ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಜೈನ ಮತ್ತು ಹಿಂದೂ ಧರ್ಮದ ಅಧ್ಯಯನ ಪೀಠ ಸ್ಥಾಪಿಸುವುದಾಗಿ ಪ್ರಕಟಿಸಿದೆ.
ಅಮೆರಿಕ ವಿವಿಯ ಧಾರ್ಮಿಕ ಅಧ್ಯಯನ ಕಾರ್ಯಕ್ರಮಗಳ ಭಾಗವಾಗಿ ಜೈನ ಮತ್ತು ಹಿಂದೂ ಧರ್ಮದ ಅಧ್ಯಯನ ಪೀಠ ಸ್ಥಾಪನೆಗೆ ನಿರ್ಧರಿಸಲಾಗಿದೆ. ಕಲಾ ಮತ್ತು ಮಾನವಿಕ ಕಾಲೇಜಿನ ತತ್ವಶಾಸ್ತ್ರ ವಿಭಾಗಕ್ಕೆ ಈ ಪೀಠ ಒಳಪಡಲಿದೆ.
ಈ ಎರಡೂ ಧರ್ಮಗಳ ಬಗ್ಗೆ ಪಾಂಡಿತ್ಯ ಹೊಂದಿರುವ ಪ್ರಾಧ್ಯಾಪಕರೊಬ್ಬರನ್ನು ಇದರ ಅಧ್ಯಕ್ಷರಾಗಿ 2021 ರಲ್ಲಿ ನೇಮಕಗೊಳಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.