ETV Bharat / international

2020ರ ಜಾಗತಿಕ ಧಾರ್ಮಿಕ ಸ್ವತಂತ್ರ್ಯ ವರದಿ ಬಿಡುಗಡೆ: ಚರ್ಚ್ ಇಲ್ಲದ ಏಕೈಕ ದೇಶ ಯಾವುದು ಗೊತ್ತೇ? - ಚೀನಾದ ಧಾರ್ಮಿಕ ಸ್ವಾತಂತ್ರ್ಯ

ಚೀನಾ ಧಾರ್ಮಿಕ ಅಭಿವ್ಯಕ್ತಿಯನ್ನು ವ್ಯಾಪಕವಾಗಿ ಅಪರಾಧೀಕರಿಸುತ್ತದೆ. ಮುಸ್ಲಿಂ ಉಯಿಘರ್ ಮತ್ತು ಇತರ ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳ ಸದಸ್ಯರ ವಿರುದ್ಧ ಮಾನವೀಯತೆ ಮತ್ತು ನರಮೇಧದಂತಹ ಅಪರಾಧಗಳನ್ನು ಮುಂದುವರಿಸಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ದೂರಿದರು.

Religious Freedom Report
Religious Freedom Report
author img

By

Published : May 13, 2021, 5:45 AM IST

ವಾಷಿಂಗ್ಟನ್​​: ಜಗತ್ತಿನ 200 ರಾಷ್ಟ್ರಗಳ ಹಾಗೂ ಪ್ರಾಂತ್ಯಗಳಲ್ಲಿನ ಧಾರ್ಮಿಕ ಸ್ವಾತಂತ್ರ್ಯ ಸ್ಥಿತಿಯ ಸಮಗ್ರ ವಿಮರ್ಶೆ ಮಾಡಿದ ದೊಡ್ಡಣ್ಣ ಅಮೆರಿಕ, 2020ರ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ವರದಿ ಬಿಡುಗಡೆ ಮಾಡಿದೆ.

ಇತರ ಮಾನವ ಹಕ್ಕುಗಳನ್ನು ಗೌರವಿಸದ ಹೊರತು ಧಾರ್ಮಿಕ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ಸಾಧ್ಯವಿಲ್ಲ. ಸರ್ಕಾರಗಳು ತಮ್ಮ ಜನರ ಹಕ್ಕನ್ನು ಮುಕ್ತವಾಗಿ ನಂಬುವ ಮತ್ತು ಪೂಜಿಸುವ ಹಕ್ಕನ್ನು ಉಲ್ಲಂಘಿಸಿದಾಗ, ಅದು ಇತರ ಎಲ್ಲರಿಗೂ ಅಪಾಯವನ್ನುಂಟು ಮಾಡುತ್ತದೆ. ಧಾರ್ಮಿಕ ಸ್ವಾತಂತ್ರ್ಯವು ಮುಕ್ತ ಮತ್ತು ಸ್ಥಿರ ಸಮಾಜದ ಪ್ರಮುಖ ಅಂಶವಾಗಿದೆ. ಅದು ಇಲ್ಲದೆ, ಜನರು ತಮ್ಮ ದೇಶದ ಯಶಸ್ಸಿಗೆ ತಮ್ಮ ಸಂಪೂರ್ಣ ಕೊಡುಗೆ ನೀಡಲು ಸಾಧ್ಯವಾಗುವುದಿಲ್ಲ. ಮಾನವ ಹಕ್ಕುಗಳನ್ನು ನಿರಾಕರಿಸಿದಾಗಲೆಲ್ಲಾ ಅದು ಉದ್ವಿಗ್ನತೆ ಉಂಟುಮಾಡುತ್ತದೆ, ಮತ್ತು ಅದು ವಿಭಜನೆಯನ್ನು ಬೆಳೆಸುತ್ತದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಹಾಯಿ, ಕ್ರಿಶ್ಚಿಯನ್ನರು, ಯಹೂದಿಗಳು, ಝೋರಾಸ್ಟ್ರಿಯನ್ನರು, ಸುನ್ನಿ ಮತ್ತು ಸೂಫಿ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತ ನಂಬಿಕೆ ಗುಂಪುಗಳ ಸದಸ್ಯರ ಮೇಲೆ ಇರಾನ್ ಬೆದರಿಕೆ, ಕಿರುಕುಳ ಮತ್ತು ಬಂಧನದಂತಹ ಕೃತ್ಯಗಳನ್ನು ಮುಂದುವರೆಸಿದೆ. ಬರ್ಮಾದಲ್ಲಿ (ಮ್ಯಾನ್ಮಾರ್) ಮಿಲಿಟರಿ ದಂಗೆ ನಾಯಕರು ಜನಾಂಗೀಯ ಶುದ್ಧೀಕರಣ ಮತ್ತು ರೋಹಿಂಗ್ಯಾಗಳ ವಿರುದ್ಧದ ದೌರ್ಜನ್ಯಗಳಲ್ಲಿ ಹೆಚ್ಚಿನವರು ಮುಸ್ಲಿಮರು ಮತ್ತು ಇತರ ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರಿದ್ದಾರೆ ಎಂದು ಹೇಳಿದ್ದಾರೆ.

