ಹೈದರಾಬಾದ್ : ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಲ್ಯಾಬ್ ಕಾರ್ಪ್‌ಗೆ ಪ್ರಾಥಮಿಕ ತುರ್ತು ಸಂದರ್ಭದ ಬಳಕೆಯ ಅಧಿಕಾರವನ್ನು ನೀಡಿದೆ. ಇದು ಕೋವಿಡ್-19 ಆರ್‌ಟಿ-ಪಿಸಿಆರ್ ಪರೀಕ್ಷೆಯೊಂದಿಗೆ ಕೊರೊನಾ ವೈರಸ್ ಕಾಯಿಲೆ ಇರುವ ರೋಗಿಗಳೂ ಕೂಡ ಸ್ವಯಂ ಪ್ರೇರಿತರಾಗಿ ಮೂಗಿನ ದ್ರವದ ಮಾದರಿಯನ್ನು ಸಂಗ್ರಹಿಸಬಹುದಾಗಿದೆ.
ಎಫ್‌ಡಿಎ ಆಯುಕ್ತ ಸ್ಟೀಫನ್ ಹಾನ್ ಹೇಳುವಂತೆ, ಸಾಂಕ್ರಾಮಿಕ ರೋಗ ಬಂದಿರುವ ಬಗ್ಗೆ ರೋಗಿಗಳೂ ಖಚಿತಪಡಿಸಿಕೊಳ್ಳುವಂತೆ ನಾವು ಅನುಕೂಲ ಮಾಡಿಕೊಡುತ್ತಿದ್ದೇವೆ. ಇದರಲ್ಲಿ ವಿಶ್ವಾಸಾರ್ಹವಾಗಿ ಮತ್ತು ನಿಖರವಾಗಿ ಮನೆಯಲ್ಲಿಯೇ ಮೂಗಿನ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷಿಸಿಕೊಳ್ಳಬಹುದು ಎಂದರು.
ಲ್ಯಾಬ್‌ಕಾರ್ಪ್ ಕಿಟ್‌ಗಳನ್ನು ಆರಂಭದಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಮತ್ತು ರೋಗಲಕ್ಷಣಗಳನ್ನು ಹೊಂದಿರುವವರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.