ವಾಷಿಂಗ್ಟನ್: ಕನ್ಸರ್ವೇಟಿವ್ ವಕೀಲೆ ಸಿಡ್ನಿ ಪೊವೆಲ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ ಬಗ್ಗೆ ಅನೇಕ ತಪ್ಪಾದ ಹೇಳಿಕೆಗಳನ್ನು ನೀಡಿದ್ದರಿಂದ ಡೊನಾಲ್ಡ್ ಟ್ರಂಪ್ ಕ್ಯಾಂಪ್ನ ಕಾನೂನು ತಂಡವು ಅವರಿಂದ ಅಂತರ ಕಾಯ್ದುಕೊಂಡಿದೆ.
ಸಿಡ್ನಿ ಪೊವೆಲ್ ಸ್ವಂತವಾಗಿ ಕಾನೂನು ಅಭ್ಯಾಸ ಮಾಡುತ್ತಿದ್ದಾರೆ. ಅವರು ಟ್ರಂಪ್ ಕಾನೂನು ತಂಡದ ಸದಸ್ಯರಲ್ಲ. ಅವರು ಅಧ್ಯಕ್ಷರ ಪರ ವಕೀಲರಲ್ಲ ಎಂದು ಗಿಯುಲಿಯಾನಿ ಮತ್ತು ಟ್ರಂಪ್ ಪರ ಮತ್ತೊಬ್ಬ ವಕೀಲರಾದ ಜೆನ್ನಾ ಎಲ್ಲಿಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 3 ರ ಚುನಾವಣೆಯ ಫಲಿತಾಂಶಗಳನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ರಾಜ್ಯಗಳಲ್ಲಿ ಪ್ರಕರಣಗಳ ಮೇಲೆ ಪ್ರಕರಣವನ್ನು ಕಳೆದುಕೊಂಡಿರುವ ಕಾನೂನು ತಂಡಕ್ಕೆ ಈ ಹೇಳಿಕೆಯು ಮತ್ತಷ್ಟು ಗೊಂದಲವನ್ನುಂಟು ಮಾಡುತ್ತದೆ.
ಕಾನೂನು ಸಂಸ್ಥೆಗಳು ಪ್ರಕರಣಗಳಿಂದ ಹಿಂದೆ ಸರಿದವು. ಇತ್ತೀಚೆಗೆ ಫೆಡರಲ್ ನ್ಯಾಯಾಧೀಶರು ಪೆನ್ಸಿಲ್ವೇನಿಯಾದಲ್ಲಿ ಮತಗಳ ಪ್ರಮಾಣೀಕರಣವನ್ನು ತಡೆಯುವ ಟ್ರಂಪ್ ಕ್ಯಾಂಪೇನ್ನ ಪ್ರಯತ್ನವನ್ನು ಶನಿವಾರ ರಾತ್ರಿ ತಳ್ಳಿಹಾಕಿದರು. ಇದು ಟ್ರಂಪ್ಗೆ ಹಿನ್ನಡೆ ಉಂಟುಮಾಡಿದೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪೊವೆಲ್, ಮತದಾನದ ಅಕ್ರಮಗಳ ಪುರಾವೆಗಳನ್ನು ಒದಗಿಸುವ ಸರ್ವರ್ ಜರ್ಮನಿಯಲ್ಲಿದೆ ಎಂದು ಸೂಚಿಸಿದ್ದರು. ಜಾರ್ಜಿಯಾ ಮತ್ತು ಇತರ ರಾಜ್ಯಗಳು ಬಳಸುವ ಮತದಾನ ತಂತ್ರಾಂಶ ನಿರ್ದೇಶಿಸಲಾಗಿದೆ. ಡೊನಾಲ್ಡ್ ಟ್ರಂಪ್ ಅವರ ಮತವನ್ನೂ ಜೋ ಬೈಡನ್ ಪರವಾಗಿ ಬದಲಾಯಿಸಲಾಗಿದೆ ಎಂದಿದ್ದರು.