ಖಾರ್ಟೌಮ್: ಸುಡಾನ್ನನ್ನು ಭಯೋತ್ಪಾದನೆ ಪಟ್ಟಿಯಿಂದ ತೆಗೆದುಹಾಕುವ ಅಧಿಸೂಚನೆಗೆ ಯುಎಸ್ನ ವಿದೇಶಾಂಗ ಕಾರ್ಯದರ್ಶಿ ಮೈಕಲ್ ಪೊಂಪಿಯೊ ಸಹಿ ಹಾಕಿದ್ದಾರೆ ಎಂದು ಖಾರ್ಟೌಮ್ನಲ್ಲಿರುವ ಯುಎಸ್ ರಾಯಭಾರ ಕಚೇರಿ ಸೋಮವಾರ ತಿಳಿಸಿದೆ.
"45 ದಿನಗಳ ಕಾಂಗ್ರೆಶನಲ್ ಅಧಿಸೂಚನೆ ಅವಧಿ ಮುಗಿದಿದೆ. ಸುಡಾನ್ಅನ್ನು ರಾಜ್ಯ ಪ್ರಾಯೋಜಕ ಭಯೋತ್ಪಾದಕ ಪಟ್ಟಿಯಿಂದ ತೆಗೆಯುವ ಅಧಿಸೂಚನೆಗೆ ಇಂದು (ಡಿಸೆಂಬರ್ 14) ರಂದು ರಾಜ್ಯ ಕಾರ್ಯದರ್ಶಿ ಸಹಿ ಹಾಕಿದ್ದಾರೆ" ಎಂದು ಖಾರ್ಟೌಮ್ನಲ್ಲಿರುವ ಯುಎಸ್ ರಾಯಭಾರ ಕಚೇರಿ ಹೇಳಿದೆ.
ಇದನ್ನು ಓದಿ:ಸಮನ್ವಯಕಾರ ಹುದ್ದೆ ತೆಗೆದುಹಾಕಲು ಎಐಕೆಎಸ್‌ಸಿಸಿ ನಿರ್ಧಾರ
ಈ ಹಿಂದೆ ಯುಎಸ್ನಲ್ಲಿ ದಾಳಿ ಮಾಡಲಾಗಿದ್ದು, ಇಲ್ಲಿನ ಸಂತ್ರಸ್ತರಿಗೆ ಸುಡಾನ್ ತನ್ನ ರಾಜ್ಯ ಪ್ರಾಯೋಜಕರ ಭಯೋತ್ಪಾದನೆ ಪಟ್ಟಿಯಿಂದ 335 ಮಿಲಿಯನ್ ಡಾಲರ್ನನ್ನು ಪಾವತಿಸಿದ ನಂತರ ಅದನ್ನು ಈ ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದು ಅಕ್ಟೋಬರ್ನಲ್ಲಿ ಘೋಷಿಸಲಾಗಿತ್ತು.
ಅನಾಡೋಲು ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಈ ಹೇಳಿಕೆಯೂ ಸುಡಾನ್ನಲ್ಲಿ ಭಾರಿ ಬದಲಾವಣೆಯನ್ನು ತಂದಿದ್ದು, ಮಾಜಿ ನಾಯಕ ಒಮರ್ ಅಲ್-ಬಶೀರ್ ಅವರನ್ನು 2019 ರಲ್ಲಿ ಉಚ್ಚಾಟನೆ ಮಾಡಲು ಕಾರಣವಾಯಿತು. ಅಲ್ಲದೇ ಬಳಿಕ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಮಹತ್ತರ ಬದಲಾವಣೆಗಳು ಆದವು.