ETV Bharat / international

ಅಮೆರಿಕದ ಇತಿಹಾಸದಲ್ಲೇ ಅತಿ ವಿವಾದಾಸ್ಪದ ಅಧ್ಯಕ್ಷ ಟ್ರಂಪ್​ - ಮೆಲಾನಿಯಾ ಟ್ರಂಪ್

ಸದಾ ಒಂದಿಲ್ಲೊಂದು ವಿವಾದಗಳ ಸುಳಿಯಲ್ಲಿ ಇರುವ ಟ್ರಂಪ್, ಎಲ್ಲ ಸಂದಿಗ್ಧ ಸ್ಥಿತಿಗಳಲ್ಲೂ ತಾವು ಮಾಡಿದ್ದನ್ನು ನೇರವಾಗಿಯೇ ಸಮರ್ಥಿಸಿಕೊಳ್ಳುತ್ತಾರೆ. ತಮ್ಮ ಕಾರ್ಯಗಳ ಬಗ್ಗೆ ಅವರು ಯಾವತ್ತೂ ಕ್ಷಮಾಪಣೆ ಕೇಳುವ ರೀತಿಯಲ್ಲಿ ಮಾತನಾಡುವುದಿಲ್ಲ.

ಅಮೆರಿಕದ ಇತಿಹಾಸದಲ್ಲೇ ಅತಿ ವಿವಾದಾಸ್ಪದ ಅಧ್ಯಕ್ಷ ಟ್ರಂಪ್​

author img

By

Published : Nov 1, 2020, 11:51 PM IST

ಹೈದರಾಬಾದ್​: ಅಮೆರಿಕ ದೇಶವು ತನ್ನ 200 ವರ್ಷಗಳ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಡೊನಾಲ್ಡ್​ ಟ್ರಂಪ್​ ಅವರಿಗಿಂತ ಹೆಚ್ಚು ವಿವಾದಾಸ್ಪದ ಅಧ್ಯಕ್ಷನನ್ನು ನೋಡಿರಲಿಲ್ಲ. ಅತ್ಯಂತ ಕಠಿಣ ಅಮೆರಿಕ ಪರ ನಿಲುವು ಹಾಗೂ ಕೆಲ ವಿಷಯಗಳಲ್ಲಿ ಅವರು ತಳೆದ ನಿಲುವುಗಳು ಅವರನ್ನು ಓರ್ವ ಹಟಮಾರಿ ಧೋರಣೆಯ ನಾಯಕನನ್ನಾಗಿಯೂ ಬಿಂಬಿಸಿವೆ.

ಹಟಮಾರಿ ಟ್ರಂಪ್

ತನ್ನ ನಿಲುವುಗಳನ್ನು ಅತ್ಯಂತ ಮುಕ್ತ ಹಾಗೂ ನಿರ್ಭಿಡೆಯಿಂದ ಹೇಳಿಕೊಳ್ಳುವ ಟ್ರಂಪ್ ಕೆಲ ವಿಷಯಗಳಲ್ಲಿ ಅಷ್ಟೇ ನಿರ್ದಯಿ ಹಾಗೂ ಹಟಮಾರಿಯೂ ಆಗಿದ್ದಾರೆ. ತನಗಿಷ್ಟವಿಲ್ಲದವರ ವಿರುದ್ಧ ನೇರವಾಗಿಯೇ ದ್ವೇಷ ಕಾರುವ ಟ್ರಂಪ್​ ಅವರ ಧೋರಣೆಗಳು ಅವರಿಗೇ ಮುಳುವಾಗಲಿವೆ ಎಂದು ಭಾವಿಸಲಾಗಿತ್ತು. ಆದರೆ ಇದೆಲ್ಲವನ್ನೂ ಸುಳ್ಳು ಮಾಡಿದ ಟ್ರಂಪ್​ ತಮ್ಮದೇ ಆದ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ.

ನಾಲ್ಕೇ ವರ್ಷದಲ್ಲಿ ಟ್ರಂಪ್ ತಮ್ಮ ಎದುರಾಳಿಗಳ ಧ್ವನಿಯನ್ನು ಉಡುಗಿಸಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆಗಳು ನಡೆಯುತ್ತಿದ್ದ ರೀತಿಯನ್ನೇ ಟ್ರಂಪ್ ಬದಲಾಯಿಸಿದ್ದಾರೆ.

