ವಾಷಿಂಗ್ಟನ್: ಕೊರೊನಾರ್ಭಟಕ್ಕೆ ಅಮೆರಿಕ ಅಕ್ಷರಶಃ ನಡುಗಿದೆ. ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶದಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ. ಸಾವಿನ ಸಂಖ್ಯೆ 58 ಸಾವಿರ ತಲುಪಿದೆ.
ಪ್ರಪಂಚದಾದ್ಯಂತ 31,16,406 ಕೊರೊನಾ ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ ಅತೀ ಹೆಚ್ಚು ಅಂದರೆ 10,12,582 ಕೇಸ್ ಅಮೆರಿಕದಲ್ಲಿರುವುದು ಗಮನಾರ್ಹ. ಇದರಲ್ಲಿ 1,15,936 ಜನರು ಗುಣಮುಖರಾಗಿದ್ದಾರೆ.
ಉಳಿದಂತೆ ಯೂರೋಪ್ ಖಂಡದ ಸ್ಪೇನ್ ದೇಶದಲ್ಲಿ 2,32,128 ಪ್ರಕರಣ, ಇಟಲಿಯಲ್ಲಿ 2,01,505, ಫ್ರಾನ್ಸ್ನಲ್ಲಿ 1,69,053, ಯು.ಕೆ.ಯಲ್ಲಿ 1,62,350, ಚೀನಾದಲ್ಲಿ 83 ಸಾವಿರ, ಟರ್ಕಿಯಲ್ಲಿ 1,14,653, ಇರಾನ್ 92 ಸಾವಿರ ಪ್ರಕರಣ ಕಂಡು ಬಂದಿದೆ.