ವಾಷಿಂಗ್ಟನ್ : COVID ವೈರಸ್ ಚೀನಾದಲ್ಲಿ ಹುಟ್ಟುಕೊಂಡಿತೆ ಎಂಬುದರ ಬಗ್ಗೆ ತನಿಖೆ ನಡೆಸಲು 9/11 ದಾಳಿ (ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ನಡೆದ ದಾಳಿ) ಯ ಬಳಿಕ ಮಾಡಿದ ಮಾದರಿಯಲ್ಲೇ ಉಭಯಪಕ್ಷೀಯ ಆಯೋಗ ರಚಿಸುವಂತೆ ಯುಎಸ್‌ನ ಡೆಮಾಕ್ರಟಿಕ್ ಸಂಸದರ ಗುಂಪು ಕಾಂಗ್ರೆಸ್ (ಸಂಸತ್) ನಾಯಕರನ್ನು ಕೋರಿದೆ.
ಯುಎಸ್ ಕಾಂಗ್ರೆಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರಿಗೆ, ಡೆಮಾಕ್ರಟಿಕ್ ಬ್ಲೂ ಡಾಗ್ ಒಕ್ಕೂಟದ ಸದಸ್ಯರಾದ ಹೌಸ್ ಮೆಜಾರಿಟಿ ಲೀಡರ್ ಸ್ಟೆನಿ ಹೋಯರ್, ಹೌಸ್ ಮೈನಾರಿಟಿ ಲೀಡರ್ ಕೆವಿನ್ ಮೆಕಾರ್ಥಿ, ಸೆನೆಟ್ ಮೆಜಾರಿಟಿ ಲೀಡರ್ ಚಕ್ ಶುಮರ್ ಮತ್ತು ಸೆನೆಟ್ ಮೈನಾರಿಟಿ ಲೀಡರ್ ಮಿಚ್ ಮೆಕ್‌ಕಾನ್ನೆಲ್ ಪತ್ರ ಬರೆದಿದ್ದಾರೆ. ಅದರಲ್ಲಿ 9/11 ರ ಮಾದರಿಯಲ್ಲೇ ತನಿಖಾ ಆಯೋಗ ರಚಿಸುವಂತೆ ಮನವಿ ಮಾಡಿದ್ದಾರೆ.
ಓದಿ : ಕೋವಿಡ್ ಬಳಿಕ ಮಂದಗತಿಯಲ್ಲಿ ಏರಿಕೆ ಕಾಣುತ್ತಿರುವ China ಆರ್ಥಿಕತೆ!
ಕೋವಿಡ್ -19 ಸಾಂಕ್ರಾಮಿಕದ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ಆಯೋಗ ಸ್ಥಾಪಿಸುವ ಶಾಸನವನ್ನು ಅಂಗೀಕರಿಸಲು ನಾವು ಒತ್ತಾಯಿಸುತ್ತೇವೆ. ಡಬ್ಲ್ಯುಟಿಸಿ ಮೇಲೆ ಭಯೋತ್ಪದಕರು ದಾಳಿ (9/11) ನಡೆಸಿದ ಬಳಿಕ 2002 ರಲ್ಲಿ ರಚಿಸಿದಂತೆ ಆಯೋಗ ರಚಿಸಿ ಎಂದು ಪತ್ರದಲ್ಲಿ ಸಂಸದರು ಆಗ್ರಹಿಸಿದ್ದಾರೆ.