ETV Bharat / international

ಟ್ರಂಪ್ ವಾಗ್ದಂಡನೆ ವಿಚಾರಣೆ ಆರಂಭ: ಅತಿ ಭೀಕರ ಅಪರಾಧ ಎಂದ ಸೆನೆಟರ್ಸ್​​ - ದೋಷಾರೋಪಣೆ ವಿಚಾರಣೆ

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ವಾಗ್ದಂಡನೆ ವಿಚಾರಣೆ ಆರಂಭಗೊಂಡಿದ್ದು, ವಕೀಲ ಬುಚ್​ ಬೋವರ್ಸ್ ಅವರು ಟ್ರಂಪ್​ ಪರ ವಾದಿಸುತ್ತಿದ್ದಾರೆ.

Trumps trial starting
ಟ್ರಂಪ್ ವಾಗ್ದಂಡನೆ ವಿಚಾರಣೆ ಆರಂಭ
author img

By

Published : Feb 9, 2021, 1:10 PM IST

ವಾಷಿಂಗ್ಟನ್: ಇಂದಿನಿಂದ ಯುಎಸ್​ ಕಾಂಗ್ರೆಸ್​ನ ಮೇಲ್ಮನೆಯಾದ ಸೆನೆಟ್​ನಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಮೇಲಿನ ದೋಷಾರೋಪಣೆ ವಿಚಾರಣೆ ಆರಂಭವಾಗಿದೆ.

ಇತ್ತ ಚುನಾವಣೆ ರದ್ದುಗೊಳಿಸುವ ಸಲುವಾಗಿ ಕ್ಯಾಪಿಟಲ್‌ ಹಿಲ್​​ನಲ್ಲಿ ಹಿಂಸಾಚಾರ ಪ್ರಚೋದಿಸಿದ್ದು, ತಪ್ಪಲ್ಲ ಎಂದು ಟ್ರಂಪ್​ ಪರ ವಕೀಲ ಬುಚ್​ ಬೋವರ್ಸ್ ವಾದಿಸುತ್ತಿದ್ದಾರೆ. ಅತ್ತ ಪ್ರಾಸಿಕ್ಯೂಟರ್‌ಗಳು, 'ಅತ್ಯಂತ ಭೀಕರವಾದ ಸಾಂವಿಧಾನಿಕ ಅಪರಾಧ'ಕ್ಕೆ ಟ್ರಂಪ್​​ ಶಿಕ್ಷೆಗೊಳಗಾಗಬೇಕು ಎಂದು ಹೇಳಿದ್ದಾರೆ.

ಇನ್ನು ಸೆನೆಟ್​ ಸದಸ್ಯರೇ ನ್ಯಾಯಾಧೀಶರಾಗಿದ್ದು, ಕ್ಯಾಪಿಟಲ್‌ ಹಿಲ್ ಹಿಂಸಾಚಾರದ ದೃಶ್ಯದ ಗ್ರಾಫಿಕ್ ವಿಡಿಯೋಗಳನ್ನು ಪ್ರದರ್ಶಿಸಲು ಇಟ್ಟುಕೊಂಡಿದ್ದಾರೆ. ಹೀಗಾಗಿ ಟ್ರಂಪ್​ ಪರವಾಗಿ ಯಾವುದೇ ಸಾಕ್ಷಿಗಳಿಲ್ಲ ಎಂಬ ಮಾಹಿತಿಯಿದೆ.

ಇದನ್ನೂ ಓದಿ: ಕೈ ನಾಯಕನ ಕಾರ್ಯವೈಖರಿ ನೆನೆದು ಭಾವುಕರಾದ ಮೋದಿ: 'ಗುಲಾಮ್​​ಗೆ ಸಲಾಂ' ಎಂದ ಅಠಾವಳೆ

ಜನವರಿ 6 ರಂದು ಕ್ಯಾಪಿಟಲ್​ ಹಿಲ್ ಮೇಲೆ​ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಯಲ್ಲಿ ಮಹಿಳೆ, ಪೊಲೀಸ್​ ಸಿಬ್ಬಂದಿ ಸೇರಿ ಐವರು ಮೃತಪಟ್ಟಿದ್ದರು. ದಾಳಿ ನಡೆಸಲು ತಮ್ಮ ಬೆಂಬಲಿಗರಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಟ್ರಂಪ್ ವಿರುದ್ಧ ದೋಷಾರೋಪಣೆ ಮಾಡಲಾಗಿದ್ದು, ಇಂದಿನಿಂದ ವಿಚಾರಣೆ ಆರಂಭವಾಗಿವೆ.

ಅಮೆರಿಕದ ಇತಿಹಾಸದಲ್ಲಿಯೇ ಎರಡು ಬಾರಿ ವಾಗ್ದಂಡನೆಗೆ ಒಳಗಾದ ಅಧ್ಯಕ್ಷ ಎಂಬ ಅಪಕೀರ್ತಿಗೆ ಡೊನಾಲ್ಡ್ ಟ್ರಂಪ್ ಒಳಗಾಗಿದ್ದಾರೆ. ಈ ಆರೋಪ ಸಾಬೀತಾದರೆ ಟ್ರಂಪ್​​ ಇನ್ನು ಮುಂದೆ ಯಾವುದೇ ಸಾರ್ವಜನಿಕ ಹುದ್ದೆ ಅಲಂಕರಿಸುವಂತಿಲ್ಲ.

ನಿಲುವಳಿಗೆ ಆಗುತ್ತಾ ಪಾಸ್​?

ಟ್ರಂಪ್​ ವಿರುದ್ಧದ ವಾಗ್ದಂಡನೆ ಪಾಸ್​ ಆಗಬೇಕಾದರೆ ಮೂರನೇ ಒಂದರಷ್ಟು ಬಹುಮತಬೇಕು. ಆದರೆ ಸೆನೆಟ್​​ನಲ್ಲಿ ಡೆಮಾಕ್ರಟಿಕ್​ ಪಕ್ಷದ 50 ಹಾಗೂ ರಿಪಬ್ಲಿಕ್​​ನ 50 ಸದಸ್ಯರಿದ್ದಾರೆ. ನಿಲುವಳಿ ಅಂಗೀಕಾರಕ್ಕೆ 67 ಮತಗಳ ಅಗತ್ಯ ಇದೆ. ಆದರೆ ಅಷ್ಟೊಂದು ಸದಸ್ಯರ ಬಲ ಡೆಮಾಕ್ರಟ್​ಗಳ ಬಳಿ ಇಲ್ಲ.

ಒಂದೊಮ್ಮೆ ಆರೋಪಕ್ಕೆ ಟ್ರಂಪ್​ ಅವರ ರಿಪಬ್ಲಿಕ್​ನ 17 ಸದಸ್ಯರು ಮಾಜಿ ಅಧ್ಯಕ್ಷರ ವಿರುದ್ಧ ಮತಚಲಾಯಿಸಬೇಕಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.