ಪೋರ್ಟ್ಲ್ಯಾಂಡ್ : ಅಮೆರಿಕದ ಒರೆಗಾನ್ ರಾಜ್ಯದ ಪೋರ್ಟ್ಲ್ಯಾಂಡ್ನಲ್ಲಿ ಶನಿವಾರ ನಡೆದ ನಾಲ್ಕು ಪ್ರತ್ಯೇಕ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ. ನಗರದಲ್ಲಿ ಕಳೆದ ಆರು ತಿಂಗಳಲ್ಲಿ ಗುಂಡಿನ ದಾಳಿ ಸಂಬಂಧಿತ ಹಿಂಸಾಚಾರಗಳು ಹೆಚ್ಚಳವಾಗಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೋರ್ಟ್ಲ್ಯಾಂಡ್ ಮೇಯರ್ ಟೆಡ್ ವೀಲ್ಹರ್, ಗುಂಡಿನ ದಾಳಿ ನಗರದಲ್ಲಿ ಒಂದು 'ಪಿಡುಗು' ತರ ಆಗಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು 125 ಪೊಲೀಸ್ ಅಧಿಕಾರಿಗಳು ಗುಂಡಿನ ದಾಳಿಯಿಂದ ಹತರಾಗಿದ್ದಾರೆ ಎಂದು ಹೇಳಿದ್ದಾರೆ.
ಯುಎಸ್ನ ಮಿನ್ನೆಸೋಟ ರಾಜ್ಯದ ಮಿನ್ನಿಯಾಪೊಲೀಸ್ನಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆ ಬಳಿಕ ತಿಂಗಳುಗಟ್ಟೆಲೆ ನಡೆದ ಪ್ರತಿಭಟನೆಗಳು ನಗರವನ್ನು ಕಂಗೆಡಿಸಿತ್ತು. ಅಲ್ಲದೆ ಪೊಲೀಸರ ವಿರುದ್ಧ ಹಿಂಸಾಚಾರಗಳು ನಡೆದಿದ್ದವು.
ಈ ವೇಳೆ ಗುಂಡಿನ ದಾಳಿಯನ್ನು ತಪ್ಪಿಸಲು ಪೋರ್ಟ್ಲ್ಯಾಂಡ್ ನಗರ ಆಯೋಗವು ಕೆಲ ಆರ್ಥಿಕ ಮೂಲಗಳನ್ನು ಕಡಿತಗೊಳಿಸಿತ್ತು ಮತ್ತು ಗನ್ ಮೂಲಕ ನಡೆಯುವ ಹಿಂಸಾಚಾರಗಳನ್ನು ತಡೆಯಲು ಕ್ರಮಕೈಗೊಂಡಿತ್ತು.
ಓದಿ : COVID, Delta ಬೆನ್ನಲ್ಲೇ Monkeypox ಆತಂಕ: ಸಿಡಿಸಿ ವರದಿ
ಪೋರ್ಟ್ಲ್ಯಾಂಡ್ ಪೊಲೀಸ್ ಬ್ಯೂರೋ ಮುಖ್ಯಸ್ಥ ಚಕ್ ಲೋವೆಲ್ ಗನ್ ಹಿಂಸಾಚಾರವನ್ನು ತಡೆಯಲು ತಂಡ ರಚಿಸಿದ್ದಾರೆ. ಆದರೂ 50ರಷ್ಟು ಗುಂಡಿನ ದಾಳಿಗಳು ನಡೆದಿವೆ. ಮೂಲಗಳ ಪ್ರಕಾರ ಈ ವರ್ಷ ಈವರೆಗೆ 570ರಷ್ಟು ಗುಂಡಿನ ದಾಳಿಗಳು ನಗರದಲ್ಲಿ ನಡೆದಿವೆ. ಇದು ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚು ಎನ್ನಲಾಗ್ತಿದೆ. ಈ ಪೈಕಿ ಅರ್ಧಷ್ಟು ಗ್ಯಾಂಗ್ ವಾರ್ಗಳಾಗಿವೆ.