ETV Bharat / international

ಇರಾನ್‌ ಸೈಬರ್​ ದಾಳಿ ಎದುರಿಸಲು ಸಿದ್ಧರಾಗಿ: ದೇಶವಾಸಿಗಳಿಗೆ ಅಮೆರಿಕ ಎಚ್ಚರಿಕೆ

ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಮಾತನಾಡಿರುವ ಇರಾನ್ ದೇಶ ಸೈಬರ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ತನ್ನ ದೇಶದ ಜನತೆಗೆ ಎಚ್ಚರಿಕೆ ನೀಡಿದೆ.

author img

By

Published : Jan 5, 2020, 3:12 PM IST

US warns of potential cyberattacks,ಇರಾನ್ ನಿಂದ ಸೈಬರ್​ ದಾಳಿ ಸಾಧ್ಯತೆ
ಇರಾನ್ ನಿಂದ ಸೈಬರ್​ ದಾಳಿ ಸಾಧ್ಯತೆ

ವಾಷಿಂಗ್ಟನ್: ಇರಾನ್ ಕದ್ಸ್‌ ಫೋರ್ಸ್ ಮುಖ್ಯಸ್ಥ ಜನರಲ್‌ ಕಾಸಿಮ್‌ ಸುಲೇಮಾನಿ ಹತ್ಯೆ ನಂತರ ಅಮೆರಿಕ ಮತ್ತು ಇರಾನ್ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ನಡುವೆ ಅಮೆರಿಕ ಅಲ್ಲಿನ ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಭಯೋತ್ಪಾದನೆಯ ಬೆದರಿಕೆಗಳಿಗೆ ಸಂಬಂಧಿಸಿದಂತೆ ಯುಎಸ್ ಹೋಮ್​ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಅಮೆರಿಕದ ವಿರುದ್ಧ ಇರಾನ್ ಪ್ರತೀಕಾರ ತೀರಿಸಿಕೊಳ್ಳಲು ಉದ್ದೇಶಿಸಿದೆ. ಇರಾನ್ ಶಕ್ತಿಯುತವಾದ ಸೈಬರ್ ಪ್ರೋಗ್ರಾಂ ನಿರ್ವಹಿಸುತ್ತಿದೆ ಮತ್ತು ಅಮೆರಿಕ ವಿರುದ್ಧ ಸೈಬರ್ ದಾಳಿಗಳನ್ನು ನಡೆಸಬಹುದು ಮುನ್ನೆಚ್ಚರಿಕೆ ಕೊಟ್ಟಿದೆ.

ಅನುಮಾನಾಸ್ಪದ ಇ-ಮೇಲ್‌ಗಳು ಮತ್ತು ನೆಟ್‌ವರ್ಕ್ ವಿಳಂಬಗಳಂತಹ ಸನ್ನಿವೇಶವನ್ನು ಎದುರಿಸಲು ಅಮೆರಿಕನ್ನರು ಸಿದ್ಧರಾಗಿರಬೇಕು ಎಂದು ತಿಳಿಸಿದೆ. ಜೊತೆಗೆ ವಾಷಿಂಗ್ಟನ್, ನ್ಯೂಯಾರ್ಕ್​, ಚಿಕಾಗೋ, ಫಿಲಿಡೆಲ್ಫಿಯಾ ಸೇರಿದಂತೆ ಇತರೆ ನಗರಗಳಲ್ಲಿ ಇಂಥ ಘಟನೆಗಳು ನಡೆದರೆ ಸಮರ್ಥವಾಗಿ ಎದುರಿಸಲು ಸಿದ್ಧತೆ ನಡೆಯುತ್ತಿದೆ.

ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕನ್ನರು ಅಥವಾ ಅಮೆರಿಕದ ಸ್ವತ್ತುಗಳನ್ನು ಇರಾನ್ ನಾಶ ಪಡಿಸಲು ಹೊರಟರೆ, ನಾವೂ ಕೂಡ ಇರಾನ್​ನ 52 ಸ್ಥಳಗಳೆಡೆಗೆ ಗುರಿ ಇಟ್ಟಿದ್ದೇವೆ (ಹಲವು ವರ್ಷಗಳ ಹಿಂದೆ ಇರಾನ್ ತೆಗೆದುಕೊಂಡ 52 ಅಮೆರಿಕನ್ ಒತ್ತೆಯಾಳುಗಳನ್ನು ಪ್ರತಿನಿಧಿಸುತ್ತವೆ) ಈ 52 ರಲ್ಲಿ ಕೆಲವು ಉನ್ನತ ಮಟ್ಟದ ಸ್ಥಳಗಳಾಗಿದ್ದು, ಇರಾನ್ ಮತ್ತು ಇರಾನಿನ ಸಂಸ್ಕೃತಿಗೆ ಮುಖ್ಯವಾದ ಸ್ಥಳಗಳ ಮೇಲೆ ನಾವು ದಾಳಿ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

Intro:Body:

Blank

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.