ETV Bharat / international

ಕೊರೊನಾ ವಿರುದ್ಧ ಹೋರಾಡಲು ಭಾರತಕ್ಕೆ ಅಮೆರಿಕ ಸಹಾಯ ಹಸ್ತ... 5.9 ಮಿಲಿಯನ್​ ಡಾಲರ್​ ನೆರವು - ಭಾರತಕ್ಕೆ ಅಮೆರಿಕಾ ಸಹಾಯ ಹಸ್ತ

ಭಾರತ ಸೇರಿ ಒಟ್ಟು 7 ಕೊರೊನಾ ಪೀಡಿತ ರಾಷ್ಟ್ರಗಳಿಗೆ ಅಮೆರಿಕ ಸಹಾಯ ಹಸ್ತ ಚಾಚಿದ್ದು, ಭಾರತಕ್ಕೆ 5.9 ಮಿಲಿಯನ್​ ಡಾಲರ್ ಆರೋಗ್ಯ ನೆರವು ನೀಡಿದೆ.

COVID 19
ಭಾರತಕ್ಕೆ ಅಮೆರಿಕಾ 5.9 ಮಿಲಿಯನ್​ ಡಾಲರ್​ ನೆರವು
author img

By

Published : Apr 17, 2020, 11:35 AM IST

ವಾಷಿಂಗ್ಟನ್​: ಜಾಗತಿಕ ಮಹಾಮಾರಿ ಕೊವಿಡ್​-19 ವಿರುದ್ಧ ಹೋರಾಡಲು ವಿಶ್ವದ ದೊಡ್ಡಣ್ಣ ಭಾರತಕ್ಕೆ 5.9 ಮಿಲಿಯನ್​ ಡಾಲರ್ ಆರೋಗ್ಯ ನೆರವು ನೀಡಿದೆ.

ಕೊರೊನಾ ಪೀಡಿತರಿಗೆ ಸರಿಯಾದ ಆರೈಕೆ ನೀಡಲು ಹಾಗೂ ಸಮುದಾಯಗಳಿಗೆ ಅಗತ್ಯವಾದ ಸಾರ್ವಜನಿಕ ಆರೋಗ್ಯ ಸಂದೇಶ, ಪ್ರಕರಣಗಳ ಪತ್ತೆ, ಭದ್ರತೆ ಬಲಪಡಿಸುವ, ತುರ್ತು ಸಿದ್ಧತೆ ಮಾಡಿಕೊಳ್ಳುವ ಮೂಲಕ ವೈರಸ್​ ಹರಡುವಿಕೆಯನ್ನು ತಡೆಗಟ್ಟಲು ಬಳಸಿಕೊಳ್ಳಲು ಈ ಹಣವನ್ನು ನೀಡಲಾಗಿದೆ ಎಂದು ಅಮೆರಿಕ ಸರ್ಕಾರ ತಿಳಿಸಿದೆ.

ಕಳೆದ 20 ವರ್ಷಗಳಲ್ಲಿ ಭಾರತಕ್ಕೆ ಅಮೆರಿಕ ಒಟ್ಟು 2.8 ಬಿಲಿಯನ್​ ಡಾಲರ್​ ಆರ್ಥಿಕ ನೆರವು ನೀಡಿದಂತಾಗಿದೆ. ಇದರಲ್ಲಿ 1.4 ಬಿಲಿಯನ್​ ಡಾಲರ್​ ಆರೋಗ್ಯ ನೆರವಾಗಿದೆ ಎಂದು ಸಹ ಯು.ಎಸ್​ ಹೇಳಿದೆ.

ಭಾರತ ಸೇರಿ ಒಟ್ಟು 7 ಕೊರೊನಾ ಪೀಡಿತ ರಾಷ್ಟ್ರಗಳಿಗೆ ದೊಡ್ಡಣ್ಣ ಸಹಾಯ ಹಸ್ತ ಚಾಚಿದ್ದು, ಅಫ್ಘಾನಿಸ್ತಾನಕ್ಕೆ 18 ಮಿಲಿಯನ್​ ಡಾಲರ್​, ಬಾಂಗ್ಲಾದೇಶಕ್ಕೆ 9.6 ಮಿಲಿಯನ್​ ಡಾಲರ್​, ಭೂತಾನ್​ಗೆ 500,000 ಡಾಲರ್​, ಪಾಕಿಸ್ತಾನಕ್ಕೆ 4 ಮಿಲಿಯನ್​ ಡಾಲರ್​ ಹಾಗೂ ಶ್ರೀಲಂಕಾಗೆ 1.3 ಮಿಲಿಯನ್​ ಡಾಲರ್​ ನೆರವು ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.