ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ಇರುವ 3,000 ಸೈನಿಕರನ್ನು ಹೊರತುಪಡಿಸಿ, ಅಮೆರಿಕ ತನ್ನ ಸೈನ್ಯವನ್ನು ಹಿಂತೆಗೆದುಕೊಂಡ ನಂತರ ಅಲ್ಲಿ ಎದುರಾಗಿರುವ ಪರಿಣಾಮಗಳನ್ನು ನಿರ್ವಹಿಸಲು 3,500ಕ್ಕೂ ಹೆಚ್ಚು ಸೈನಿಕರನ್ನು ಕುವೈತ್‌ನಲ್ಲಿ ಸಿದ್ಧವಾಗಿ ಇರಿಸಿದೆ. ವಿಶೇಷ ವಲಸೆ ವೀಸಾ (SIV) ಅರ್ಜಿದಾರರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವವರೆಗೆ ಇವರ ನೆರವಿಗಾಗಿ 1,000 ಯೋಧರು ಕತಾರ್‌ಗೆ ತೆರಳಲಿದ್ದಾರೆ ಎಂದು ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ತಿಳಿಸಿದ್ದಾರೆ.
3 ಬೆಟಾಲಿಯನ್‌ಗಳು ಮುಂದಿನ 24-48 ಗಂಟೆಗಳಲ್ಲಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ತೆರಳಲಿವೆ. ಇದರಲ್ಲಿ ಸುಮಾರು 3,000 ಯೋಧರಿದ್ದಾರೆ ಎಂದಿರುವ ಜಾನ್ ಕಿರ್ಬಿ, ಕೋರಿಕೆಯ ಮೇರೆಗೆ ನಾಗರಿಕ ಸಿಬ್ಬಂದಿಯನ್ನು ಕ್ರಮಬದ್ಧವಾಗಿ ಮತ್ತು ಸುರಕ್ಷಿತವಾಗಿ ಕಡಿಮೆ ಮಾಡಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಇದು ಸಂಕುಚಿತ ಗಮನವನ್ನು ಹೊಂದಿರುವ ತಾತ್ಕಾಲಿಕ ಕಾರ್ಯಾಚರಣೆಯಾಗಿದೆ. ನಮ್ಮ ಕಮಾಂಡರ್‌ಗಳಿಗೆ ಸ್ವ-ರಕ್ಷಣೆಯ ಅಂತರ್ಗತ ಹಕ್ಕಿದೆ. ಅವರ ಮೇಲಿನ ಯಾವುದೇ ದಾಳಿಯು ಬಲವಾದ ಪ್ರತಿಕ್ರಿಯೆಯನ್ನು ಪಡೆಯಬಹುದು ಕಿರ್ಬಿ ಹೇಳಿದ್ದಾರೆ.
ಇದನ್ನೂ ಓದಿ: ನೂರಾರು ಸೈನಿಕರನ್ನ ಕಳೆದುಕೊಂಡಿದ್ದೇವೆ; ಅಫ್ಘಾನ್ ರಕ್ಷಣೆಗೆ ಅಲ್ಲಿನ ನಾಯಕರೇ ಒಂದಾಗ್ಲಿ: ಬೈಡನ್
ಬ್ರಿಟಿಷ್ ಪ್ರಜೆಗಳು ಅಫ್ಘಾನ್ ತೊರೆಯಲು ಬೇಕಿರುವ ನೆರವಿಗಾಗಿ ಸುಮಾರು 600 ಯುಕೆ ಪಡೆಗಳನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗುವುದು ಎಂದು ಯುಕೆ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್ ಕೂಡ ಘೋಷಿಸಿದ್ದಾರೆ.