ETV Bharat / international

WHO ಅಲರ್ಟ್​: ಕೊರೊನಾ ನಿಯಂತ್ರಣಕ್ಕೆ 2 ಟ್ರಿಲಿಯನ್​ ಡಾಲರ್​ ಮೀಸಲಿಡಲು ದೊಡ್ಡಣ್ಣನ​ ಚಿಂತನೆ - ಜಿನಿವಾ

ವಿಶ್ವದ ದೊಡ್ಡಣ್ಣ ಅಮೆರಿಕಾಗೆ ಕೊರೊನಾ ವೈರಸ್​ ಸವಾಲಾಗಿ ಕಾಡುತ್ತಿದೆ. ಸದ್ಯಕ್ಕೆ 55 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದ್ದು 797 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ತಡೆಯಲು 2 ಟ್ರಿಲಿಯನ್​ ಡಾಲರ್​ ಮೀಸಲಿಡಲು ಅಮೆರಿಕಾ ಚಿಂತನೆ ನಡೆಸಿದೆ.

US may become new epicenter of coronavirus pandemic
ಅಮೆರಿಕ ಕೊರೊನಾ ಮಹಾಮಾರಿ ಕೇಂದ್ರಬಿಂದುವಾಗುವ ಸಾಧ್ಯತೆ ಎಂದ ಡಬ್ಯೂಹೆಚ್ಓ
author img

By

Published : Mar 25, 2020, 12:18 PM IST

Updated : Mar 26, 2020, 12:21 PM IST

ಜಿನಿವಾ: ಅಮೆರಿಕ ಕೊರೊನಾ ಮಹಾಮಾರಿಗೆ ಹೊಸ ಕೇಂದ್ರ ಬಿಂದುವಾಗುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಘಟನೆಯ ವಕ್ತಾರ ಮಾರ್ಗರೇಟ್​ ಹ್ಯಾರೀಸ್​ ಆತಂಕ ವ್ಯಕ್ತಪಡಿಸಿದ್ದಾರೆ. ಯೂರೋಪಿನಲ್ಲಿ ತೀವ್ರಗತಿಯಲ್ಲಿ ಕೊರೊನಾ ಹರಡುತ್ತಿದ್ದು ಅಮೆರಿಕಾದಲ್ಲಿಯೂ ಕೂಡಾ ಆತಂಕ ಮೂಡಿಸಿದೆ ಎಂದು ಜಿನೆವಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾರ್ಗರೇಟ್​ ಹ್ಯಾರೀಸ್​ ಸ್ಪಷ್ಟಪಡಿಸಿದ್ದಾರೆ.

ಅಮೆರಿಕದಲ್ಲಿ 797 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಸುಮಾರು 55,222 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ. 354 ಮಂದಿ ಕೊರೊನಾ ಮಹಾಮಾರಿಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಹಿಂದಿನ ಶನಿವಾರದ ವರದಿಯಂತೆ ಶೇಕಡಾ 75ರಷ್ಟು ಹೊಸ ಕೊರೊನಾ ಪ್ರಕರಣಗಳು ಯೂರೋಪ್​ ರಾಷ್ಟ್ರಗಳಿಂದ ಕಂಡು ಬಂದರೆ, ಶೇಕಡಾ 15ರಷ್ಟು ಪ್ರಕರಣಗಳು ಅಮೆರಿಕದಿಂದ ಕಂಡುಬಂದಿವೆ. ಹಿಂದಿನ 24ಗಂಟೆಗಳ ಅವಧಿಯಲ್ಲಿ ಅರ್ಧದಷ್ಟು ಹೊಸ ಕೊರೊನಾ ಪ್ರಕರಣಗಳು ಯೂರೋಪಿನಲ್ಲಿ ಕಂಡುಬಂದಿದ್ದು, ಶೇಕಡಾ 40ರಷ್ಟು ಪ್ರಕರಣಗಳು ಅಮೆರಿಕಾದಿಂದ ಕಂಡುಬಂದಿವೆ.

ಅಮೆರಿಕ ಕೊರೊನಾ ತಡೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗಾಗಲೇ ಅಲ್ಲಿನ ಸಂಸತ್​ ಹಾಗೂ ಶ್ವೇತಭವನ 2 ಟ್ರಿಲಿಯನ್​ ಡಾಲರ್​ಗಳನ್ನು ಕೊರೊನಾದಿಂದ ರಕ್ಷಣೆಗಾಗಿ ಮೀಸಲಿಡಲು ಚಿಂತನೆ ನಡೆಸಲಾಗಿದೆ.

Last Updated : Mar 26, 2020, 12:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.