ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಸ್ಯ ಪ್ರಿಯರೂ ಹೌದು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ಮಾಡುವಾಗ ಮೋದಿ ಅವರ ಕಾಲೆಳೆದು ತಮಾಷೆ ಮಾಡಿದ್ದರು.
ಟ್ರಂಪ್ ಅವರು ಭಾರತಕ್ಕೆ ಕೆಲವೇ ಗಂಟೆಗಳ ಮುನ್ನ ಬಾಹುಬಲಿ ಅವತಾರ ತಾಳಿದ್ದಾರೆ. ಇದೇನಪ್ಪಾ ಟ್ರಂಪ್ ಅವರು ಸೂಟ್ ಧರಿಸಿ ಭಾರತಕ್ಕೆ ಬರುತ್ತಿಲ್ವಾ ಅಂತೀರಾ?
-
Look so forward to being with my great friends in INDIA! https://t.co/1jdk3AW6fG
— Donald J. Trump (@realDonaldTrump) February 22, 2020 " class="align-text-top noRightClick twitterSection" data="
">Look so forward to being with my great friends in INDIA! https://t.co/1jdk3AW6fG
— Donald J. Trump (@realDonaldTrump) February 22, 2020Look so forward to being with my great friends in INDIA! https://t.co/1jdk3AW6fG
— Donald J. Trump (@realDonaldTrump) February 22, 2020
ವಿಷಯ ಅದಲ್ಲ. ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡುವ ಮುನ್ನ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ರೋಲ್ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಟ್ರಂಪ್ ಅವರನ್ನು ಬಾಹುಬಲಿಯಂತೆ ಮಾರ್ಫ್ ಮಾಡಲಾಗಿರುವ ಈ ದೃಶ್ಯ ತುಣುಕನ್ನು ನೋಡಿ ಎಂಜಾಯ್ ಮಾಡಿರುವ ದೊಡ್ಡಣ್ಣ, 'ಭಾರತದಲ್ಲಿರುವ ನನ್ನ ಉತ್ತಮ ಸ್ನೇಹಿತರೊಂದಿಗೆ ಇರಲು ಎದುರುನೋಡುತ್ತಿದ್ದೇನೆ' ಎಂದು ಬರೆದುಕೋಂಡಿದ್ದಾರೆ.
ಸೋಲ್ ಮೀಮ್ಸ್ ಎನ್ನುವ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದ್ದು, ಬಾಹುಬಲಿ ಮೊದಲ ಭಾಗದಲ್ಲಿ ಪ್ರಭಾಸ್ ಅವರ ಮುಖಕ್ಕೆ ಟ್ರಂಪ್ ಮುಖವನ್ನು ಅಂಟಿಸಿ ಈ ವಿಡಿಯೋ ಮಾಡಲಾಗಿದೆ.
ಟ್ವಿಟರ್ ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಟ್ರಂಪ್ ಪತ್ನಿ ಮಲಾನಿಯಾ ಅವರನ್ನು ಯಾರೋ ದುಷ್ಕರ್ಮಿಗಳು ಅಪಹರಣ ಮಾಡುತ್ತಾರೆ. ಟ್ರಂಪ್ ಅವರು ಬಾಹುಬಲಿಯಂತೆ ಹೋರಾಡಿ ತಮ್ಮ ಪತ್ನಿಯನ್ನು ಬಿಡಿಸಿಕೊಂಡು ಬರುತ್ತಾರೆ.
ಬಾಹುಬಲಿ ಚಿತ್ರದಲ್ಲಿನ ಯುದ್ಧ ಮತ್ತು ಇತರೆ ಕೆಲ ದೃಶ್ಯಗಳನ್ನ ಬಳಸಿಕೊಂಡು ಈ ವಿಡಿಯೋ ಸಿದ್ದಪಡಿಸಲಾಗಿದ್ದು, ಟ್ವಿಟ್ಟರ್ನಲ್ಲಿ ಫುಲ್ ವೈರಲ್ ಆಗಿದೆ. ಇಲ್ಲಿಯವರೆಗೆ 1.2 ಮಿಲಿಯನ್ ಜನರು ಈ ವಿಡಿಯೋ ವೀಕ್ಷಣೆ ಮಾಡಿದ್ದು, 60 ಸಾವಿರ ಜನರು ಮೆಚ್ಚಿಕೊಂಡಿದ್ದಾರೆ.