ನ್ಯೂಯಾರ್ಕ್: ಕೊರೊನಾ ಹಿನ್ನೆಲೆಯಲ್ಲಿ ಘೋಷಣೆಯಾಗಿದ್ದ ಲಾಕ್ಡೌನ್ನಿಂದಾಗಿ ಶಾಲಾ-ಕಾಲೇಜುಗಳ ಬಾಗಿಲು ಮುಚ್ಚಲಾಯಿತು. ಇದರಿಂದಾಗಿ ಈಗಾಗಲೇ ಮಕ್ಕಳ ಶಿಕ್ಷಣದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಅಲ್ಲದೇ ಇದು ಜಾಗತಿಕವಾಗಿ 90 ದಶಲಕ್ಷ ವಿದ್ಯಾರ್ಥಿಗಳ ಕಲಿಕೆಯ ಪ್ರಗತಿ ಮತ್ತು ಯೋಗಕ್ಷೇಮದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ.
ಓದಿ: ಭಾರತದಲ್ಲಿ ವೃತ್ತಿಪರ ಶಿಕ್ಷಣಕ್ಕಾಗಿ ತರಬೇತಿ ಪ್ರಾರಂಭಿಸಿದ ಯುನೆಸ್ಕೋ
ಯುನೆಸ್ಕೋ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಜಾಗತಿಕವಾಗಿ ಡಿಸೆಂಬರ್ 1 ರ ಹೊತ್ತಿಗೆ ಸುಮಾರು 5 ಶಾಲೆಗಳಲ್ಲಿ 1 ಶಾಲೆಯ ಬಾಗಿಲು ಮುಚ್ಚಲಾಗಿದೆ. ಇದು ನವೆಂಬರ್ 1 ಕ್ಕೆ ಹೋಲಿಸಿದರೆ ಗಣನೀಯ ಏರಿಕೆ ಕಂಡಿದೆ. ಇದಕ್ಕೆ ವ್ಯತಿರಿಕ್ತವಾಗಿ, ಅಕ್ಟೋಬರ್ ತಿಂಗಳಲ್ಲಿ ಶಾಲೆ ಮುಚ್ಚುವಿಕೆಯಿಂದ ಬಳಲುತ್ತಿರುವ ಶಾಲಾ ಮಕ್ಕಳ ಸಂಖ್ಯೆ ಸುಮಾರು ಮೂರು ಪಟ್ಟು ಕಡಿಮೆಯಾಗಿದೆ.
ಈ ಸಾಂಕ್ರಾಮಿಕ ರೋಗದ ಮುಖ್ಯ ಚಾಲಕರು ಶಾಲೆಗಳಲ್ಲ ಎಂದು ಪುರಾವೆಗಳು ತೋರಿಸುತ್ತವೆ. ಆದರೂ, ಆತಂಕಕಾರಿಯಾದ ಪ್ರವೃತ್ತಿಯನ್ನು ನಾವು ನೋಡುತ್ತಿದ್ದೇವೆ. ಸರ್ಕಾರಗಳು ಶಾಲೆಗಳನ್ನು ಮುಚ್ಚುವ ಮೂಲಕ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಿವೆ. ಮಕ್ಕಳು ತಮ್ಮ ಕಲಿಕೆ, ಮಾನಸಿಕ ಮತ್ತು ದೈಹಿಕ ಯೋಗಕ್ಷೇಮ ಮತ್ತು ಸುರಕ್ಷತೆಯ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ ಎಂದು ರಾಬರ್ಟ್ ಜೆಂಕಿನ್ಸ್, ಯುನಿಸೆಫ್ ಗ್ಲೋಬಲ್ ಚೀಫ್ ಆಫ್ ಎಜುಕೇಶನ್ ಅಭಿಪ್ರಾಯಪಟ್ಟಿದ್ದಾರೆ.
