ETV Bharat / international

ಉಕ್ರೇನ್‌ ಸರ್ಕಾರಿ ಇಲಾಖೆಗಳು, ಬ್ಯಾಂಕಿಂಗ್ ವೆಬ್‌ಸೈಟ್‌ಗಳ ಮೇಲೆ ವ್ಯಾಪಕ ಸೈಬರ್‌ ದಾಳಿ

ಇಂದು ಬೆಳಗ್ಗೆ ಉಕ್ರೇನ್ ಸರ್ಕಾರಿ ಇಲಾಖೆಗಳು ಮತ್ತು ಪ್ರಮುಖ ಬ್ಯಾಂಕ್‌ಗಳ ವೆಬ್‌ಸೈಟ್‌ಗಳ ಮೇಲೆ ಸೈಬರ್ ಅಟ್ಯಾಕ್ ನಡೆದಿದೆ. ಪರಿಣಾಮ ಉಕ್ರೇನಿಯನ್ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಿವೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.

ಸೈಬರ್ ದಾಳಿ
ಸೈಬರ್ ದಾಳಿ
author img

By

Published : Feb 24, 2022, 12:14 PM IST

ಕೀವ್‌(ಉಕ್ರೇನ್): ಉಕ್ರೇನ್ ಮೇಲೆ ರಷ್ಯಾ ಈಗಾಗಲೇ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದೆ. ಈ ಬೆನ್ನಲ್ಲೇ ಉಕ್ರೇನ್‌ ಸರ್ಕಾರಿ ಮತ್ತು ಬ್ಯಾಂಕಿಂಗ್ ವೆಬ್‌ಸೈಟ್‌ಗಳ ಮೇಲೆ ಸೈಬರ್​ ದಾಳಿ ನಡೆಸಲಾಗಿದೆ ಎಂದು ಉಕ್ರೇನ್ ಸೈಬರ್‌ ಸೆಕ್ಯುರಿಟಿ ಸಂಶೋಧಕರು ಹೇಳಿದ್ದಾರೆ.

ಗುರುವಾರ ಬೆಳಗ್ಗೆ ಉಕ್ರೇನ್ ಸರ್ಕಾರಿ ಏಜೆನ್ಸಿಗಳು ಮತ್ತು ಪ್ರಮುಖ ಬ್ಯಾಂಕ್‌ಗಳ ವೆಬ್‌ಸೈಟ್‌ಗಳ ಮೇಲೆ ಸೈಬರ್ ಅಟ್ಯಾಕ್ ಮಾಡಿದ್ದಾರೆ. ಪರಿಣಾಮ ಉಕ್ರೇನಿಯನ್ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ ಎಂದು ತಿಳಿದುಬಂದಿದೆ.

ಉಕ್ರೇನ್ ಗುರಿಯಾಗಿಸಿಕೊಂಡು ಹಲವಾರು ಹ್ಯಾಕಿಂಗ್ ಕಾರ್ಯಾಚರಣೆಗಳು ನಡೆದಿದ್ದು, ಸರ್ಕಾರಿ ಬ್ಯಾಂಕ್​ಗಳು ಮತ್ತು ಸರ್ಕಾರಿ ಏಜೆನ್ಸಿಗಳ ಮೇಲೆ ಸೈಬರ್ ದಾಳಿ ಮಾಡಲಾಗಿದೆ. ಉಕ್ರೇನ್ ರಕ್ಷಣಾ ಸಚಿವಾಲಯ, ವಿದೇಶಾಂಗ ಸಚಿವಾಲಯ, ಸಂಸ್ಕೃತಿ ಸಚಿವಾಲಯ ವೆಬ್‌ಸೈಟ್‌ ಮೇಲೆ ದಾಳಿ ಮಾಡಿದ್ದರಿಂದ ಸೈಟ್‌ಗಳು ಲೋಡ್ ಆಗಲಿಲ್ಲ. ಮಾಹಿತಿ ಸೋರಿಕೆಯಾದ ಕಂಪ್ಯೂಟರ್‌ಗಳನ್ನ ನೆರೆಯ ಲಾಟ್ವಿಯಾ ಮತ್ತು ಲಿಥುವೇನಿಯಾದಲ್ಲಿವೆ ಎಂದು ಉಕ್ರೇನ್ ಸೈಬರ್‌ ಸೆಕ್ಯುರಿಟಿ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ರಷ್ಯಾ ಆಕ್ರಮಣ ಶುರು: ಉಕ್ರೇನ್​ ರಾಜಧಾನಿ, ನಗರಗಳಲ್ಲಿ ಭಾರಿ ಪ್ರಮಾಣದ ಸ್ಫೋಟ- ವಿಡಿಯೋ

'ರಷ್ಯಾ ಕಳೆದ ಹಲವು ತಿಂಗಳಿನಿಂದ ಸೈಬರ್​ ದಾಳಿ ಕುರಿತು ಯೋಜಿಸಿದೆ. ಆದ್ದರಿಂದ ಈ ದಾಳಿಯ ಹಿಂದೆ ಎಷ್ಟು ಸಂಸ್ಥೆಗಳು ಅಥವಾ ಏಜೆನ್ಸಿಗಳು ಇವೆ ಎಂದು ಹೇಳುವುದು ಕಷ್ಟ' ಎಂದು ಸೋಫೋಸ್‌ ಸೈಬರ್‌ ಸೆಕ್ಯುರಿಟಿ ಸಂಸ್ಥೆಯ ಪ್ರಧಾನ ಸಂಶೋಧನಾ ವಿಜ್ಞಾನಿ ಚೆಸ್ಟರ್ ವಿಸ್ನಿವ್ಸ್ಕಿಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.