ETV Bharat / international

ಆಸ್ಪತ್ರೆಯಿಂದ ಶ್ವೇತಭವನಕ್ಕೆ ಬಂದ ಟ್ರಂಪ್​ : ವಿಶ್ವದರ್ಜೆಯ ಚಿಕಿತ್ಸೆ ನೀಡುವುದಾಗಿ ಹೇಳಿದ ಕಾನ್ಲೆ - trump latest news

ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರದಲ್ಲಿ ಟ್ರಂಪ್ ಉತ್ತಮ ಚಿಕಿತ್ಸೆಗೆ ಒಳಗಾಗಿದ್ದರು. ಅವರು ಇನ್ನೂ ಕೂಡ ಕೋವಿಡ್​ ನಿಂದ ಸಂಪೂರ್ಣವಾಗಿ ಗುಣಮುಖರಾಗಿಲ್ಲದ ಹಿನ್ನೆಲೆ ಅವರಿಗೆ ವಿಶ್ವದರ್ಜೆಯ ಚಿಕಿತ್ಸಾ ಆರೈಕೆ ಇರಲಿದೆ ಎಂದು ಶ್ವೇತಭವನದ ವೈದ್ಯ ಡಾ. ಸೀನ್ ಕಾನ್ಲೆ ಹೇಳಿದ್ದಾರೆ.

ಆಸ್ಪತ್ರೆಯಿಂದ ಶ್ವೇತಭವನಕ್ಕೆ ಬಂದ ಟ್ರಂಪ್
ಆಸ್ಪತ್ರೆಯಿಂದ ಶ್ವೇತಭವನಕ್ಕೆ ಬಂದ ಟ್ರಂಪ್
author img

By

Published : Oct 6, 2020, 6:54 AM IST

ವಾಷಿಂಗ್ಟನ್ ಡಿಸಿ(ಯುಎಸ್ಎ): ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರದಿಂದ ಬಿಡುಗಡೆಗೊಂಡ ನಂತರ ಸೇನಾ ಹೆಲಿಕಾಪ್ಟರ್​ನಲ್ಲಿ ಶ್ವೇತಭವನಕ್ಕೆ ಮರಳಿದ್ದಾರೆ. ಅಲ್ಲಿ ಅವರು ಕೋವಿಡ್​-19ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಅಧ್ಯಕ್ಷ ಟ್ರಂಪ್ ಸಂಪೂರ್ಣವಾಗಿ ಇನ್ನೂ ಕೂಡ ಕೊರೊನಾದಿಂದ ಗುಣಮುಖರಾಗಿಲ್ಲ ಎಂದು ಶ್ವೇತಭವನದ ವೈದ್ಯ ಡಾ. ಸೀನ್ ಕಾನ್ಲೆ ಹೇಳಿದ್ದರೂ ಕೂಡ ಟ್ರಂಪ್ ಶ್ವೇತಭವನವನ್ನು ತಲುಪಿದ ಕೂಡಲೇ ತಮ್ಮ ಮಾಸ್ಕ್​ ಕೂಡ ತೆಗೆದಿದ್ದಾರೆ. ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರದಲ್ಲಿ ಟ್ರಂಪ್, ಉತ್ತಮ ಚಿಕಿತ್ಸೆಗೆ ಒಳಗಾಗಿದ್ದರು. ಅವರು ಇನ್ನೂ ಕೂಡ ಕೋವಿಡ್​​ನಿಂದ ಸಂಪೂರ್ಣವಾಗಿ ಗುಣಮುಖರಾಗಿಲ್ಲದ ಹಿನ್ನೆಲೆ ಅವರಿಗೆ ವಿಶ್ವದರ್ಜೆಯ ಚಿಕಿತ್ಸಾ ಆರೈಕೆ ಇರಲಿದೆ ಎಂದು ಎಂದು ಶ್ವೇತಭವನದ ವೈದ್ಯ ಡಾ. ಸೀನ್ ಕಾನ್ಲೆ ಹೇಳಿದ್ದಾರೆ.

ನಾನು ಇಂದು 6:30 ಕ್ಕೆ ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರದಿಂದ ಹೊರಡುತ್ತೇನೆ. ನಿಜವಾಗಿಯೂ ಒಳ್ಳೆಯದಾಗಿದೆ. ಕೋವಿಡ್ ಬಗ್ಗೆ ಭಯ ಪಡಬೇಡಿ. ಅದು ನಿಮ್ಮ ಜೀವನದಲ್ಲಿ ಪ್ರಾಬಲ್ಯ ಸಾಧಿಸಲು ಬಿಡಬೇಡಿ ಎಂದು ಆಸ್ಪತ್ರೆಯಿಂದ ಹೊರಡುವ ಮೊದಲು ಟ್ರಂಪ್​ ಟ್ವೀಟ್​ ಮಾಡಿದ್ದರು.

ಕೇಯ್ಲಿ ಮೆಕ್​ಗೂ ಕೊರೊನಾ:

ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್‌ಗೆ ಕೋವಿಡ್​ ದೃಢಪಟ್ಟ ನಂತರ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕೇಯ್ಲಿ ಮೆಕ್ ಎನಾನಿ ಅವರಿಗೂ ಕೂಡ ಕೊರೊನಾ ಪಾಸಿಟಿವ್​ ಕಂಡು ಬಂದಿದೆ. ತಮಗೆ ಕೊರೊನಾ ಪಾಸಿಟಿವ್​ ಬಂದಿದ್ದು, ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ಮೆಕ್ ಎನಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದೂರದಿಂದಲೇ ಅಮೆರಿಕದ ಜನರ ಪರವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಎನಾನಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.