ಸೌದಿ ಅರೇಬಿಯಾದಲ್ಲಿ ದಶಲಕ್ಷಕ್ಕಿಂತ ಅಧಿಕ ಕ್ರೈಸ್ತರು ವಾಸಿಸುತ್ತಿದ್ದರೂ ಕ್ರಿಶ್ಚಿಯನ್ ಚರ್ಚ್ ಇಲ್ಲದ ವಿಶ್ವದ ಏಕೈಕ ದೇಶ ಸೌದಿ ಅರೇಬಿಯಾ ಎಂದು ಬ್ಲಿಂಕೆನ್ ಹೇಳಿದ್ದಾರೆ.

ಚೀನಾ ಧಾರ್ಮಿಕ ಅಭಿವ್ಯಕ್ತಿಯನ್ನು ವ್ಯಾಪಕವಾಗಿ ಅಪರಾಧೀಕರಿಸುತ್ತದೆ. ಮುಸ್ಲಿಂ ಉಯಿಘರ್ ಮತ್ತು ಇತರ ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳ ಸದಸ್ಯರ ವಿರುದ್ಧ ಮಾನವೀಯತೆ ಮತ್ತು ನರಮೇಧದಂತಹ ಅಪರಾಧಗಳನ್ನು ಮುಂದುವರಿಸಿದೆ ಎಂದು ದೂರಿದರು.

ಸುಡಾನ್, ಉಜ್ಬೇಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ನಂತಹ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಕೆಲವು ದೇಶಗಳು ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿವೆ ಎಂದು ರಾಜ್ಯ ಕಾರ್ಯದರ್ಶಿ ಹೇಳಿದ್ದಾರೆ.

ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಕುರಿತು ಮಾತನಾಡಿದ ಬ್ಲಿಂಕೆನ್, ನಾವು ಅಲ್ಲಿ ಏನನ್ನು ನೋಡುತ್ತಿದ್ದೇವೆ ಎಂಬುದರ ಬಗ್ಗೆ ನಮಗೆ ತುಂಬ ಕಾಳಜಿ ಇದೆ. ರಾತ್ರಿಯಿಡೀ ಹೊರಬಂದ ಚಿತ್ರಗಳು ನೋವನ್ನುಂಟುಮಾಡುತ್ತಿವೆ. ಯಾವುದೇ ಓರ್ವ ನಾಗರಿಕ ತನ್ನ ಜೀವ ಕಳೆದುಕೊಳ್ಳುವುದು ಒಂದು ದುರಂತವೇ ಸರಿ. ಇಸ್ರೇಲ್​ ಮತ್ತು ಪ್ಯಾಲೇಸ್ಟಿನಿಯನ್ ನಾಯಕರನ್ನು ಭೇಟಿ ಮಾಡಲು ತಕ್ಷಣವೇ ಈ ಪ್ರದೇಶಕ್ಕೆ ಹ್ಯಾಡಿ ಅಮರ್ ತೆರಳಲಿದ್ದಾರೆ. ನನ್ನ ಪರವಾಗಿ ಮತ್ತು ಅಧ್ಯಕ್ಷ ಬೈಡನ್ ಪರವಾಗಿ ಹಿಂಸಾಚಾರ ತಡೆಯುವಂತೆ ಒತ್ತಾಯಿಸುತ್ತಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.