ವಾಶಿಂಗ್ಟನ್ : ಹ್ಯೂಸ್ಟನ್‌ನಲ್ಲಿರುವ ಚೀನಾದ ಕಾನ್ಸುಲೇಟ್ ಕಚೇರಿಯನ್ನು 72 ಗಂಟೆಯೊಳಗೆ ಮುಚ್ಚುವಂತೆ ಅಮೆರಿಕ ಸೂಚಿಸಿದೆ.
ಈ ಕುರಿತು ಚೀನಾ ಸರ್ಕಾರದ ಮುಖವಾಣಿ 'ಗ್ಲೋಬಲ್ ಟೈಮ್ಸ್' ಪ್ರಧಾನ ಸಂಪಾದಕ ಹು ಝಿಜಿನ್ ಟ್ವೀಟ್ ಮಾಡಿದ್ದು," ಹ್ಯೂಸ್ಟನ್‌ನಲ್ಲಿರುವ ಚೀನಾದ ಕಾನ್ಸುಲೇಟ್ ಕಚೇರಿಯನ್ನು 72 ಗಂಟೆಗಳೊಳಗಾಗಿ ಮುಚ್ಚುವಂತೆ ಅಮೆರಿಕ ತಿಳಿಸಿದೆ. ಇದೊಂದು ಹುಚ್ಚುತನದ ನಡೆ" ಎಂದಿದ್ದಾರೆ.
ಈ ಹಿಂದೆ ಚೀನಾ ಕಾನ್ಸುಲೇಟ್ ಕಚೇರಿಯಲ್ಲಿ ದಾಖಲೆಗಳನ್ನು ಸುಡಲಾಗುತ್ತಿದೆ ಎಂದು ಅಮೆರಿಕದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಹಾಂಕಾಂಗ್ ಮೇಲೆ ಚೀನಾ ಹಿಡಿತ ಯತ್ನ ಮತ್ತು ದಕ್ಷಿಣ ಚೀನಾ ಸಮುದ್ರ ವಿವಾದದ ವಿಷಯದಲ್ಲಿ ಚೀನಾ ಹಾಗೂ ಅಮೆರಿಕದ ಮಧ್ಯೆ ಶೀತಲ ಸಮರ ನಡೆಯುತ್ತಲೇ ಬಂದಿದೆ. ಈ ಬೆಳವಣಿಗೆಗಳ ಮುಂದುವರೆದ ಭಾಗವಾಗಿ ಈಗ ಕಾನ್ಸುಲೇಟ್ ಕಚೇರಿಯನ್ನು ಯುಎಸ್ ಮುಚ್ಚಿಸುತ್ತಿದೆ ಎಂದು ಹೇಳಲಾಗುತ್ತದೆ.