ETV Bharat / international

ಉಯಿಘರ್​ ಮುಸ್ಲಿಮರಿಗೆ ಹಕ್ಕು ನೀಡೋ ಮಸೂದೆ ಅಂಗೀಕರಿಸಿದ ಅಮೆರಿಕ ಸಂಸತ್​​

author img

By

Published : May 28, 2020, 7:33 PM IST

ಉಯಿಘರ್​ ಮತ್ತು ಇತರ ಮುಸ್ಲಿಂ ಅಲ್ಪಸಂಖ್ಯಾತರಿಗೆ ಕಿರುಕುಳ ಕೊಟ್ಟು ನಿಂದಿಸಿದ ಆರೋಪದ ಮೇಲೆ ಚೀನಾದ ಅಧಿಕಾರಿಗಳಿಗೆ ನಿರ್ಬಂಧ ಹೇರುವ ಮತ್ತು ಉಯಿಘರ್​ಗಳ ಹಕ್ಕುಗಳನ್ನು ರಕ್ಷಿಸುವ ಮಸೂದೆಯೊಂದನ್ನು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿದೆ.

ವಾಷಿಂಗ್ಟನ್ : ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಉಯಿಘರ್ ಮತ್ತು ಇತರ ಮುಸ್ಲಿಂ ಅಲ್ಪಸಂಖ್ಯಾತರನ್ನು ನಿಂದಿಸಿ, ಕಿರುಕುಳ ಕೊಟ್ಟ ಆರೋಪದ ಮೇಲೆ ಚೀನಾದ ಮೇಲೆ ನಿರ್ಬಂಧ ಹೇರುವ ಮತ್ತು ಉಯಿಘರ್​ಗಳ ಹಕ್ಕುಗಳನ್ನು ರಕ್ಷಿಸುವ ಮಸೂದೆಯನ್ನು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅಂಗೀಕರಿಸಿದೆ.

ಡೆಮೋಕ್ರಾಟ್ ನಿಯಂತ್ರಿತ ಸದನವು ಮಸೂದೆಯನ್ನು 431/1 ರಿಂದ ಅಂಗೀಕರಿಸಿತು, ಆದ್ದರಿಂದ ಎರಡು ವಾರಗಳ ಹಿಂದೆ ರಿಪಬ್ಲಿಕನ್ ಬಹುಮತದ ಸೆನೆಟ್ ಮಂಡಿಸಿದ ಮಸೂದೆಯು ಈಗ ಪಾಸ್​ ಆಗಿದ್ದು, ಡೊನಾಲ್ಡ್​ ಟ್ರಂಪ್​ ಸಹಿ ಹಾಕಬೇಕಿದೆ.

ಈ ಮಸೂದೆಯೂ ಕಾನೂನಾಗಿ ಜಾರಿಯಾದರೆ, ಉಯಿಘರ್​ ಮುಸ್ಲಿಮರಿಗೆ ಕಿರುಕುಳ ಕೊಟ್ಟ ಚೀನಾದ ಅಧಿಕಾರಿಗಳ ವಿರುದ್ಧ ನಿರ್ಬಂಧ ಹೇರಲಾಗುತ್ತದೆ. ಮಸೂದೆಯ ಅನುಮೋದನೆ ಮೂಲಕ ಕಿರುಕುಳಕ್ಕೊಳಗಾದವರನ್ನು ನಮಗೆ ಮರೆಯಲಾಗುವುದಿಲ್ಲ ಎಂಬ ಸಂದೇಶವನ್ನು ಕಳುಹಿಸುತ್ತಿದ್ದೇವೆ ಎಂದು ಸದನದ ಸ್ಪೀಕರ್ ನ್ಯಾನ್ಸಿ ಪೆಲ್ಲೋಸಿ ಹೇಳಿದ್ದಾರೆ. ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಉಯಿಘರ್ ಮುಸ್ಲಿಮರನ್ನು ಬಂಧನ ಶಿಬಿರಗಳಲ್ಲಿ ಇರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.