ಓದಿ: ಅಪೌಷ್ಟಿಕತೆ ಕೊನೆಗೊಳಿಸಲು ಇದು ಸಕಾಲ: ಎಚ್ಚರಿಸಿದ ಜಾಗತಿಕ ಪೌಷ್ಟಿಕಾಂಶ ವರದಿ
ಶಾಲೆಗಳು ಮುಚ್ಚಿದಾಗ, ಮಕ್ಕಳು ತಮ್ಮ ಕಲಿಕೆ, ಬೆಂಬಲ ವ್ಯವಸ್ಥೆ, ಆಹಾರ ಮತ್ತು ಸುರಕ್ಷತೆಯನ್ನು ಕಳೆದುಕೊಳ್ಳುವ ಅಪಾಯ ಎದುರಿಸುತ್ತಾರೆ. ಲಕ್ಷಾಂತರ ಮಕ್ಕಳು ಒಂಬತ್ತು ತಿಂಗಳಿಗಿಂತ ಹೆಚ್ಚು ಕಾಲ ತಮ್ಮ ತರಗತಿ ಕೊಠಡಿಗಳಿಂದ ಹೊರಗುಳಿದಿದ್ದಾರೆ. ಹಲವಾರು ಶಾಲೆಗಳು ಅನಗತ್ಯವಾಗಿ ಮುಚ್ಚುತ್ತಿವೆ ಎಂದು ಯುನಿಸೆಫ್ ಆತಂಕ ವ್ಯಕ್ತಪಡಿಸಿದೆ.
191 ದೇಶಗಳ ಡೇಟಾವನ್ನು ಬಳಸಿದ ಇತ್ತೀಚಿನ ಜಾಗತಿಕ ಅಧ್ಯಯನವು ಸಮುದಾಯದಲ್ಲಿ ಶಾಲೆಯ ಸ್ಥಿತಿ ಮತ್ತು ಕೋವಿಡ್-19 ಸೋಂಕಿನ ದರಗಳ ನಡುವೆ ಯಾವುದೇ ಸಂಬಂಧವನ್ನು ತೋರಿಸಲಿಲ್ಲ. ಶಾಲೆಗಳು ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಹರಡಲು ಕೊಡುಗೆ ನೀಡುತ್ತವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ. ಯುನಿಸೆಫ್ ಶಾಲೆಗಳನ್ನು ಪುನಃ ತೆರೆಯಲು ಆದ್ಯತೆ ನೀಡುವಂತೆ ಸರ್ಕಾರಗಳನ್ನು ಒತ್ತಾಯಿಸುತ್ತಿದೆ. ಸಾಧ್ಯವಾದಷ್ಟು ಸುರಕ್ಷಿತವಾಗಿಸಲು ಶಾಲೆಗಳಲ್ಲಿ ಎಲ್ಲಾ ರೀತಿಯ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಓದಿ: ಭಾರತದ ಅರಣ್ಯ ಮಾನವ.. ನೂರಾರು ಎಕರೆ ಕಾಡು ಬೆಳೆಸಿದ ಜಾಧವ್ ಪಯೆಂಗ್..
ಯುನೆಸ್ಕೋ, ಯುಎನ್‌ಹೆಚ್‌ಸಿಆರ್, ಡಬ್ಲ್ಯುಎಫ್‌ಪಿ ಮತ್ತು ವಿಶ್ವಬ್ಯಾಂಕ್ ಜಂಟಿಯಾಗಿ ಹೊರಡಿಸಿದ ಶಾಲೆಗಳನ್ನು ಪುನರಾರಂಭಿಸುವ ಯುನಿಸೆಫ್‌ನ ಚೌಕಟ್ಟು ರಾಷ್ಟ್ರೀಯ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಪ್ರಾಯೋಗಿಕ ಸಲಹೆಯನ್ನು ನೀಡುತ್ತದೆ. ಮಾರ್ಗಸೂಚಿಗಳು ನೀತಿ ಸುಧಾರಣೆಯ ಮೇಲೆ ಕೇಂದ್ರೀಕರಿಸುತ್ತವೆ.