ETV Bharat / international

ಕೊರೊನಾ ವೈರಸ್​ ಕುರಿತು ಚೀನಾ ಮುಖ್ಯ ಮಾಹಿತಿ ಹಂಚಿಕೊಂಡಿಲ್ಲ: ಮತ್ತೆ ಗುಡುಗಿದ ಅಮೆರಿಕ - ಕೋವಿಡ್ ಮಾಹಿತಿ ಬಚ್ಚಿಟ್ಟ ಬೀಜಿಂಗ್

ಕೋವಿಡ್​-19 ಸಾಂಕ್ರಾಮಿಕ ರೋಗವನ್ನು ತಪ್ಪಿಸಬಹುದಾಗಿತ್ತು. ಬೇರೆ ಯಾವುದೇ ಜವಾಬ್ದಾರಿಯುತ ದೇಶವಾಗಿದ್ದರೇ ಏಕಾಏಕಿಯಾಗಿ ಹಬ್ಬಿದ ಕೆಲವೇ ದಿನಗಳಲ್ಲಿ ವಿಶ್ವ ಆರೋಗ್ಯ ತನಿಖಾಧಿಕಾರಿಗಳನ್ನು ವುಹಾನ್‌ಗೆ ಆಹ್ವಾನಿಸುತ್ತಿತ್ತು. ಆದರೆ ಚೀನಾ ಈ ವಿಷಯದಲ್ಲಿ ಅಮೆರಿಕ ಸೇರಿದಂತೆ ಇತರೆ ರಾಷ್ಟ್ರಗಳ ಸಹಾಯದ ಪ್ರಸ್ತಾಪ ನಿರಾಕರಿಸಿತು ಎಂದು ಅಮೆರಿಕ ಟೀಕಿಸಿದೆ.

Michael Pompeo
ಮೈಕೆಲ್ ಪೊಂಪಿಯೊ
author img

By

Published : Jan 16, 2021, 5:41 PM IST

ವಾಷಿಂಗ್ಟನ್​: ಕೋವಿಡ್​-19 ಮೂಲದ ಬಗ್ಗೆ ಪಾರದರ್ಶಕ ಮತ್ತು ಸಮಗ್ರ ತನಿಖೆಗೆ ಕರೆ ನೀಡಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ, ಸಾಂಕ್ರಾಮಿಕ ರೋಗ ಹಬ್ಬುವುದನ್ನು ತಪ್ಪಿಸಬಹುದಾಗಿದ್ದ ಬೀಜಿಂಗ್, ವೈರಸ್ ಬಗ್ಗೆ ಪ್ರಮುಖ ಮಾಹಿತಿ ಬಹಿರಂಗಪಡಿಸಲಿಲ್ಲ. ಒಂದು ವೇಳೆ ಸಹಕಾರ ನೀಡಿದ್ದರೇ ವಿಜ್ಞಾನಿಗಳಿಗೆ ಜಗತ್ತನ್ನು ವೈರಸ್​ನಿಂದ ರಕ್ಷಿಸಲು ನೆರವಾಗುತ್ತಿತ್ತು ಎಂದರು.

ಕೋವಿಡ್​-19 ಸಾಂಕ್ರಾಮಿಕ ರೋಗವನ್ನು ತಪ್ಪಿಸಬಹುದಾಗಿತ್ತು. ಬೇರೆ ಯಾವುದೇ ಜವಾಬ್ದಾರಿಯುತ ದೇಶವಾಗಿದ್ದರೇ ಏಕಾಏಕಿಯಾಗಿ ಹಬ್ಬಿದ ಕೆಲವೇ ದಿನಗಳಲ್ಲಿ ವಿಶ್ವ ಆರೋಗ್ಯ ತನಿಖಾಧಿಕಾರಿಗಳನ್ನು ವುಹಾನ್‌ಗೆ ಆಹ್ವಾನಿಸುತ್ತಿತ್ತು. ಚೀನಾ ಅಮೆರಿಕ ಸೇರಿದಂತೆ ಇತರೆ ರಾಷ್ಟ್ರಗಳ ಸಹಾಯದ ಪ್ರಸ್ತಾಪ ನಿರಾಕರಿಸಿತು. ಧೈರ್ಯಶಾಲಿ ಚೀನಾದ ವೈದ್ಯರು, ವಿಜ್ಞಾನಿಗಳು ಮತ್ತು ಪತ್ರಕರ್ತರಿಗೆ ಶಿಕ್ಷೆ ವಿಧಿಸಿತ್ತಾ ವೈರಸ್​ನ ಅಪಾಯಗಳ ಬಗ್ಗೆ ಜಗತ್ತನ್ನು ಎಚ್ಚರಿಸಲಿಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ: 1,512 ರೂ. ಜಿಗಿದ ಜೆಟ್​ ತೈಲ ಬೆಲೆ: ಪೆಟ್ರೋಲ್, ಡೀಸೆಲ್​ ದರ ಏನಾಯ್ತು?

ಈ ಮಾರಕ ವೈರಸ್‌ನಿಂದ ವಿಜ್ಞಾನಿಗಳಿಗೆ ಜಗತ್ತನ್ನು ರಕ್ಷಿಸಲುಬೇಕಾದ ಪ್ರಮುಖ ಮಾಹಿತಿ ತಡೆಹಿಡಿಯುವ ಬೀಜಿಂಗ್​ನ ಪ್ರಯತ್ನ ಇಂದಿಗೂ ಮುಂದುವರೆದಿದೆ. ವುಹಾನ್‌ನಲ್ಲಿ ಏನಾಯಿತು ಎಂಬುದರ ಬಗ್ಗೆ ಚೀನಾದ ಕಮ್ಯುನಿಸ್ಟ್ ಪಕ್ಷವು ಸಂಪೂರ್ಣವಾಗಿ ಅನುಮತಿಸಬೇಕು. ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಜನಿಸಿ ಇಲ್ಲಿನ ಜನರು ಮತ್ತು ಪ್ರಪಂಚದ ಮೇಲೆ ಉಂಟುಮಾಡುವ ಮೊದಲು ಇದರ ಪತ್ತೆ ಮಾಡಬೇಕಿದೆ ಎಂದು ಪೊಂಪಿಯೊ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.