ನ್ಯೂಯಾರ್ಕ್: ಕೊರೊನಾ ಸೋಂಕಿತರ ಚಿಕಿತ್ಸೆಗೆ ಅವಶ್ಯವಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ತಕ್ಷಣವೇ ಅಮೆರಿಕಗೆ ಕಳುಹಿಸಿ ಕೊಡುವಂತೆ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಮನವಿ ಮಾಡಿದ್ದಾರೆ.
ಶನಿವಾರ ಬೆಳಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ತುರ್ತಾಗಿ ಈ ಮಾತ್ರೆಗಳನ್ನು ಕಳುಹಿಸಿ ಕೊಡುವಂತೆ ತಿಳಿಸಿದರು.
ವಿಶ್ವದಲ್ಲೇ ಭಾರತ ಅತೀ ಹೆಚ್ಚು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಉತ್ಪಾದಿಸುತ್ತಿದೆ. ಮಲೇರಿಯಾ ಹಾಗೂ ಕ್ಷಯರೋಗದಿಂದ ರೋಗಿಗಳನ್ನು ಗುಣಪಡಿಸಲು ಈ ಮಾತ್ರೆಗಳ ಅವಶ್ಯಕತೆ ತುಂಬಾ ಇದೆ.
ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ರೋಗನಿರೋಧಕವಾಗಿ ಬಳಕೆ ಮಾಡಲಾಗುತ್ತಿದೆ. ಔಷಧ ದಾಸ್ತಾನು ಕೊರತೆಯಾಗುವುದನ್ನು ತಡೆಯಲು ಕಳೆದ ತಿಂಗಳು ಭಾರತದಿಂದ ಹೊರದೇಶಗಳಿಗೆ ಇದರ ರಫ್ತು ನಿಲ್ಲಿಸಲಾಗಿತ್ತು.