ವಾಷಿಂಗ್ಟನ್(ಅಮೆರಿಕ): ರೂಪಾಂತರಿ ಕೋವಿಡ್ ವೈರಸ್ ಒಮಿಕ್ರಾನ್ಗೆ ವಿಶ್ವದಲ್ಲಿ 13ನೇ ಸಾವು ಸಂಭವಿಸಿದೆ. ಅಮೆರಿಕದ ಟೆಕ್ಸಾಸ್ನಲ್ಲಿ 50 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಒಮಿಕ್ರಾನ್ಗೆ ಬಲಿಯಾದ ಅಮೆರಿಕದ ಮೊದಲ ವ್ಯಕ್ತಿ ಇವರಾಗಿದ್ದಾರೆ.
ಹೌದು, ವಿಶ್ವದಲ್ಲಿ ಅತ್ಯಂತ ವೇಗವಾಗಿ ತನ್ನ ಕಬಂಧಬಾಹುಗಳನ್ನು ಚಾಚುತ್ತಿರುವ ಮಹಾಮಾರಿ ಒಮಿಕ್ರಾನ್ 13ನೇ ಬಲಿ ಪಡೆದಿದೆ. ಈ ವ್ಯಕ್ತಿ ಹಿಂದೆ ಕೋವಿಡ್-19 ಸೋಂಕಿತನಾಗಿದ್ದ ಮತ್ತು ಕೊರೊನಾ ಲಸಿಕೆ ಪಡೆದಿರಲಿಲ್ಲ ಎಂಬ ಮಾಹಿತಿ ಹ್ಯಾರಿಸ್ ಪ್ರಾದೇಶಿಕ ಸಾರ್ವಜನಿಕ ಆರೋಗ್ಯ ಇಲಾಖೆಯಿಂದ ಸಿಕ್ಕಿದೆ.
ಈ ವ್ಯಕ್ತಿ ಕೊರೊನಾ ಬಾಧಿಸಿದ್ದರಿಂದ ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಮತ್ತು ವ್ಯಾಕ್ಸಿನ್ ಸಹ ಪಡೆದಿರಲಿಲ್ಲವೆಂದು ಸಿಎನ್ಎನ್ ಮಾಧ್ಯಮ ವರದಿ ಮಾಡಿದೆ.
50 ವರ್ಷದ ವ್ಯಕ್ತಿ ಒಮಿಕ್ರಾನ್ನಿಂದ ಮೃತಪಟ್ಟಿರುವುದಾಗಿ ಇಲ್ಲಿನ ಕೌಂಟಿ ಜಡ್ಜ್ ಲಿನಾ ಹಿಡಾಲ್ಗೊ ಬಹಿರಂಗಪಡಿಸಿದ್ದಾರೆ.