ಡೇನಿಯಲ್ ಪ್ರಹಸನ, ಪದಚ್ಯುತಿ ಯತ್ನ ಹಾಗೂ ಇತ್ತೀಚಿನ ಕೋವಿಡ್​-19 ಬಿಕ್ಕಟ್ಟು ಹೀಗೆ ಹಲವಾರು ಸಂಕಟದ ಸನ್ನಿವೇಶಗಳನ್ನು ಎದುರಿಸಿದರೂ ಅವರ ಇಮೇಜ್​ಗೆ ಮಾತ್ರ ಯಾವುದೇ ಧಕ್ಕೆಯಾಗಲಿಲ್ಲ.

ಯಾವಾಗಲೂ ವಿಜಯಶಾಲಿ

ಕೆಲವೊಂದು ಸಣ್ಣ ಪುಟ್ಟ ಸಂದರ್ಭಗಳನ್ನು ಬಿಟ್ಟರೆ ಟ್ರಂಪ್ ಯಾವಾಗಲೂ ಜಯ ಸಾಧಿಸಿದ್ದಾರೆ. ಅದೆಷ್ಟೇ ಸಂದಿಗ್ಧ ಸನ್ನಿವೇಶಗಳು, ಆರೋಪಗಳು ಎದುರಾದರೂ ಎಲ್ಲದರಿಂದ ಪಾರಾಗಿ ಹೊರಬಂದಿರುವ ಟ್ರಂಪ್ ಅದರಿಂದಲೇ ತಮ್ಮ ಇಮೇಜ್​ ಮತ್ತಷ್ಟು ಸುಧಾರಿಸುವಂತೆ ನೋಡಿಕೊಂಡಿದ್ದಾರೆ. ಚೀನಾದೊಂದಿಗೆ ವ್ಯಾಪಾರ ವಹಿವಾಟು ನಿಲ್ಲಿಸಿ ಕಮ್ಯುನಿಸ್ಟ್​ ರಾಷ್ಟ್ರಕ್ಕೆ ಬಲವಾದ ಪೆಟ್ಟು ನೀಡಿದ ಅವರು, ಅಮೆರಿಕಕ್ಕೆ ಅದರಿಂದ ಲಾಭವಾಗುವಂತೆ ನೋಡಿಕೊಂಡರು. ಅಮೆರಿಕ ಫಸ್ಟ್​ ಎಂಬ ಅವರ ಧೋರಣೆಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ.

ವಿವಾದಗಳ ರಾಜ

ಸದಾ ಒಂದಿಲ್ಲೊಂದು ವಿವಾದಗಳ ಸುಳಿಯಲ್ಲಿ ಇರುವ ಟ್ರಂಪ್, ಎಲ್ಲ ಸಂದಿಗ್ಧ ಸ್ಥಿತಿಗಳಲ್ಲೂ ತಾವು ಮಾಡಿದ್ದನ್ನು ನೇರವಾಗಿಯೇ ಸಮರ್ಥಿಸಿಕೊಳ್ಳುತ್ತಾರೆ. ತಮ್ಮ ಕಾರ್ಯಗಳ ಬಗ್ಗೆ ಅವರು ಯಾವತ್ತೂ ಕ್ಷಮಾಪಣೆ ಕೇಳುವ ರೀತಿಯಲ್ಲಿ ಮಾತನಾಡುವುದಿಲ್ಲ.

ಅಮೆರಿಕದ ಇತಿಹಾಸದಲ್ಲೇ ಅತಿ ವಿವಾದಾಸ್ಪದ ಅಧ್ಯಕ್ಷ ಟ್ರಂಪ್​
ಅಮೆರಿಕದ ಇತಿಹಾಸದಲ್ಲೇ ಅತಿ ವಿವಾದಾಸ್ಪದ ಅಧ್ಯಕ್ಷ ಟ್ರಂಪ್​

ರಾಜಕೀಯ ಪಯಣ

ರಿಪಬ್ಲಿಕನ್ ಪಕ್ಷದಿಂದ 2016 ರಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾದ ಟ್ರಂಪ್​ ಚುನಾವಣೆಗಳಲ್ಲಿ ಯಶಸ್ವಿಯಾಗಿ ವಿಶ್ವದ ಅತಿ ಪ್ರಬಲ ರಾಷ್ಟ್ರದ ಬಲಾಢ್ಯ ನಾಯಕನಾಗಿ ಅಧಿಕಾರ ವಹಿಸಿಕೊಂಡರು. ಮೇಕ್​ ಅಮೆರಿಕ ಗ್ರೇಟ್ ಅಗೇನ್​ (ಅಮೆರಿಕವನ್ನು ಮತ್ತೆ ಮುಂಚೂಣಿಗೆ ತರೋಣ) ಎಂಬುದು ಅವರ ಇತ್ತೀಚಿನ ಘೋಷಣೆಯಾಗಿದ್ದು, ಮತ್ತೊಂದು ಬಾರಿ ಅಮೆರಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ಚೇತರಿಕೆಯ ಹಾದಿಯಲ್ಲಿರುವ ಅಮೆರಿಕದ ಆರ್ಥಿಕತೆ ಹಾಗೂ ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ವಿಷಯಗಳ ಮೇಲೆ ಮತ್ತೊಮ್ಮೆ ಜಯ ಸಾಧಿಸುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.

