ETV Bharat / international

ಟೊಂಗಾ ಸಾಗರದಾಳದಲ್ಲಿ ಜ್ವಾಲಾಮುಖಿ ಸ್ಫೋಟ: ಸುನಾಮಿ ಭೀತಿಯಿಂದ ರಾಷ್ಟ್ರಗಳು ಪಾರು - ಜ್ವಾಲಾಮುಖಿ ಸ್ಫೋಟ

ಪೆಸಿಫಿಕ್ ಸಾಗರ ವ್ಯಾಪ್ತಿಯಲ್ಲಿರುವ ಟೊಂಗಾ ಬಳಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಪರಿಣಾಮ ಅಲೆಗಳು ತೀರಕ್ಕೆ ಬಂದು ಬಡಿಯಲಾರಂಭಿಸಿದ್ದು, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಜಪಾನ್, ಅಮೇರಿಕನ್ ಸಮೋವಾ, ಯುಎಸ್ ಪಶ್ಚಿಮ ಕರಾವಳಿ ಮತ್ತು ಹವಾಯಿಯಲ್ಲಿ ಸುನಾಮಿ ಭೀತಿ ಉಂಟಾಗಿತ್ತು.

ಜ್ವಾಲಾಮುಖಿ ಸ್ಫೋಟ
ಜ್ವಾಲಾಮುಖಿ ಸ್ಫೋಟ
author img

By

Published : Jan 16, 2022, 9:58 AM IST

ನ್ಯೂಜಿಲ್ಯಾಂಡ್: ಪೆಸಿಫಿಕ್ ಸಾಗರದ ಟೊಂಗಾ ಬಳಿ ಸಾಗರದಾಳದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ದೊಡ್ಡ ದೊಡ್ಡ ಅಲೆಗಳು ಕಟ್ಟಡಕ್ಕೆ ಬಂದು ಅಪ್ಪಳಿಸಿದ್ದು, ಸುನಾಮಿ ಭೀತಿ ಉಂಟಾಗಿತ್ತು.

  • The ongoing eruption of Tonga's Hunga Tonga volcano appears to be the most powerful and violent eruption of the 21st century. pic.twitter.com/VK0A1kQUSq

    — US StormWatch (@US_Stormwatch) January 15, 2022 " class="align-text-top noRightClick twitterSection" data=" ">

Hunga Tonga-Hunga Ha’apai ಎನ್ನುವ ಜ್ವಾಲಾಮುಖಿಯು ದ್ವೀಪದಲ್ಲಿ ನೀರಿನೊಳಗಿನಿಂದ ಸ್ಫೋಟಗೊಂಡಿದೆ. ಬೃಹತ್​ ಗಾತ್ರದ ಸುನಾಮಿ ಅಲೆಗಳು ಟೋಂಗಾದ ಮುಖ್ಯ ದ್ವೀಪವಾದ ಟೊಂಗಟಾಪುಗೆ ಅಪ್ಪಳಿಸಿದ್ದು ನಂತರ ಅಲ್ಲಿನ ಸ್ಥಳೀಯರನ್ನು ಸ್ಥಳಾಂತರಿಸಲಾಗಿತ್ತು.

ಟೊಂಗಾ ಹವಾಮಾನ ಇಲಾಖೆ ಈಗಾಗಲೇ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಜಪಾನ್, ಅಮೇರಿಕನ್ ಸಮೋವಾ, ಯುಎಸ್ ಪಶ್ಚಿಮ ಕರಾವಳಿ ಮತ್ತು ಹವಾಯಿಯಲ್ಲಿ ಸುನಾಮಿ ಎಚ್ಚರಿಕೆ ನೀಡಿದ್ದು, ಸದ್ಯ ಬಂದಿರುವ ವರದಿಗಳ ಪ್ರಕಾರ ದೇಶಗಳು ಸುನಾಮಿ ಭೀತಿಯಿಂದ ಪಾರಾಗಿವೆ.

ಟೋಂಗಾದಿಂದ 10,000 ಮೈಲುಗಳಷ್ಟು ದೂರದಲ್ಲಿರುವ ಯುಕೆ ಮೆಟ್ ಕಚೇರಿ ಕೂಡ ಜ್ವಾಲಾಮುಖಿ ಸ್ಫೋಟ ಅಲೆಗಳ ಕುರಿತು ವರದಿ ಮಾಡಿದೆ. ಜ್ವಾಲಾಮುಖಿ ಸ್ಪೋಟಗೊಂಡು ಅನಿಲ ಚಿಮ್ಮಿದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್​​ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.