ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಅತಿ ಎತ್ತರದ ವಿಶ್ವ ವಾಣಿಜ್ಯ ಕೇಂದ್ರ (WTC)ದ ಅವಳಿ ಗೋಪುರಗಳಿಗೆ ಅಲ್‌ಖೈದಾ ಉಗ್ರರು ವಿಮಾನಗಳನ್ನು ನುಗ್ಗಿಸಿ ನಡೆಸಿದ್ದ ಭೀಕರ ದಾಳಿಗೆ ಇಂದಿಗೆ ಸರಿಯಾಗಿ ಎರಡು ದಶಕಗಳು ಸಂದಿವೆ.
ಅಂದು ನಡೆದದ್ದೇನು?
9/11 ದಾಳಿ ಎಂದೇ ಕರೆಯಲ್ಪಡುವ ಈ ಘಟನೆ ನಡೆದದ್ದು 2001ರ ಸೆಪ್ಟೆಂಬರ್ 11 ರಂದು. ಹೆಸರು ಕೇಳಿದರೆ ಜಗತ್ತೇ ಭಯಬೀಳುವ ಉಗ್ರ ಒಸಾಮಾ ಬಿನ್ ಲಾಡನ್ ಸಂಚಿನ ಮೇರೆಗೆ ಅಲ್ ಖೈದಾ ಉಗ್ರರು ಈ ದಾಳಿ ನಡೆಸಿದ್ದರು. ನಾಲ್ಕು ವಿಮಾನಗಳನ್ನು ಅಪಹರಿಸಿದ್ದ 19 ಮಂದಿ ಅಲ್‌ಖೈದಾ ಉಗ್ರರು ಅವುಗಳನ್ನು 110 ಮಹಡಿಗಳ ಅವಳಿ ಕಟ್ಟಡಗಳ ಒಳಗೆ ನುಗ್ಗಿಸಿದ್ದರು. ಹೊತ್ತಿ ಉರಿದ ಕಟ್ಟಡಗಳು ನೋಡುನೋಡುತ್ತಿದ್ದಂತೆಯೇ ಕೆಲವೇ ಹೊತ್ತಿನಲ್ಲೇ ನೆಲಸಮವಾಗಿದ್ದವು.
-
11 सितंबर 2001- दहशत, चीख-पुकार और मौत
— BBC News Hindi (@BBCHindi) September 9, 2021 " class="align-text-top noRightClick twitterSection" data="
ये तारीख अमेरिकी इतिहास में इन्हीं शब्दों से याद की जाती है, 20 साल पहले इसी दिन अमेरिका में चार विमानों को मिसाइल की तरह इस्तेमाल किया गया था, जिनमें 3000 से ज़्यादा लोग मारे गए. उन हमलों के 102 मिनटों के दौरान क्या-क्या हुआ? pic.twitter.com/OnP1T9nADi
">11 सितंबर 2001- दहशत, चीख-पुकार और मौत
— BBC News Hindi (@BBCHindi) September 9, 2021
ये तारीख अमेरिकी इतिहास में इन्हीं शब्दों से याद की जाती है, 20 साल पहले इसी दिन अमेरिका में चार विमानों को मिसाइल की तरह इस्तेमाल किया गया था, जिनमें 3000 से ज़्यादा लोग मारे गए. उन हमलों के 102 मिनटों के दौरान क्या-क्या हुआ? pic.twitter.com/OnP1T9nADi11 सितंबर 2001- दहशत, चीख-पुकार और मौत
— BBC News Hindi (@BBCHindi) September 9, 2021
ये तारीख अमेरिकी इतिहास में इन्हीं शब्दों से याद की जाती है, 20 साल पहले इसी दिन अमेरिका में चार विमानों को मिसाइल की तरह इस्तेमाल किया गया था, जिनमें 3000 से ज़्यादा लोग मारे गए. उन हमलों के 102 मिनटों के दौरान क्या-क्या हुआ? pic.twitter.com/OnP1T9nADi
ಇದನ್ನೂ ಓದಿ: ಶತ್ರುಗಳ ಶತ್ರು ಮಿತ್ರ.. ತಾಲಿಬಾನ್ಗೆ 228 ಕೋಟಿ ರೂ. ನೆರವು ಘೋಷಿಸಿದ ಚೀನಾ
ಸುಮಾರು 3,000 ಮಂದಿ ಬಲಿ
ಆ ವಿಮಾನಗಳಲ್ಲಿದ್ದ 246 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಗೋಪುರಗಳಲ್ಲಿದ್ದ 2,500ಕ್ಕೂ ಅಧಿಕ ಮಂದಿ ಸೇರಿ ಒಟ್ಟು ಸುಮಾರು 3,000 ಮಂದಿ ಬಲಿಯಾಗಿದ್ದರು. 6,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮೃತರ ಪೈಕಿ 1,106 ಮಂದಿಯನ್ನು ಇನ್ನೂ ಕೂಡ ಗುರುತಿಸಲಾಗಿಲ್ಲ. ಯುಎಸ್ ಇತಿಹಾಸದಲ್ಲೇ ಅತ್ಯಂತ ಭೀಕರ ಹಾಗೂ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಭಯೋತ್ಪಾದಕ ಕೃತ್ಯ ಇದಾಗಿತ್ತು.
ಈ ದುರ್ಘಟನೆ ನಡೆದು 20 ವರ್ಷಗಳು ಸಂದಿದ್ದರೂ ಕೂಡ ಅದರ ಪರಿಣಾಮ ಮಾತ್ರ ಇನ್ನೂ ಜೀವಂತವಾಗಿದೆ. ಏಕೆಂದರೆ, ಘಟನೆ ಬಳಿಕ ಉಳಿದ ಅವಶೇಷಗಳನ್ನು ಸ್ವಚ್ಛಗೊಳಿಸುವ, ತುಂಡುತುಂಡಾದ ಮೃತದೇಹಗಳನ್ನು ತೆಗೆದು ಹಾಕುವ ಕಾರ್ಯಾಚರಣೆಯಲ್ಲಿ ತೊಡಗಿದ್ದ 91,000ಕ್ಕೂ ಹೆಚ್ಚು ಕಾರ್ಮಿಕರು, ಸ್ವಯಂಸೇವಕರು ಇಂದಿಗೂ ಕೂಡ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀ ಮಾಧ್ಯಮದ ತನಿಖಾ ವರದಿ ಹೇಳತ್ತದೆ.