ವಾಷಿಂಗ್ಟನ್: ಕೋವಿಡ್ ನಿರ್ವಹಣೆಗೆ ಬೇಕಾದ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಭಾರತಕ್ಕೆ ಕಳಿಸುವಂತೆ ಮಾಡಲಾಗಿದ್ದ ಮನವಿಯನ್ನು ಬೈಡನ್ ಆಡಳಿತ ಅಂಗೀಕರಿಸಿದೆ. ಇದನ್ನು ಭಾರತೀಯ- ಅಮೆರಿಕನ್ ಆಗಿರುವ ಕಾಂಗ್ರೆಸ್ (ಅಮೆರಿಕದ ಸಂಸತ್ತು) ಸದಸ್ಯ ರಾಜ ಕೃಷ್ಣಮೂರ್ತಿ ಸ್ವಾಗತಿಸಿದ್ದಾರೆ.
ಭಾರತದಲ್ಲಿ ಕೋವಿಡ್ನಿಂದಾಗಿರುವ ಸ್ಥಿತಿಗತಿ ಪರಿಶೀಲಿಸಿ ಬೈಡನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂಡಿಯಾದ Caucus (ಕಾಕಸ್) ನ ಸದಸ್ಯರಾಗಿರುವ ಕೃಷ್ಣಮೂರ್ತಿ, ಜಾಗತಿಕ ಮಟ್ಟದಲ್ಲಿ ಕೋವಿಡ್ ತಗ್ಗಿಸುವಿಕೆಗೆ ಅಮೆರಿಕ ಕೈಗೊಂಡಿರುವ ಕ್ರಮಗಳನ್ನು ಬೆಂಬಲಿಸುತ್ತಾರೆ. ಈ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ, ಯುಎಸ್ ಜಾಗತಿಕ ವ್ಯಾಕ್ಸಿನೇಷನ್ ವಿಸ್ತರಿಸಲು ವೇರಿಯಂಟ್ಸ್ ಇನ್ಫೆಕ್ಟ್ ಆ್ಯಂಡ್ ಡೆಸಿಮೇಟ್ (ನೊವಿಡ್) ಕಾಯ್ದೆಯನ್ನು ಪರಿಚಯಿಸಿದ್ದಾರೆ.
ನೊವಿಡ್ ಕಾಯ್ದೆಯು ಎಂಟು ಶತಕೋಟಿ ಲಸಿಕೆ ಡೋಸ್ ಉತ್ಪಾದಿಸುವ ಸಾಮರ್ಥ್ಯ ಹೆಚ್ಚಿಸುತ್ತದೆ. ಭಾರತ ಸೇರಿದಂತೆ 92 ಕೋವಾಕ್ಸ್ ದೇಶಗಳಲ್ಲಿ ಶೇಕಡಾ 60 ರಷ್ಟು ಜನಸಂಖ್ಯೆ ರಕ್ಷಿಸಲು ಈ ಕಾಯ್ದೆ ಸಹಕಾರಿಯಾಗಿದೆ.
ಇದನ್ನೂ ಓದಿ:Sputnik v ಲಸಿಕೆ ಪಡೆದ ರಷ್ಯಾದ ಅಧ್ಯಕ್ಷ ವ್ಲಾಡಿಮರ್ ಪುಟಿನ್
ಕೋವಿಡ್ ನಿಯಂತ್ರಣಕ್ಕಾಗಿ ವ್ಯಾಕ್ಸಿನ್ಗಳು ಜಗತ್ತಿನ ಪ್ರತಿಯೊಬ್ಬರ ಕೈ ಸೇರಬೇಕು ಎಂಬ ನಿಟ್ಟಿನಲ್ಲಿ ನೊವಿಡ್ ಕಾಯ್ದೆ ಪರಿಚಯಿಸಿದ್ದೇವೆ. ಇದರಿಂದಾಗಿ ಕೋವಿಡ್ ವಿರುದ್ಧ ಒಟ್ಟಾಗಿ ಹೋರಾಡಬಹುದು. ಸಾಗರೋತ್ತರದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದೆ. ಅದನ್ನು ನಿಯಂತ್ರಿಸಲು ಜಾಗತಿಕ ಪ್ರತಿಕ್ರಿಯೆಯ ಅಗತ್ಯವಿದೆ ಎಂದು ರಾಜಕೃಷ್ಣಮೂರ್ತಿ ಹೇಳಿದ್ದಾರೆ.