ETV Bharat / international

12 ಸಾವಿರಕ್ಕೂ ಹೆಚ್ಚು ಮಂದಿಗೆ ಲಿಬಿಯಾದಲ್ಲಿ ಅಕ್ರಮ ಬಂಧನ: ವಿಶ್ವಸಂಸ್ಥೆ ಕಳವಳ - UNSMIL mission in Libya

ಲಿಬಿಯಾದ ನಿರಾಶ್ರಿತ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ, ಲೈಂಗಿಕ ಕಿರುಕುಳ ನಡೆಯುತ್ತಿದೆ. ಲಿಬಿಯಾ ಗೃಹ ಸಚಿವಾಲಯದ ಅಡಿ ಬರುವ ಅಕ್ರಮ ವಲಸೆ ನಿಯಂತ್ರಣ ನಿರ್ದೇಶಾನಾಲಯದ ಅಧಿಕಾರಿಗಳೂ ಮಾನವ ಕಳ್ಳಸಾಗಣೆ, ಅತ್ಯಾಚಾರದಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಗುಟೆರಸ್ ಹೇಳಿದ್ದಾರೆ.

UN chief: Over 12,000 detainees held officially in Libya
12 ಸಾವಿರಕ್ಕೂ ಹೆಚ್ಚು ಮಂದಿಗೆ ಲಿಬಿಯಾದಲ್ಲಿ ಅಕ್ರಮ ಬಂಧನ: ವಿಶ್ವಸಂಸ್ಥೆ
author img

By

Published : Jan 18, 2022, 8:47 AM IST

ವಿಶ್ವಸಂಸ್ಥೆ: ಲಿಬಿಯಾದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಅಲ್ಲಿನ 27 ಜೈಲುಗಳಲ್ಲಿ 12 ಸಾವಿರಕ್ಕೂ ಹೆಚ್ಚು ಬಂಧಿತರನ್ನು ಇರಿಸಲಾಗಿದೆ. ಸಾವಿರಾರು ಮಂದಿಗೆ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮಾಹಿತಿ ನೀಡಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಲಿಬಿಯಾದ ಸಶಸ್ತ್ರ ಪಡೆಗಳು ನಿರಾಶ್ರಿತರು, ವಲಸಿಗರ ಮೇಲೆ ಸಾಕಷ್ಟು ನಿರ್ಬಂಧ ವಿಧಿಸಿವೆ. ದೌರ್ಜನ್ಯ, ಚಿತ್ರಹಿಂಸೆ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗುತ್ತಿದ್ದು, ಈ ಕುರಿತಂತೆ ಯುಎನ್‌ಎಸ್‌ಎಂಐಎಲ್ ಎಂದು ಕರೆಯಲ್ಪಡುವ ಯುಎನ್ ಮಿಷನ್ ಅನೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳುವುದನ್ನು ಮುಂದುವರೆಸಿದೆ ಎಂದು ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.

ಬಂಧಿತರು 12 ಸಾವಿರ ಮಂದಿ ಎಂಬುದು ಲಿಬಿಯಾದ ಅಧಿಕಾರಿಗಳು ನೀಡಿದ ಮಾಹಿತಿಯಾಗಿದೆ. ಅದಕ್ಕಿಂತ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಅಲ್ಲಿನ ವಲಸಿಗರು, ನಿರಾಶ್ರಿತರ ಮಾನವ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ವಿಚಾರದಲ್ಲಿ ನಾನು ಕಳವಳಕ್ಕೆ ಒಳಗಾಗಿದ್ದೇನೆ ಎಂದು ಆಂಟೋನಿಯೋ ಗುಟೆರಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ.

ಇದಷ್ಟೇ ಅಲ್ಲದೇ ಲಿಬಿಯಾದ ನಿರಾಶ್ರಿತ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ, ಲೈಂಗಿಕ ಕಿರುಕುಳ ನಡೆಯುತ್ತಿದೆ. ಲಿಬಿಯಾ ಗೃಹ ಸಚಿವಾಲಯದ ಅಡಿ ಬರುವ ಅಕ್ರಮ ವಲಸೆ ನಿಯಂತ್ರಣ ನಿರ್ದೇಶಾನಾಲಯದ ಅಧಿಕಾರಿಗಳೂ ಮಾನವ ಕಳ್ಳಸಾಗಣೆ, ಅತ್ಯಾಚಾರದಂತ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಗುಟೆರಸ್ ಹೇಳಿದ್ದಾರೆ.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ

ವಿಶ್ವಸಂಸ್ಥೆಯ ಲಿಬಿಯಾ ಮಿಷನ್ ಈ ಕುರಿತು ಅನೇಕ ಪ್ರಕರಣಗಳನ್ನು ದಾಖಲಿಸಿದೆ. ಮಿಟಿಗಾ ಜೈಲು ಮತ್ತು ಇತರ ಬಂಧನ ಕೇಂದ್ರಗಳಲ್ಲಿ (detention centers) ಇಂತಹ ಪ್ರಕರಣಗಳು ನಡೆಯುತ್ತಿವೆ.

ಲಿಬಿಯಾದ ರಾಜಧಾನಿ ಟ್ರಿಪೋಲಿಯಲ್ಲಿ ಮತ್ತು ಅಲ್​ ಝವಿಯಾಹ್ ನಗರದಲ್ಲಿರುವ ಹಲವಾರು ಬಂಧನ ಕೇಂದ್ರಗಳಲ್ಲಿ ಸುಮಾರು 30 ನೈಜಿರಿಯಾದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಮತ್ತು ಕಳ್ಳಸಾಗಣೆ ಮಾಡಲಾಗಿದೆ ಎಂಬ ವಿಶ್ವಾಸಾರ್ಹ ಮಾಹಿತಿಯನ್ನು ವಿಶ್ವಸಂಸ್ಥೆಯ ಮಿಷನ್ ಪಡೆದುಕೊಂಡಿದೆ ಎಂದು ಗುಟೆರಸ್ ಹೇಳಿದ್ದಾರೆ.

ಮಾನವ ಕಳ್ಳಸಾಗಣೆದಾರರು ಅಲ್ಲಿನ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಆಗಾಗ ಕೆಲವು ಕುಟುಂಬಗಳನ್ನು ರಬ್ಬರ್ ಮತ್ತು ಮರದ ದೋಣಿಗಳ ಮೂಲಕ ಕಳ್ಳಸಾಗಣೆ ಮಾಡಲಾಗುತ್ತದೆ. 2021ರ ಡಿಸೆಂಬರ್ 14ರವರೆಗೆ 30,990 ಮಂದಿಯನ್ನು ತಡೆದು ಲಿಬಿಯಾಗೆ ಹಿಂದಿರುಗಿಸಲಾಗಿದೆ. ಪ್ರಯಾಣದ ವೇಳೆ ಸುಮಾರು ದೋಣಿಗಳು ಅಪಘಾತಕ್ಕೆ ಈಡಾಗಿ ಸುಮಾರು 1,300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಅಥವಾ ಕಣ್ಮರೆಯಾಗಿದ್ದಾರೆ.

ಇದನ್ನೂ ಓದಿ: ಚೀನಾದಲ್ಲಿ ಸತತ 5ನೇ ವರ್ಷವೂ ಜನನ ಪ್ರಮಾಣ ಕುಸಿತ: 2021ರಲ್ಲಿ ಹುಟ್ಟಿದ್ದು ಕೇವಲ 4.80 ಲಕ್ಷ ಮಂದಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.