ETV Bharat / international

ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ.. ಟ್ರಂಪ್‌ ಒಬ್ಬರೇ ಗೈರಾಗ್ತಿರೋದಲ್ಲ, ಈ ಹಿಂದೆಯೂ..

ಈಗ ಡೊನಾಲ್ಡ್ ಟ್ರಂಪ್ ಶ್ವೇತಭವನದ ಸಮಾರಂಭಕ್ಕೆ ಹಾಜರಾಗಲು ನಿರಾಕರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜೋ ಬೈಡನ್, ಇದು ಅಚ್ಚರಿ ಪಡುವ ವಿಚಾರವೇನಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ..

author img

By

Published : Jan 18, 2021, 4:24 PM IST

Trump joins tiny club of Inauguration Day absentees
ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಟ್ರಂಪ್ ಗೈರು

ನ್ಯೂಯಾರ್ಕ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರದಿಂದ ನಿರ್ಗಮಿಸಲು ದಿನಗಣನೆ ಆರಂಭವಾಗಿದೆ. ಜನವರಿ 2020ರಂದು ಜೋ ಬೈಡನ್​ಗೆ ಅಧಿಕಾರ ಹಸ್ತಾಂತರ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗಲಿರುವ ಕೆಲವೇ ಕೆಲವು ನಿರ್ಗಮಿತ ಅಧ್ಯಕ್ಷರ ಪಟ್ಟಿಗೆ ಡೊನಾಲ್ಡ್ ಟ್ರಂಪ್ ಸೇರ್ಪಡೆಯಾಗಲಿದ್ದಾರೆ.

ಅಮೆರಿಕದ ಕ್ಯಾಪಿಟಲ್​ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಭಿಯೋಗಕ್ಕೆ ಗುರಿಯಾಗಿ ತಮ್ಮ ಅಧಿಕಾರಾವಧಿಯಲ್ಲಿ ಎರಡು ಬಾರಿ ಮಹಾಭಿಯೋಗಕ್ಕೆ ಗುರಿಯಾದ ಏಕೈಕ ಅಮೆರಿಕ ಅಧ್ಯಕ್ಷರೆಂಬ ಕುಖ್ಯಾತಿಯನ್ನೂ ಟ್ರಂಪ್ ಕಟ್ಟಿಕೊಳ್ಳಲಿದ್ದಾರೆ. ಡೊನಾಲ್ಡ್ ಟ್ರಂಪ್​ ಈ ಮೊದಲು 1801ರಲ್ಲಿ ಥಾಮಸ್ ಜಫರ್​ಸನ್ ಅಮೆರಿಕದಲ್ಲಿ ಅಧಿಕಾರ ಸ್ವೀಕರಿಸಬೇಕಾದ್ರೆ, ಅಧ್ಯಕ್ಷ ಜಾನ್ ಅಡ್ಯಮ್ಸ್​ ಸಮಾರಂಭಕ್ಕೆ ಹಾಜರಾಗಿರಲಿಲ್ಲ.

1829ರಲ್ಲಿ ಚುನಾವಣಾ ದ್ವೇಷ ಹಾಗೂ ವೈಯಕ್ತಿಕ ವಿಚಾರಗಳಿಂದ ಅಧ್ಯಕ್ಷ ಜಾನ್​​ ಕ್ವಿನ್ಸಿ ಅಡ್ಯಮ್ಸ್​ ಅವರು ಆ್ಯಂಡ್ರೂ ಜಾಕ್ಸನ್ ಅವರ ಪದಗ್ರಹಣ ಸಮಾರಂಭಕ್ಕೆ ಗೈರಾಗಿದ್ದರು. ಉದ್ಘಾಟನಾ ಸಮಾರಂಭಕ್ಕೂ ಮೊದಲು ಆ್ಯಂಡ್ರೂ ಜಾಕ್ಸನ್ ಅವರ ಪತ್ನಿ ಮೃತಪಟ್ಟಿದ್ದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಯಿತು.

ಇದನ್ನೂ ಓದಿ: ರಿಪಬ್ಲಿಕನ್ ಯುಎಸ್ ಕಾಂಗ್ರೆಸ್ ವುಮನ್ ಗ್ರೀನ್ ಟ್ವಿಟರ್​​ ಖಾತೆ ತಾತ್ಕಾಲಿಕ ಸ್ಥಗಿತ

1869ರಲ್ಲಿ ಜಾನ್ಸನ್ ತಾವೇ ಉಲ್ಯೇಸಸ್ ಎಸ್​ ಗ್ರಾಂಟ್ ಅವರ ಪದಗ್ರಹಣ ಉದ್ಘಾಟನಾ ಸಮಾರಂಭಕ್ಕೆ ಗೈರು ಹಾಜರಾಗಿದ್ದರು. ಗೆರಾಲ್ಡ್ ಫೋರ್ಡ್ ಅವರ ಪ್ರಮಾಣವಚನ ಸಮಾರಂಭದ ವೇಳೆ ರಿಚರ್ಡ್ ನಿಕ್ಸನ್ ಶ್ವೇತ ಭವನದ ಮುಂದಿನ ಲಾನ್ ಪ್ರದೇಶದಿಂದ ಹೆಲಿಕಾಪ್ಟರ್ ತೆಗೆದುಕೊಂಡು ಹೋಗಿದ್ದು, ಕೂಡ ಹೆಚ್ಚು ವಿವಾದಕ್ಕೀಡಾಗಿತ್ತು. ಇವರು ವಾಟರ್​ಗೇಟ್ ಹಗರಣದ ಹಿನ್ನೆಲೆ ರಾಜೀನಾಮೆ ನೀಡಿದ್ದರು.

ಈಗ ಡೊನಾಲ್ಡ್ ಟ್ರಂಪ್ ಶ್ವೇತಭವನದ ಸಮಾರಂಭಕ್ಕೆ ಹಾಜರಾಗಲು ನಿರಾಕರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜೋ ಬೈಡನ್, ಇದು ಅಚ್ಚರಿ ಪಡುವ ವಿಚಾರವೇನಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.