ್ರಂಪ್ ತೋರಿಸುವುದಿಲ್ಲ. ಈ ಒಪ್ಪಂದ ನಮ್ಮ ರಾಷ್ಟ್ರೀಯ ಭದ್ರತಾ ವೆಚ್ಚದಲ್ಲಿ ನಮ್ಮ ವಿರೋಧಿಗಳಿಗೆ ಲಾಭದಾಯಕವಾಗಿದೆ ಎಂದು ಒ'ಬ್ರೇನ್ ತನ್ನ ಟ್ವೀಟ್ ಮಾಡಿರುವುದಾಗಿ ಕಿನ್ಹುವಾ ಹೇಳಿದೆ.
2002 ರಲ್ಲಿ ಜಾರಿಗೆ ಬಂದ ಈ ಒಪ್ಪಂದವು, ತನ್ನ 34 ರಾಜ್ಯಗಳಿಗೆ ಇತರರ ಪ್ರದೇಶಗಳಲ್ಲಿ ಮಿಲಿಟರಿ ಪಡೆಗಳು ಮತ್ತು ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ನಿರಾಯುಧ ವಿಮಾನ ಹಾರಿಸಲು ಅವಕಾಶ ನೀಡುತ್ತದೆ.