ಮಿಯಾಮಿ ( ಅಮೆರಿಕ): ಡೊನಾಲ್ಡ್ ಟ್ರಂಪ್ ತಮ್ಮ ಅಧಿಕಾರಾವಧಿಯಲ್ಲಿ ಫ್ಲೋರಿಡಾದ ಪಾಮ್ ಬೀಚ್ ನಗರದ ಮಾರ್ - ಎ - ಲಾಗೋದಲ್ಲಿ ನಿರ್ಮಾಣ ಮಾಡಿದ್ದ ಹೆಲಿಪ್ಯಾಡ್ ಅನ್ನು ಶೀಘ್ರವೇ ಧ್ವಂಸ ಮಾಡಲಾಗುತ್ತದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಫೆಬ್ರವರಿ 2017ರಲ್ಲಿ ಈ ಹೆಲಿಪ್ಯಾಡ್ ಅನ್ನು ನಿರ್ಮಾಣ ಮಾಡಲಾಗಿದ್ದು, ಎಂಟು ಇಂಚು ಆಳಕ್ಕೆ ಮತ್ತು 50 ಅಡಿ ಉದ್ದದ ಕಾಂಕ್ರಿಟ್ ಸ್ಲ್ಯಾಬ್ ಮೂಲಕ ನಿರ್ಮಾಣ ಮಾಡಲಾಗಿದೆ. ಈಗ ಆ ಹೆಲಿಪ್ಯಾಡ್ ಅನ್ನು ಧ್ವಂಸಗೊಳಿಸುವ ಮಾತುಗಳು ಕೇಳಿಬರುತ್ತಿವೆ.
ಪಾಮ್ ಬೀಚ್ ನಗರದ ಮ್ಯಾನೇಜರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಗರ ಕ್ಲಬ್ನ ಪ್ರತಿನಿಧಿಗಳು ಕೆಲವು ವಾರಗಳ ಹಿಂದೆ ಹೆಲಿಪ್ಯಾಡ್ ಕೆಡವಲು ಅನುಮತಿ ಪಡೆದುಕೊಂಡಿದ್ದು, ಇನ್ನೂ ದಿನಾಂಕ ನಿಗದಿ ಮಾಡಿಲ್ಲ.
ಇದನ್ನೂ ಓದಿ: ಫೆಬ್ರವರಿ 6 ರಂದು ಮೂರು ಗಂಟೆಗಳ ಕಾಲ 'ಚಕ್ಕಾ ಜಾಮ್': ಟಿಕಾಯತ್ ಘೋಷಣೆ
ಪಾಮ್ ಬೀಚ್ನಲ್ಲಿ ಯಾವುದೇ ರೀತಿಯ ಹೆಲಿಕಾಪ್ಟರ್ಗಳಿಗೆ ಪ್ರವೇಶ ಇರುವುದಿಲ್ಲ. ಅದರ ಜೊತೆಗೆ ಹೆಲಿಪ್ಯಾಡ್ಗಳನ್ನೂ ನಿರ್ಮಿಸುವಂತಿಲ್ಲ. ಆದರೆ, ವ್ಯವಹಾರದ ವಿಚಾರವಾಗಿ ಅಧಿಕಾರಿಗಳಿಗಾಗಿ ಈ ಹೆಲಿಕಾಪ್ಟರ್ಗಳ ಬಳಕೆಗೆ ಅವಕಾಶ ಇತ್ತು.
ಇದಕ್ಕಾಗಿ ಟ್ರಂಪ್ ಅಧಿಕಾರಾವಧಿಯಲ್ಲಿ ಹೆಲಿಪ್ಯಾಡ್ ಅನ್ನು ನಿರ್ಮಿಸಲಾಗಿದ್ದು, ಪಾಮ್ ಬೀಚ್ನಲ್ಲಿ ಅಧಿಕಾರಿಗಳು ಹಿಂದಿನ ತಿಂಗಳು ಮಾರ್ - ಎ - ಲಾಗೋನಲ್ಲಿ ನಿವಾಸ ಬಳಿ ಪರಿಶೀಲನೆ ನಡೆಸಿತ್ತು. ಅಲ್ಲಿನ ಜನಪ್ರತಿನಿಧಿಗಳು ಹೆಲಿಪ್ಯಾಡ್ ಧ್ವಂಸಗೊಳಿಸಲು ಅನುಮತಿ ಕೇಳಿದ್ದಾರೆ ಎಂದು ಪಾಮ್ ಬೀಚ್ ಡೈಲಿ ನ್ಯೂಸ್ ವರದಿ ಮಾಡಿದೆ.