ETV Bharat / international

ಭಾರತಕ್ಕೆ ಸುಂಕ ವಿನಾಯಿತಿ ನೀಡುವ 'ಆದ್ಯತಾ ವ್ಯಾಪಾರ' ಸ್ಥಾನ ನೀಡಿದ ಅಮೆರಿಕ - ವ್ಯಾಪಾರ ಆದ್ಯತೆಯ ಕಾರ್ಯಕ್ರಮ

ಭಾರತಕ್ಕೆ ನೀಡಲಾಗಿದ್ದ ಜಿಎಸ್‌ಪಿ ಸ್ಥಾನಮಾನವನ್ನು ಕಳೆದ ವರ್ಷ ಜೂನ್​ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ರದ್ದುಗೊಳಿಸಿದ್ದರು. ಇದೀಗ ಈ ನಿರ್ಧಾರನ್ನು ಹಿಂಪಡೆಯಲು ಆ ದೇಶ ಚಿಂತನೆ ನಡೆಸಿದೆ.

Modi-Trump
ಮೋದಿ-ಟ್ರಂಪ್​
author img

By

Published : Jun 19, 2020, 1:19 PM IST

ವಾಷಿಂಗ್ಟನ್​: ಭಾರತಕ್ಕೆ ಆದ್ಯತಾ ವ್ಯಾಪಾರ ಸ್ಥಾನಮಾನವನ್ನು ಪುನಃ ನೀಡಲು ಅಮೆರಿಕ ಮುಂದಾಗಿದೆ ಎಂದು ಟ್ರಂಪ್ ಆಡಳಿತದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಜೂನ್​ನಲ್ಲಿ ಡೊನಾಲ್ಡ್​ ಟ್ರಂಪ್​ ಭಾರತಕ್ಕೆ ನೀಡಲಾಗಿದ್ದ 'ಆದ್ಯತೆಗಳ ಸಾಮಾನ್ಯೀಕೃತ ವ್ಯವಸ್ಥೆ' (ಜನರಲೈಸ್ಡ್‌ ಸಿಸ್ಟಂ ಆಫ್‌ ಪ್ರಿಫ‌ರೆನ್ಸಸ್‌- ಜಿಎಸ್‌ಪಿ) ಸ್ಥಾನಮಾನವನ್ನು ರದ್ದುಗೊಳಿಸಿದ್ದರು. ಇದಕ್ಕೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ ಈ ನಿರ್ಧಾರನ್ನು ಹಿಂಪಡೆದು ಜಿಎಸ್‍ಪಿಯನ್ನು ಭಾರತಕ್ಕೆ ನೀಡಲು ದೊಡ್ಡಣ್ಣ ಚಿಂತನೆ ನಡೆಸಿದ್ದಾನೆ.

GSP ಎಂದರೇನು?

ಜಿಎಸ್‍ಪಿಯು ಅಮೆರಿಕದ ಅತಿದೊಡ್ಡ ಮತ್ತು ಹಳೆಯ ವ್ಯಾಪಾರ ಆದ್ಯತೆಯ ಕಾರ್ಯಕ್ರಮವಾಗಿದೆ. ಇದರ ಫಲಾನುಭವಿ ರಾಷ್ಟ್ರಗಳ ಉತ್ಪನ್ನಗಳಿಗೆ ಸುಂಕ ರಹಿತ ಪ್ರವೇಶ ನೀಡಲಾಗುತ್ತದೆ.

ಪ್ರಸ್ತುತ ಅಮೆರಿಕವು ಭಾರತದೊಂದಿಗೆ ಈ ಕುರಿತಾಗಿ ಮಾತುಕತೆ ನಡೆಸುತ್ತಿದ್ದು, ಜಿಎಸ್‌ಪಿ ಕುರಿತು ಪ್ರಸ್ತಾಪ ಮಾಡಿ ಭಾರತಕ್ಕೆ ಆದ್ಯತಾ ವ್ಯಾಪಾರ ಸ್ಥಾನಮಾನವನ್ನು ಪುನಃ ನೀಡುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಅಲ್ಲಿನ ವಾಣಿಜ್ಯ ಪ್ರತಿನಿಧಿ ರಾಬರ್ಟ್ ಲೈಟ್‌ಜೈಜರ್ ಗುರುವಾರ ಸೆನೆಟ್​ನ ಹಣಕಾಸು ಸಮಿತಿಯ ಸದಸ್ಯರಿಗೆ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.