ETV Bharat / international

ಕೊರೊನಾ ವೈರಸ್ ಸೋಂಕು: ಅಮೆರಿಕದಲ್ಲಿ ಬರೋಬ್ಬರಿ ನೂರಕ್ಕೇರಿದ ಸಾವಿನ ಸಂಖ್ಯೆ - coronavirus in the United States

ಇಡೀ ವಿಶ್ವವೇ ಈ ಕಣ್ಣಿಗೆ ಕಾಣದ ವೈರಣುವಿನೊಂದಿಗೆ ಯುದ್ಧಕ್ಕೆ ನಿಂತಿದೆ. ಈ ಯುದ್ಧದಲ್ಲಿ ಖಂಡಿತವಾಗಿ ನಾವೇ ಜಯ ಸಾಧಿಸುತ್ತೇವೆ ಎನ್ನುವ ಮೂಲಕ ಅಮೆರಿಕ ಅಧ್ಯಕ್ಷ ಕೊರೊನಾ ವಿರುದ್ಧ ಸಮರ ಸಾರಿದ್ದಾರೆ.

US coronavirus deaths climb to 100: AFP tally
ಕರೋನ ವೈರಸ್ ಸೋಂಕು: ಬರೋಬ್ಬರಿ ನೂರಕ್ಕೆ ಏರಿದ ಯುಎಸ್ ಸಾವಿನ ಸಂಖ್ಯೆ
author img

By

Published : Mar 18, 2020, 10:05 AM IST

ವಾಷಿಂಗ್ಟನ್: ಕೊರೊನಾ ದಾಳಿಗೆ ಈವರೆಗೂ ಅಮೆರಿಕದಲ್ಲಿ ಬಲಿಯಾದವರ ಸಂಖ್ಯೆ 100 ತಲುಪಿದೆ. ವಾಯುವ್ಯ ಅಮೆರಿಕದ ಭಾಗವಾದ ವಾಷಿಂಗ್​ಟನ್​ ನಲ್ಲಿ ಸಾವಿನಪ್ಪಿದವರ ಸಂಖ್ಯೆ 50 ಆಗಿದ್ದು, ಅಧಿಕವೆನಿಸಿದೆ. ಹಾಗೆಯೇ ನ್ಯೂಯಾರ್ಕ್​ನಲ್ಲಿ 12 ಮತ್ತು ಕಾಲಿಫೋರ್ನಿಯಾದಲ್ಲಿ 11 ಮಂದಿ ಕೊರೋನಾ ಮಹಾಮಾರಿಗೆ ತುತ್ತಾಗಿದ್ದಾರೆ.

ಇನ್ನೂ ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಾತನಾಡಿ, ಇಡೀ ವಿಶ್ವವೇ ಈ ಕಣ್ಣಿಗೆ ಕಾಣದ ವೈರಣುವಿನೊಂದಿಗೆ ಯುದ್ಧಕ್ಕೆ ನಿಂತಿದೆ. ಈ ಯುದ್ಧದಲ್ಲಿ ಖಂಡಿತವಾಗಿ ನಾವೇ ಜಯ ಸಾಧಿಸುತ್ತೇವೆ. ದೇಶದಲ್ಲಿ ಲಭ್ಯವಿರುವ ಎಲ್ಲಾ ಸೌಕರ್ಯಗಳನ್ನು ಬಳಸಿಕೊಂಡು ವೈರಾಣು ಒಡ್ಡಿರುವ ಈ ಚಾಲೆಂಜ್​ನಲ್ಲಿ ನಾವು ಗೆದ್ದು ಬರಲಿದ್ದೇವೆ ಎಂದು ಕೊರೋನಾ ವಿರುದ್ಧದ ತಮ್ಮ ಹೋರಾಟದ ನಿಲುವನ್ನು ವ್ಯಕ್ತಪಡಿಸಿದರು.

ಈ ಬಗ್ಗೆ ಅಧ್ಯಕ್ಷ ಟ್ರಂಪ್ ಟ್ವೀಟ್​ ಮಾಡಿ​, " ಇಡೀ ವಿಶ್ವವೇ ಈ ಅಗೋಚರ ಶತ್ರುವಿನೊಂದಿಗೆ ಯುದ್ಧಕ್ಕೆ ನಿಂತಿದೆ!" ಎಂದು ಬರೆದುಕೊಂಡಿದ್ದಾರೆ.

ಮಂಗಳವಾರ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್​ ಮಾತನಾಡಿ, ನಾವು ಈ ಸಂಕಷ್ಟದಿಂದ ಹೊರಬರಬೇಕು ಅದಕ್ಕಾಗಿ ನಾವು ಈ ಯುದ್ಧವನ್ನು ತ್ವರಿತವಾಗಿ ಮಾತ್ರವಲ್ಲದೇ ಆದರ್ಶವಾಗುವ ರೀತಿಯಲ್ಲಿ ಎದುರಿಸಿ ಗೆಲ್ಲಬೇಕು ಎಂದು ಹೇಳಿದರು.

ವೈರಸ್​ ದಾಳಿಯಿಂದ ಆರ್ಥಿಕ ಸ್ಥಿತಿ ಹದಗೆಡುತ್ತಿದ್ದು, ಇದರಿಂದ ಉದ್ಯಮಗಳಿಗೆ ಸಾಕಷ್ಟು ಹಾನಿಯಾಗಿದೆ ಎಂದು ನಮಗೆ ತಿಳಿದಿದೆ. ವೈರಸ್ ದಾಳಿಯನ್ನು ಸೋಲಿಸುವುದು ನಮ್ಮ ಗುರಿಯಾಗಿದೆ ಮತ್ತು ನಾವು ಅದನ್ನು ಮಾಡೇ ಮಾಡುತ್ತೇವೆ. ಇದಕ್ಕೆ ಜಗತ್ತಿನಾದ್ಯಂತ ಹಿಂದೆಂದಿಗಿಂತಲೂ ಹೆಚ್ಚು ಮಂದಿ ಇದಕ್ಕೆ ಸಹಕರಿಸುತ್ತಿದ್ದಾರೆ ಎಂದು ಟ್ರಂಪ್​ ಹೇಳಿದರು.

ಭಯೋತ್ಪಾದಕ ದಾಳಿಗಿಂತ ಕರೋನವೈರಸ್ ಸಾಂಕ್ರಾಮಿಕವು ಎರಡನೆಯ ಮಹಾಯುದ್ಧದಂತಿದೆ ಎಂದು ಎಂಎಸ್‌ಎನ್‌ಬಿಸಿಯ ಜನಪ್ರಿಯ ಅಮೆರಿಕನ್ ಟೆಲಿವಿಷನ್ ಪತ್ರಕರ್ತ ಜೋ ಸ್ಕಾರ್ಬರೋ ಹೇಳಿದ್ದಾರೆ. ಕರೋನವೈರಸ್ ವಿರುದ್ಧ ಪೀಳಿಗೆಯ ಯುದ್ಧ ನಡೆಯುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.