ETV Bharat / international

ಉಯಿಘರ್‌ಗಳ ಮೇಲೆ ಚೀನಾದ ದೌರ್ಜನ್ಯದ ಕುರಿತು ಹೊಸ ವೆಬ್‌ಪೇಜ್ ಬಿಡುಗಡೆ ಮಾಡಿದ ಅಮೆರಿಕ - ಉಯಿಘರ್‌ಗಳ ಮೇಲೆ ಚೀನಾದ ದೌರ್ಜನ್ಯ

ಹಲವಾರು ವಿಷಯಗಳ ಕುರಿತು ದಿನಗಳಲ್ಲಿ ಯುಎಸ್ ಮತ್ತು ಚೀನಾ ನಡುವಿನ ಸಂಬಂಧಗಳು ಹದಗೆಟ್ಟಿವೆ. ಇದೀಗ ಉಯಿಘರ್‌ಗಳು ಮತ್ತು ಕ್ಸಿನ್‌ಜಿಯಾಂಗ್‌ನಲ್ಲಿನ ಇತರ ಅಲ್ಪಸಂಖ್ಯಾತ ಗುಂಪುಗಳ ಸದಸ್ಯರ ವಿರುದ್ಧ ಚೀನಾ ಸರ್ಕಾರದ ದೌರ್ಜನ್ಯವನ್ನು ತೋರಿಸಲು ಅಮೆರಿಕ ವಿದೇಶಾಂಗ ಇಲಾಖೆ ಹೊಸ ವೆಬ್​​ಪೇಜ್ ಬಿಡುಗಡೆ ಮಾಡಿದೆ.

uyighar
uyighar
author img

By

Published : Sep 14, 2020, 6:21 PM IST

ವಾಷಿಂಗ್ಟನ್ (ಯು.ಎಸ್): ವಾಯುವ್ಯ ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಉಯಿಘರ್ ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳ ವಿರುದ್ಧ ಚೀನಾ ಸರ್ಕಾರದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತೋರಿಸಲು ಅಮೆರಿಕ ವಿದೇಶಾಂಗ ಇಲಾಖೆಯು ಹೊಸ ವೆಬ್​​ಪೇಜ್ ಬಿಡುಗಡೆ ಮಾಡಿದೆ.

"ನಾವು ಹೊಸ ವೆಬ್‌ಪೇಜ್ ಅನ್ನು ಬಿಡುಗಡೆ ಮಾಡಿದ್ದು, ಅದು ಉಯಿಘರ್‌ಗಳು ಮತ್ತು ಕ್ಸಿನ್‌ಜಿಯಾಂಗ್‌ನಲ್ಲಿನ ಇತರ ಅಲ್ಪಸಂಖ್ಯಾತ ಗುಂಪುಗಳ ಸದಸ್ಯರ ವಿರುದ್ಧ ಚೀನಾದ ಕಮ್ಯುನಿಸ್ಟ್ ಪಕ್ಷದ ದುರುಪಯೋಗವನ್ನು ವಿವರಿಸುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಜಾಗತಿಕ ಹೋರಾಟವನ್ನು ಮುನ್ನಡೆಸಲು ಯುಎಸ್ ಬದ್ಧವಾಗಿದೆ" ಎಂದು ವಿದೇಶಾಂಗ ಇಲಾಖೆ ಟ್ವೀಟ್‌ನಲ್ಲಿ ತಿಳಿಸಿದೆ.

ಹಲವಾರು ವಿಷಯಗಳ ಕುರಿತು ಉಭಯ ದೇಶಗಳು ಪ್ರಚೋದಿಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಯುಎಸ್ ಮತ್ತು ಚೀನಾ ನಡುವಿನ ಸಂಬಂಧಗಳು ಹದಗೆಟ್ಟಿವೆ.

"ಈ ಭಯಾನಕತೆಯನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ನಾವು ಚೀನೀ ಕಮ್ಯುನಿಸ್ಟ್ ಪಕ್ಷಕ್ಕೆ ತಿಳಿಸುತ್ತೇವೆ. ಈ ಅಮಾನವೀಯ ನಿಂದನೆಗಳನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಎಲ್ಲಾ ರಾಷ್ಟ್ರಗಳು ಯುನೈಟೆಡ್ ಸ್ಟೇಟ್ಸ್​ನೊಂದಿಗೆ ಸೇರಲು ಕೇಳಿಕೊಳ್ಳುತ್ತೇವೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.