ETV Bharat / international

ಚೀನಾ ಪರ WHO ಎಂದ ಟ್ರಂಪ್​; ಜಾಗತಿಕ ಆರೋಗ್ಯ ಸಂಸ್ಥೆಗೆ ಹಣಕಾಸು ನೆರವು ರದ್ದತಿ ಬೆದರಿಕೆ

ಕೊರೊನಾ ಬಗ್ಗೆ ಚೀನಾ ನೀಡಿದ ಅಧಿಕೃತ ಪ್ರಮಾಣಕ್ಕಿಂತ ಹೆಚ್ಚಿನ ಜನರು ಅಲ್ಲಿ ಸಾವನ್ನಪ್ಪಿದ್ದಾರೆ ಎಂದು ನಂಬಲು ಹಲವಾರು ಕಾರಣಗಳಿದ್ದರೂ, ವೈರಸ್​ ವಿಚಾರವಾಗಿ ಚೀನಾದ ಪಾರದರ್ಶಕತೆಯನ್ನು WHO ಶ್ಲಾಘಿಸಿದೆ. ಇದು ಡೊನಾಲ್ಡ್‌ ಟ್ರಂಪ್‌ ಸಿಟ್ಟಿಗೆ ಕಾರಣವಾಗಿದೆ.

Donald Trump
ಡೊನಾಲ್ಡ್​ ಟ್ರಂಪ್
author img

By

Published : Apr 8, 2020, 1:06 PM IST

ವಾಷಿಂಗ್ಟನ್: ಜಾಗತಿಕ ಸಂಘಟನೆಗಳು 'ಚೀನಾ ಕೇಂದ್ರಿತ' ಎಂದು ಆರೋಪಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ವಿಶ್ವ ಆರೋಗ್ಯ ಸಂಘಟನೆ(WHO)ಗೆ ಅಮೆರಿಕದ ಹಣವನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಏಕಾಏಕಿ ಕೊರೊನಾ ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಲು ಕೆಲ ತಿಂಗಳುಗಳ ಹಿಂದೆ ಬೀಜಿಂಗ್ ತೆಗೆದುಕೊಂಡ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಅನುಸರಿಸುತ್ತಿದೆ ಎಂದು ಟ್ರಂಪ್​ ಒತ್ತಿ ಹೇಳಿದ್ದಾರೆ. ಹೀಗಾಗಿ ವಿಶ್ವ ಆರೋಗ್ಯ ಸಂಘಟನೆಯ ಕ್ರಮಕ್ಕೆ ಆಕ್ರೋಶಗೊಂಡಿರುವ ಟ್ರಂಪ್​ ಅಮೆರಿಕದಿಂದ ಸಂಘಟನೆಗೆ ನೀಡುವ ಹಣವನ್ನು ಸ್ಥಗಿತಗೊಳಿಸುವ ಬೆದರಿಕೆ ನೀಡಿದ್ದಾರೆ.

ಚೀನಾ ನೀಡಿದ ಅಧಿಕೃತ ಪ್ರಮಾಣಕ್ಕಿಂತ ಹೆಚ್ಚಿನ ಜನರು ಅಲ್ಲಿ ವೈರಸ್​ನಿಂದ ಸಾವನ್ನಪ್ಪಿದ್ದಾರೆ ಎಂದು ನಂಬಲು ಹಲವಾರು ಕಾರಣಗಳಿದ್ದರೂ, ವೈರಸ್​ ವಿಚಾರವಾಗಿ ಚೀನದ ಪಾರದರ್ಶಕತೆಯನ್ನು WHO ಶ್ಲಾಘಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.