ವಾಷಿಂಗ್ಟನ್ (ಯುಎಸ್ಎ): ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಚಾಲೆಂಜರ್ ಜೋ ಬೈಡನ್ ನಡುವೆ ಆಯ್ಕೆ ಮಾಡಲು ಲಕ್ಷಾಂತರ ಮತದಾರರು ಕೊರೊನಾ ವೈರಸ್ ನಡುವೆಯೂ ಮತ ಚಲಾಯಿಸಿದರು.
ವೈಯಕ್ತಿಕವಾಗಿ ಬಂದು ಮತ ಚಲಾಯಿಸಿದವರು ಕೆಲ ದಿನಗಳು ಅಥವಾ ವಾರಗಳ ಮೊದಲು ಮತ ಚಲಾಯಿಸಿದ 102 ಮಿಲಿಯನ್ ಅಮೆರಿಕನ್ನರನ್ನು ಸೇರಿಕೊಂಡರು. ಇದು 2016ರ ಅಧ್ಯಕ್ಷೀಯ ಚುನಾವಣೆಯ ಒಟ್ಟು ಮತಗಳ ಪೈಕಿ ಶೇಕಡಾ 73ರಷ್ಟು ಮತಗಳನ್ನು ಪ್ರತಿನಿಧಿಸಿದೆ.
![US Election 2020 Live: Joe Biden vs Donald Trump](https://etvbharatimages.akamaized.net/etvbharat/prod-images/9423129_mapusa.png)
ಈ ನಡುವೆ ಡೊನಾಲ್ಡ್ ಟ್ರಂಪ್ ಫ್ಲೋರಿಡಾ, ಟೆಕ್ಸಾಸ್ ಅನ್ನು ತಮ್ಮ ತೆಕ್ಕೆಗೆ ಪಡೆದುಕೊಂಡಿದ್ದಾರೆ. ಉಭಯ ನಾಯಕರು ತಾವೇ ಗೆಲುವು ಸಾಧಿಸುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.
ಫಲಿತಾಂಶ ನಮ್ಮ ಪರವಾಗಿ ಬರಲಿದೆ ಎಂದು ಡೊನಾಲ್ಡ್ ಟ್ರಂಪ್ ಹಾಗೂ ಜೋ ಬೈಡನ್ ಇಬ್ಬರೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.