ETV Bharat / international

ಭಾರತಕ್ಕೆ ವಿಶ್ವಸಂಸ್ಥೆಯ ರೆಸಿಡೆಂಟ್ ಕೋ -ಆರ್ಡಿನೇಟರ್ ಆಗಿ ಶೊಂಬಿ ಶಾರ್ಪ್​ ನೇಮಕ

author img

By

Published : Nov 16, 2021, 9:43 AM IST

ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಂನಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿರುವ ಹಾಗೂ ಅರ್ಮೇನಿಯಾದಲ್ಲಿ ವಿಶ್ವಸಂಸ್ಥೆಯ ರೆಸಿಡೆಂಟ್ ಕೋಆರ್ಡಿನೇಟರ್ ಆಗಿ ಸೇವೆ ಸಲ್ಲಿಸಿದ್ದ ಶೊಂಬಿ ಅವರನ್ನು ಭಾರತದಲ್ಲಿ ವಿಶ್ವಸಂಸ್ಥೆಯ ರೆಸಿಡೆಂಟ್ ಕೋಆರ್ಡಿನೇಟರ್ ಆಗಿ ನೇಮಕ ಮಾಡಲಾಗಿದೆ.

UN Secretary General Guterres appoints Shombi Sharp as UN Resident Coordinator in India
ಭಾರತಕ್ಕೆ ವಿಶ್ವಸಂಸ್ಥೆಯ ರೆಸಿಡೆಂಟ್ ಕೋಆರ್ಡಿನೇಟರ್ ಆಗಿ ಶೊಂಬಿ ಶಾರ್ಪ್​ ನೇಮಕ

ವಿಶ್ವಸಂಸ್ಥೆ( ಅಮೆರಿಕ): ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ (Antonio Guterres) ಅವರು ಭಾರತ ಸರ್ಕಾರದ ಒಪ್ಪಿಗೆಯೊಂದಿಗೆ ಅಮೆರಿಕದ ಶೊಂಬಿ ಶಾರ್ಪ್ (Shombi Sharp) ಅವರನ್ನು ಭಾರತದಲ್ಲಿ ವಿಶ್ವಸಂಸ್ಥೆಯ ರೆಸಿಡೆಂಟ್ ಕೋಆರ್ಡಿನೇಟರ್ (UN Resident Coordinator in India) ಆಗಿ ನೇಮಕ ಮಾಡಿದ್ದಾರೆ ಎಂದು ಅಧಿಕೃತ ಹೇಳಿಕೆ ಹೊರಬಿದ್ದಿದೆ.

ಶೊಂಬಿ ಶಾರ್ಪ್ ಅವರು ಅಂತಾರಾಷ್ಟ್ರೀಯವಾಗಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ತಮ್ಮ ವೃತ್ತಿಜೀವನದ 25 ವರ್ಷಗಳಿಗಿಂತ ಹೆಚ್ಚು ಸಮಯವನ್ನು ಮೀಸಲಿಟ್ಟಿದ್ದಾರೆ. ಅವರು ವಿಶ್ವಸಂಸ್ಥೆಯಲ್ಲಿ ಹೊಸ ಸ್ಥಾನಕ್ಕೆ ಅವರನ್ನು ನೇಮಕ ಮಾಡಲಾಗಿದೆ ಎಂದು ವಿಶ್ವಸಂಸ್ಥೆಯು ಸೋಮವಾರ ಹೇಳಿಕೆ ಬಿಡುಗಡೆ ಮಾಡಿದೆ.

ಇತ್ತೀಚೆಗೆ ಅರ್ಮೇನಿಯಾದಲ್ಲಿ ಶೊಂಬಿ ಶಾರ್ಪ್ ಅವರುವ ವಿಶ್ವಸಂಸ್ಥೆಯ ರೆಸಿಡೆಂಟ್ ಕೋ -ಆರ್ಡಿನೇಟರ್ ಆಗಿ ಸೇವೆ ಸಲ್ಲಿಸಿದರು. ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಂನಲ್ಲಿ (UNDP) ಹಲವಾರು ಸ್ಥಾನಗಳನ್ನು ಅವರು ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ ಜಾರ್ಜಿಯಾದಲ್ಲಿ ಡೆಪ್ಯುಟಿ ಕೋ - ಆರ್ಡಿನೇಟರ್​, ಲೆಬನಾನ್‌ನಲ್ಲಿ ಡೆಪ್ಯೂಟಿ ಕಂಟ್ರಿ ಡೈರೆಕ್ಟರ್, UNDP ಯುರೋಪ್ ಮತ್ತು ಕಾಮನ್‌ವೆಲ್ತ್‌ನಲ್ಲೂ ಹಲವು ಹುದ್ದೆಗಳ್ನು ಶಾರ್ಪ್ ನಿರ್ವಹಿಸಿದ್ದಾರೆ.

ಶೊಂಬಿ ಶಾರ್ಪ್ ವಿಶ್ವಸಂಸ್ಥೆಗೆ ಸೇರುವ ಮೊದಲು, ಜಿಂಬಾಬ್ವೆಯಲ್ಲಿ ಅಂತಾರಾಷ್ಟ್ರೀಯ ಲಾಭರಹಿತ ಸಂಸ್ಥೆಯಾದ ಕೇರ್ ಇಂಟರ್‌ನ್ಯಾಶನಲ್​ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆರೋಗ್ಯ ಅರ್ಥಶಾಸ್ತ್ರ ವಿಭಾಗದಲ್ಲಿ ಹಲವಾರು ಕೃತಿಗಳನ್ನು ಪ್ರಕಟಿಸಿರುವ ಅವರಿಗೆ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್ (United Nations Development Programme-USAID) ನೀಡುವ 'ಪಾಲಿಸಿ ಚಾಂಪಿಯನ್' ಒಲಿದು ಬಂದಿದ್ದು ಮತ್ತು UNDP ಅಡ್ಮಿನಿಸ್ಟ್ರೇಟರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ.

ಶೊಂಬಿ ಶಾರ್ಪ್ ವಿದ್ಯಾಭ್ಯಾಸ: HIV/AIDS ಮ್ಯಾನೇಜ್​ಮೆಂಟ್​ನಲ್ಲಿ (HIV/AIDS management) ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ದಕ್ಷಿಣ ಆಫ್ರಿಕಾದ ಸ್ಟೆಲೆನ್‌ಬೋಶ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿರುವ ಅವರು ಕೊಲೊರಾಡೋ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಾನ್ಸಾಸ್ ವಿಶ್ವವಿದ್ಯಾಲಯದಿಂದ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಇದನ್ನೂ ಓದಿ: ಶಾಲೆ ಬಳಿ ಗುಂಡಿನ ದಾಳಿ, ಆರು ಮಂದಿ ವಿದ್ಯಾರ್ಥಿಗಳಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.