ETV Bharat / international

ಕೊರೊನಾ ಸಂಬಂಧಿತ 2 ನಿರ್ಣಯಗಳನ್ನು ತಿರಸ್ಕರಿಸಿದ ವಿಶ್ವಸಂಸ್ಥೆ

ಕೊರೊನಾಗೆ ಸಂಬಂಧಿಸಿದಂತೆ ರಷ್ಯಾ ಮತ್ತು ಸೌದಿ ಅರೇಬಿಯಾ ಸಲ್ಲಿಸಿದ ಎರಡು ನಿರ್ಣಯಗಳನ್ನು, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ತಿರಸ್ಕರಿಸಿದೆ.

author img

By

Published : Apr 23, 2020, 7:13 PM IST

ಯುನೈಟೆಡ್​ ನೇಷನ್ಸ್
ಯುನೈಟೆಡ್​ ನೇಷನ್ಸ್

ನ್ಯೂಯಾರ್ಕ್​​​​​​: ಕೊರೊನಾ ವೈರಸ್​ಗೆ ಸಂಬಂಧಿಸಿದಂತೆ ಎರಡು ನಿರ್ಣಯಗಳನ್ನು ರಷ್ಯಾ ಮತ್ತು ಸೌದಿ ಅರೇಬಿಯಾ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಸಲ್ಲಿಸಿದ್ದವು. ಆದ್ರೆ ಇದನ್ನು ವಿಶ್ವಸಂಸ್ಥೆ ತಿರಸ್ಕರಿಸಿದೆ. ಕೋವಿಡ್​​-19 ಗೆ ಸಂಬಂಧಿಸಿದಂತೆ ರಷ್ಯಾದ ನಿರ್ಣಯಕ್ಕೆ ಇದು ಎರಡನೇಯ ಸೋಲಾಗಿದೆ.

ಸಾಂಕ್ರಾಮಿಕ ರೋಗಗಳ ಸಮಯದಲ್ಲಿ ಸಭೆ ನಡೆಸದ ಕಾರಣ, ಹೊಸ ಮತದಾನದ ನಿಯಮಗಳಡಿ, ಕರಡು ನಿರ್ಣಯವನ್ನು ಸದಸ್ಯ ರಾಷ್ಟ್ರಗಳಿಗೆ ಪ್ರಸಾರ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಗಡುವಿನ ಮೊದಲು ಒಂದೇ ಒಂದು ದೇಶವು ನಿರ್ಣಯ ತಿರಸ್ಕರಿಸಿದ್ರೆ, ಆ ನಿರ್ಣಯವನ್ನು ಪರಿಗಣಿಸಲಾಗುವುದಿಲ್ಲ.

ರಷ್ಯಾ ಮತ್ತು ಸೌದಿಯ ಕರಡು ನಿರ್ಣಯಗಳ ವಿರುದ್ಧ ಆಕ್ಷೇಪಣೆಗಳನ್ನು ಎತ್ತಲಾಗಿದೆ ಎಂದು ಸಾಮಾನ್ಯ ಸಭೆಯ ವಕ್ತಾರ ರೀಮ್ ಅಬಾಜ್​​​​ ತಿಳಿಸಿದ್ದಾರೆ.

ಏಪ್ರಿಲ್ 2 ರಂದು ರಷ್ಯಾವೂ ವ್ಯಾಪಾರ ಯುದ್ಧಗಳು ಮತ್ತು ರಕ್ಷಣಾತ್ಮಕ ಕ್ರಮಗಳನ್ನು ತ್ಯಜಿಸಬೇಕು ಎಂದು ಕರೆ ನೀಡಿತ್ತು. ಆದ್ರೆ ಯುಎನ್​ ಸೆಕ್ಯೂರಿಟಿ ಕೌನ್ಸಿಲ್​ ಅನುಮತಿ ಇಲ್ಲದೇ, ಏಕಪಕ್ಷೀಯವಾಗಿ ಯಾವುದೇ ನಿರ್ಣಯವನ್ನು ಕೈಗೊಳ್ಳಲಾಗುವುದಿಲ್ಲ ಎಂದು ಹೇಳಿ ಇದನ್ನು ತಿರಸ್ಕರಿಸಲಾಗಿತ್ತು.

ಆದರೆ, ವಿಶ್ವಸಂಸ್ಥೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮುಖ್ಯ ಗುಂಪಿನ ಏಪ್ರಿಲ್ 3ರ ಹೇಳಿಕೆಯನ್ನು ಅದು ಸ್ವಾಗತಿಸಿತ್ತು, ಇದು ಅಭಿವೃದ್ಧಿಶೀಲ ರಾಷ್ಟ್ರಗಳ ವಿರುದ್ಧ ಏಕಪಕ್ಷೀಯ ದಬ್ಬಾಳಿಕೆಯ ಆರ್ಥಿಕ ಕ್ರಮಗಳ ಬಳಕೆಯನ್ನು ತೊಡೆದುಹಾಕಲು ತುರ್ತು ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಅಂತಾರಾಷ್ಟ್ರೀಯ ಸಮುದಾಯದ ಕರೆಯನ್ನು ಒಳಗೊಂಡಿದೆ.

ಸೌದಿ ಅರೇಬಿಯಾ ಪ್ರಸ್ತುತ 20 ಪ್ರಮುಖ ಜಾಗತಿಕ ಆರ್ಥಿಕತೆಗಳ ಗುಂಪಿನ ಅಧ್ಯಕ್ಷತೆಯನ್ನು ಹೊಂದಿದೆ. ಅದರ ಕರಡು COVID-19 ರ ವಿರುದ್ಧ ಹೋರಾಡಲು ಪರಿಣಾಮಕಾರಿ ಮತ್ತು ಸಂಘಟಿತ ಕ್ರಮಕ್ಕಾಗಿ ಮಾರ್ಚ್ 26 ರ ಶೃಂಗಸಭೆಯ ಕರೆ ಸ್ವಾಗತಿಸಲಾಗಿತ್ತು. ಸಾಮಾನ್ಯ ಸಭೆ ಈ ಹಿಂದೆ COVID-19 ಕುರಿತು ಎರಡು ನಿರ್ಣಯಗಳನ್ನು ಅಂಗೀಕರಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.