ವಾಷಿಂಗ್ಟನ್: ಫೆಡರಲ್ ಭೂಮಿಯಲ್ಲಿ ತೈಲ ಮತ್ತು ಗ್ಯಾಸ್ ಶೋಷಣೆಗಾಗಿ ಹೊಸ ಗುತ್ತಿಗೆಗಳನ್ನು ನಿಷೇಧ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ ನಂತರ ಯುಎಸ್ ಅಧ್ಯಕ್ಷ ಜೋ ಬೈಡನ್ ಬುಧವಾರ ಹವಾಮಾನ ಬಿಕ್ಕಟ್ಟಿನ ಬಗ್ಗೆ ತಮ್ಮ ಪ್ರಜೆಗಳಿಗೆ ಕರೆ ನೀಡಿದ್ದಾರೆ.
ಜಾಗತಿಕ ಹವಾಮಾನ ಸಂಕಷ್ಟ ವಿರುದ್ಧ ವಿಶ್ವ ಒಗ್ಗಾಟ್ಟಾಗಿ ಹೋರಾಡಬೇಕಿದೆ ಮತ್ತು ವಾಷಿಂಗ್ಟನ್ ಜಾಗತಿಕವಾಗಿ ಹವಾಮಾನ ಸಂಕಷ್ಟಕ್ಕೆ ಸ್ಪಂದಿಸಿ ಮುನ್ನಡೆಸಬೇಕು ಎಂದು ಬೈಡನ್ ಕರೆ ನೀಡಿದರು.
ಹವಾಮಾನ ಬಿಕ್ಕಟ್ಟಿನ ವಿರುದ್ಧ ವಿಶ್ವವೇ ಒಂದಾಗಿ ಹೋರಾಡಬೇಕಾಗಿದೆ. ಏಕೆಂದರೆ ಹವಾಮಾನ ಬಿಕ್ಕಟ್ಟು ದಿನದಿಂದ ದಿನ ಉಲ್ಬಣಗೊಳ್ಳುತ್ತಿದೆ. ಇದರ ವಿರುದ್ಧ ಹೇಗೆ ಹೋರಾಟ ಮಾಡಬೇಕೆಂದು ನಮಗೆ ತಿಳಿದಿದೆ. ನಾವು ಅದನ್ನು ಮಾಡಬೇಕಾಗಿದೆ ಎಂದು ಅಮೆರಿಕದ ನೂತನ ಅಧ್ಯಕ್ಷ ಬೈಡನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನಾವು ತೈಲ ಮತ್ತು ಅನಿಲ ಗುತ್ತಿಗೆ ಕಾರ್ಯಕ್ರಮವನ್ನು ಪರಿಶೀಲಿಸುತ್ತೇವೆ. ನಮ್ಮ ಆಡಳಿತವು ಫ್ರ್ಯಾಕಿಂಗ್ (ಡೌನ್ ಡ್ರಿಲಿಂಗ್) ಅನ್ನು ನಿಷೇಧಿಸುವುದಿಲ್ಲ. ಆದರೆ, ಮೀಥೇನ್ ಸೋರಿಕೆಗೆ ಬಲವಾದ ಮಾನದಂಡಗಳನ್ನು ನೀಡಲಾಗುವುದು. ತೈಲ ಕಂಪನಿಗಳಿಗೆ ಪಳೆಯುಳಿಕೆ ಇಂಧನ ಸಬ್ಸಿಡಿಗಳನ್ನು ತೆಗೆದುಹಾಕುವಂತೆ ಕಾಂಗ್ರೆಸ್ಗೆ ಕೇಳುತ್ತೇನೆ ಎಂದರು.
ಆಡಳಿತದ ಇತ್ತೀಚಿನ ಆದೇಶಕ್ಕೆ ಪ್ರತಿಕ್ರಿಯಿಸಿದ ಬೈಡನ್, ವೆಸ್ಟರ್ನ್ ಎನರ್ಜಿ ಅಲೈಯನ್ಸ್ ಯುಎಸ್ ಸರ್ಕಾರವು ಫೆಡರಲ್ ಭೂಮಿಯಲ್ಲಿ ತೈಲ ಮತ್ತು ಅನಿಲ ಗುತ್ತಿಗೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವುದರ ವಿರುದ್ಧ ಮೊಕದ್ದಮೆ ಹೂಡಿದೆ ಎಂದರು.
ಸಾರ್ವಜನಿಕ ಜಮೀನುಗಳಲ್ಲಿ ತೈಲ ಮತ್ತು ನೈಸರ್ಗಿಕ ಗ್ಯಾಸ್ ಗುತ್ತಿಗೆ ನಿಷೇಧಿಸುವ ಅಧ್ಯಕ್ಷ ಜೋ ಬೈಡನ್ ಅವರ ಕಾರ್ಯನಿರ್ವಾಹಕ ಆದೇಶ ಪ್ರಶ್ನಿಸಿ ವೆಸ್ಟರ್ನ್ ಎನರ್ಜಿ ಅಲೈಯನ್ಸ್ ಮೊಕದ್ದಮೆ ಹೂಡಿದೆ. ಬೈಡನ್ ಅವರ ಆದೇಶವನ್ನು ಅಧ್ಯಕ್ಷೀಯ ಅಧಿಕಾರವನ್ನು ಮೀರಿದೆ ಮತ್ತು ಖನಿಜ ಗುತ್ತಿಗೆ ಕಾಯ್ದೆ, ರಾಷ್ಟ್ರೀಯ ಪರಿಸರ ನೀತಿ ಕಾಯ್ದೆ, ಫೆಡರಲ್ ಲ್ಯಾಂಡ್ಸ್ ಪಾಲಿಸಿ ಅಂಡ್ ಮ್ಯಾನೇಜ್ಮೆಂಟ್ ಆ್ಯಕ್ಟ್ ವಿರೋಧವಾಗಿದೆ ಎಂದು ದೂರಿನಲ್ಲಿ ತಿಳಿಸಿದೆ.