ಲಂಡನ್/ಯುಕೆ : ಬ್ರಿಟನ್ನಲ್ಲಿ ಭಾನುವಾರ 1,882 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 4,387,820ಕ್ಕೆ ಏರಿಕೆಯಾಗಿದೆ.
ಹಾಗೆಯೇ 10 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಈವರೆಗೆ ಕೊರೊನಾ ವೈರಸ್ನಿಂದ ಮೃತಪಟ್ಟವರ ಸಂಖ್ಯೆ 127,270ಕ್ಕೇರಿದೆ.
ಈ ಸಾವಿನ ಸಂಖ್ಯೆ ಕೇವಲ ಪಾಸಿಟಿವ್ ದೃಢಪಟ್ಟ 28 ದಿನಗಳೊಳಗೆ ಮೃತಪಟ್ಟವರನ್ನು ಮಾತ್ರ ಒಳಗೊಂಡಿದೆ ಎಂದು ನ್ಯೂಸ್ ಏಜೆನ್ಸಿಯೊಂದು ತಿಳಿಸಿದೆ.
ಇತ್ತೀಚಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ, 32.8 ದಶಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ.
ಓದಿ: ಇಂದು ರಾತ್ರಿಯಿಂದ ಒಂದು ವಾರ ದೆಹಲಿಯಲ್ಲಿ 'ಲಾಕ್ಡೌನ್': ಸಿಎಂ ಕೇಜ್ರಿವಾಲ್