ETV Bharat / international

ಅಮೆರಿಕದಲ್ಲಿ ಕೋಲಾಹಲ ಎಬ್ಬಿಸಿದ ಫ್ಲಾಯ್ಡ್‌ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ದೋಷಿ‌ - ಪೊಲೀಸ್‌ ಅಧಿಕಾರಿ ಡೆರೆಕ್‌ ಚೌವಿನ್‌ ದೋಷಿ

ಅಮೆರಿಕದಲ್ಲಿ ನಡೆದ ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್‌ ಫ್ಲಾಯ್ಡ್ ಹತ್ಯೆ‌ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿ ಡೆರೆಕ್‌ ಚೌವಿನ್ ದೋಷಿ ಎಂದು ಅಲ್ಲಿನ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಈ ತೀರ್ಪನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸ್ವಾಗತಿಸಿದ್ದು, ಫ್ಲಾಯ್ಡ್‌ ಪ್ರಕರಣದ ತೀರ್ಪು ಅಮೆರಿಕದ ನ್ಯಾಯ ವ್ಯವಸ್ಥೆಯಲ್ಲಿ ದೊಡ್ಡ ಹೆಜ್ಜೆ ಎಂದು ಬಣ್ಣಿಸಿದ್ದಾರೆ.

US : Former Minneapolis policeman Derek Chauvin convicted of George Floyd's murder
ಅಮೆರಿಕದಲ್ಲಿ ಕಪ್ಪು ವರ್ಣೀಯ ಫ್ಲಾಯ್ಡ್‌ ಹತ್ಯೆ ಪ್ರಕರಣ; ಪೊಲೀಸ್‌ ಅಧಿಕಾರಿ ಡೆರೆಕ್‌ ಚೌವಿನ್‌ ದೋಷಿ
author img

By

Published : Apr 21, 2021, 6:29 AM IST

Updated : Apr 21, 2021, 7:12 AM IST

ವಾಷಿಂಗ್ಟನ್‌: ಅಮೆರಿಕದಲ್ಲಿ ಪೊಲೀಸರ ವಶದಲ್ಲಿದ್ದಾಗಲೇ ಸಾವಿಗೀಡಾಗಿದ್ದ ಕಪ್ಪು ವರ್ಣೀಯ ಜಾರ್ಜ್‌ ಫ್ಲಾಯ್ಡ್‌ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿ ಡೆರೆಕ್‌ ಚೌವಿನ್ 'ದೋಷಿ' ಎಂದು ಅಲ್ಲಿನ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

US : Former Minneapolis policeman Derek Chauvin convicted of George Floyd's murder
ಕಪ್ಪು ವರ್ಣೀಯ ಫ್ಲಾಯ್ಡ್‌ ಅವರ ಕುತ್ತಿಗೆಗೆ ಮೊಣಕಾಲಿನಲ್ಲಿ ಒದ್ದು ಹಿಡಿದಿಟ್ಟುಕೊಂಡಿರುವ ಪೊಲೀಸ್‌ ಅಧಿಕಾರಿ ಡೆರೆಕ್ ಚೌವಿನ್‌‌. ತೀವ್ರವಾಗಿ ಗಾಯಗೊಂಡಿದ್ದ ಫ್ಲಾಯ್ಡ್‌ ನಂತರ ಪೊಲೀಸ್‌ ವಶದಲ್ಲಿ ಸಾವಿಗೀಡಾಗಿದ್ದರು.

ಮೇ 25, 2020 ಅಮೆರಿಕ ಇತಿಹಾಸದ 'ಕಪ್ಪು' ದಿನ

ಕಳೆದ ವರ್ಷ ಮೇ 25 ರಂದು ಫ್ಲಾಯ್ಡ್‌ ಅವರನ್ನು ಪೊಲೀಸ್‌ ಅಧಿಕಾರಿ ಡೆರೆಕ್‌ ಚೌವಿನ್‌ 9 ನಿಮಿಷ ಮೊಣಕಾಲಿನಿಂದ ತುಳಿದು ಅಮಾನವೀಯವಾಗಿ ವರ್ತಿಸಿದ್ದರು. ಈ ಮೂಲಕ ಕಪ್ಪುವರ್ಣೀಯ ವ್ಯಕ್ತಿಯ ಹತ್ಯೆಗೆ ಕಾರಣರಾಗಿದ್ದರು. ಪ್ಲಾಯ್ಡ್‌ ಸಾವು ಅಮೆರಿಕಾದೆಲ್ಲೆಡೆ ವ್ಯಾಪಕ ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾಗಿತ್ತು. ಮಾತ್ರವಲ್ಲದೆ, ಜನಾಂಗೀಯ ಭೇದಭಾವದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಹತ್ಯೆಯಾದ ಜಾರ್ಜ್ ಫ್ಲಾಯ್ಡ್‌

ಇದನ್ನೂ ಓದಿ: ಜಾರ್ಜ್‌ ಫ್ಲಾಯ್ಡ್‌ ಹತ್ಯೆ ವಿವಾದ... ಸ್ಯಾಂಟಾ ಮೊನಿಕಾದ ಬೀಚ್​​​​​ ತೀರದಲ್ಲಿ ತೀವ್ರಗೊಂಡ ಪ್ರತಿಭಟನೆ

ಈ ಘಟನೆ ಸಂಬಂಧ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಫ್ಲಾಯ್ಡ್‌ ಪ್ರಕರಣದ ತೀರ್ಪು ಅಮೆರಿಕದ ನ್ಯಾಯ ವ್ಯವಸ್ಥೆಯಲ್ಲಿ ದೊಡ್ಡ ಹೆಜ್ಜೆ ಎಂದು ಬಣ್ಣಿಸಿದ್ದಾರೆ.

Last Updated : Apr 21, 2021, 7:12 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.