ವಾಷಿಂಗ್ಟನ್ (ಯುಎಸ್) : ತಾಲಿಬಾನ್ ಜೊತೆಗಿನ ಶಾಂತಿ ಒಪ್ಪಂದವನ್ನು ಅನುಮೋದಿಸಲು ವಿಶ್ವ ಸಂಸ್ಥೆಯ ಭದ್ರತಾ ಸಭೆಯಲ್ಲಿ ಒಪ್ಪಂದದ ಪರವಾಗಿ ಮತದಾನ ಮಾಡುವಂತೆ ಅಮೆರಿಕ ಕರೆ ನೀಡಿದೆ.
ಎರಡು ದಶಕಗಳ ಸಮರದ ಬಳಿಕ ಅಮೆರಿಕ ತಾಲಿಬಾನ್ ಜೊತೆ ಫೆ.29ರಂದು ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ಈ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸಭೆ ನಡೆದು ಬಳಿಕ ಮತದಾನದ ನಿರ್ಣಯ ಕೈಗೊಳ್ಳಲಾಗಿದೆ.
ಈ ಐತಿಹಾಸಿಕ ಒಪ್ಪಂದ ಪರವಾಗಿ ಮತದಾನ ಮಾಡಿ, ಅಪ್ಘಾನಿಸ್ತಾನಲ್ಲಿ ಶಾಂತಿ ನೆಲೆಸಲು ಈ ಒಪ್ಪಂದ ನೆರವಾಗಲಿದೆ ಎಂದು ಯುಎಸ್ ಕೇಳಿಕೊಂಡಿದೆ.