ಟ್ರಂಪ್​ ಜನನ ಹಾಗೂ ಆರಂಭಿಕ ಜೀವನ

ಡೊನಾಲ್ಡ್​ ಟ್ರಂಪ್ 1946 ರ ಜೂನ್ 14 ರಂದು ನ್ಯೂಯಾರ್ಕ್​ನಲ್ಲಿ ಜನಿಸಿದರು. ಇವರ ತಂದೆ ಫ್ರೆಡರಿಕ್ ಕ್ರಿಸ್ಟ್​ ಟ್ರಂಪ್​ ರಿಯಲ್ ಎಸ್ಟೇಟ್​ ಉದ್ಯಮಿಯಾಗಿದ್ದರು. 1954 ರಿಂದ 64 ರ ಮಧ್ಯೆ ಡೊನಾಲ್ಡ್​ ಟ್ರಂಪ್ ನ್ಯಾಯಾರ್ಕ್​ ಮಿಲಿಟರಿ ಶಾಲೆಯಲ್ಲಿ ಆರಂಭಿಕ ವಿದ್ಯಾಭ್ಯಾಸ ಮಾಡಿದರು. ನಂತರ ಪೆನ್ಸಿಲ್ವೇನಿಯಾ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. 1971ರ ಹೊತ್ತಿಗೆ ಅವರು ತಮ್ಮ ತಂದೆಯ ವ್ಯವಹಾರದ ಮೇಲೆ ಹಿಡಿತ ಸಾಧಿಸಲಾರಂಭಿಸಿದರು.

1974 ರಲ್ಲಿ ಅವರು ತಮ್ಮ ತಂದೆಯ ಬೃಹತ್​ ಉದ್ಯಮದ ಒಡೆಯರಾದರು ಹಾಗೂ ಕಂಪನಿಯ ಹೆಸರನ್ನು ಟ್ರಂ.ಪ್ ಆರ್ಗನೈಸೇಶನ್ ಎಂದು ಬದಲಾಯಿಸಿದರು. 1970ರ ಕೊನೆಯಲ್ಲಿ ಹಾಗೂ 80ರ ದಶಕದಲ್ಲಿ ತಂದೆಯ ಉದ್ಯಮವನ್ನು ಬೆಳೆಸುವತ್ತ ಶ್ರಮ ವಹಿಸಿದ ಟ್ರಂಪ್​, ವಾಸದ ಮನೆ ಆಸ್ತಿಗಳು, ಲಕ್ಷುರಿ ಹೋಟೆಲ್​ಗಳು ಹಾಗೂ ಕ್ಯಾಸಿನೊಗಳ ಮೇಲೆ ಸಿಕ್ಕಾಪಟ್ಟೆ ಹೂಡಿಕೆ ಮಾಡಿದರು.

1983 ರಲ್ಲಿ ಮ್ಯಾನಹಟನ್ ಮಹಾನಗರದಲ್ಲಿ ಟ್ರಂಪ್ ಟವರ್ ಉದ್ಘಾಟಿಸಿದರು. 58 ಅಂತಸ್ತಿನ ಈ ಬೃಹತ್ ಕಟ್ಟಡವು ಟ್ರಂಪ್ ಆರ್ಗನೈಸೇಶನ್​ನ ಕೇಂದ್ರ ಕಚೇರಿಯಾಗಿದೆ. ಇನ್ನು 1990 ರಲ್ಲಿ ಅಟ್ಲಾಂಟಿಕ್ ಸಿಟಿಯಲ್ಲಿ ಆರಂಭಿಸಲಾದ ತಾಜ್ ಮಹಲ್ ಹೆಸರಿನ ಕ್ಯಾಸಿನೊ ಅಂದು ಜಗತ್ತಿನ ಅತಿ ದೊಡ್ಡ ಕ್ಯಾಸಿನೊ ಆಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.