ವಾಷಿಂಗ್ಟನ್ (ಯುಎಸ್): ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರ ಸೇವೆ ಇಂದಿಗೆ ಕೊನೆಯಾಗಿದೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹಾಗೆಯೇ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕ ಕ್ರಿಸ್ಟೋಫರ್ ಸಿ ಮಿಲ್ಲರ್ ಅವರು ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವುದಾಗಿ ಟ್ವಿಟರ್ನಲ್ಲಿ ಟ್ರಂಪ್ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಅತ್ಯಂತ ಗೌರವಾನ್ವಿತ ನಿರ್ದೇಶಕರಾದ ಕ್ರಿಸ್ಟೋಫರ್ ಸಿ. ಮಿಲ್ಲರ್ ಅವರು ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಕ್ರಿಸ್ ದೊಡ್ಡ ಕೆಲಸ ಮಾಡುತ್ತಾರೆ. ಮಾರ್ಕ್ ಎಸ್ಪರ್ ಅವರ ಸೇವೆ ಇಂದಿಗೆ ಕೊನೆಯಾಗಿದೆ. ಅವರ ಸೇವೆಗಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಭಿನ್ನಾಭಿಪ್ರಾಯಗಳಿಗೆ ಸಂಬಂಧಿಸಿದಂತೆ ಜೇಮ್ಸ್ ಮ್ಯಾಟಿಸ್ ರಾಜೀನಾಮೆ ನೀಡಿದ ನಂತರ ಎಸ್ಪರ್ ಟ್ರಂಪ್ ಅವರ ಎರಡನೇ ರಕ್ಷಣಾ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು.